- Thursday
- November 21st, 2024
ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾದ ಅಬ್ದುಲ್ ಅಜಿಮ್ ರವರು ಜ. 4 ರಂದು ಮಡಿಕೇರಿಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಸುಳ್ಯ ತಾಲೂಕು ಅಲ್ಪಸಂಖ್ಯಾತರ ದೊಡ್ಡ ಪ್ರಮಾಣದ ವಿವಿದ್ದೋದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಮಹಮ್ಮದ್ ಇಕ್ಬಾಲ್ ಎಲಿಮಲೆ ಅವರ ನೇತೃತ್ವದಲ್ಲಿ ಉಪಾಧ್ಯಕ್ಷರಾದ ಫ್ಯಾನ್ಸಿ ಮೊಯ್ದೀನ್ ಸಂಘದ ಮಾಜಿ ಅಧ್ಯಕ್ಷರು ಹಾಲಿ ನಿರ್ದೇಶಕರಾದ ಆರ್ ಕೆ...
ಮತ್ತು ಬರುವ ಸ್ಪ್ರೇ ಸಿಂಪಡಿಸಿ ಅಪಹರಣಕ್ಕೆ ಯತ್ನಿಸಿದ್ದಾರೆ ಎಂದು ಹೇಳಿಕೆ ನೀಡಿದ್ದಳು ಶಾಲಾ ಬಾಲಕಿ, ಇದೀಗ ಪೋಲೀಸರ ತನಿಖೆಯಿಂದ ಇದು ಕಟ್ಟು ಕಥೆ ಎಂದು ಬಯಲಾಗಿ ಪ್ರಕರಣಕ್ಕೆ ರೋಚಕ ತಿರುವು ಪಡೆದಿದೆ. ಘಟನೆ ವಿವರ :ಅಮರಮುಡ್ನೂರು ಗ್ರಾಮದ ಕುಕ್ಕುಜಡ್ಕದ ಹಾಸನಡ್ಕ ಆನೆಕಾರ್ ಎಂಬಲ್ಲಿ ಶಾಲಾ ಬಾಲಕಿಯೊಬ್ಬಳು ಸ್ಮೃತಿ ತಪ್ಪಿ ರಸ್ತೆಯಲ್ಲಿ ಬಿದ್ದಿದ್ದಳು. ಆ ಬಾಲಕಿಯನ್ನು ಸ್ಥಳೀಯರು...
ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿರುವ ವಿಶ್ವನಾಥ್ ಕಮಿಲ ಡಿ.31 ಭೂಸೇನೆಯಿಂದ ನಿವೃತ್ತಿಯಾದರು. ತನ್ನ ವಿದ್ಯಾಭ್ಯಾಸವನ್ನು ಕಿರಿಯ ಪ್ರಾಥಮಿಕ ಶಾಲೆ ಕಮಿಲ ನಂತರ ಹಿರಿಯ ಪ್ರಾಥಮಿಕ ಶಾಲೆ ಗುತ್ತಿಗಾರು, ಪ್ರೌಢಶಾಲೆ ಗುತ್ತಿಗಾರು ಮತ್ತು ಪಿಯುಸಿ ಯನ್ನು ಗುತ್ತಿಗಾರಿನಲ್ಲಿ ಮಾಡಿದ್ದಾರೆ. ಪಿ.ಯು.ಸಿ ಓದುತ್ತಿರುವಾಗಲೇ ಭಾರತೀಯ ಸೇನೆಯಯಲ್ಲಿರುವ ಹುದ್ದೆಗಳಿಗೆ ಪ್ರಯತ್ನಿಸುತ್ತಿದ್ದರು. ಅದೇ ರೀತಿ ೨೦೦೩ರಂದು ತನ್ನ ಕಠಿಣ ಪರಿಶ್ರಮದಿಂದ ಭಾರತೀಯ...
ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು ಯುವಕ ಮಂಡಲ ಕನಕಮಜಲು ಇವುಗಳ ಆಶ್ರಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಗೌರವಾರ್ಪಣೆ ಜ.8 ರಂದು ಕನಕಮಜಲು ಮಾ.ಹಿ.ಪ್ರಾ.ಶಾಲೆಯ ರಂಗಚಾವಡಿಯಲ್ಲಿ ನಡೆಯಲಿದೆ. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಎಸ್. ಅಂಗಾರ ವಹಿಸಲಿದ್ದಾರೆ. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಲಕ್ಷ್ಮೀ ನಾರಾಯಣ ಕಜೆಗದ್ದೆ, ಜಿ.ಪಂ.ಸದಸ್ಯೆ ಪುಷ್ಪಾವತಿ ಬಾಳಿಲ, ಜಾಲ್ಸೂರು...
ಆರ್ಯಭಟ ಪ್ರಶಸ್ತಿ ಪುರಸ್ಕೃತ ಜೇಸಿ ರವಿ ಕಕ್ಕೆಪದವುರವರಿಗೆ 2020 ರ ಸಾಲಿನ ಜೇಸಿರತ್ನ ಪುರಸ್ಕಾರ ಲಭಿಸಿದೆ. ಸುಬ್ರಹ್ಮಣ್ಯದಲ್ಲಿ ಉದ್ಯಮಿಯಾಗಿ ನೂರಾರು ಜನರಿಗೆ ಅನ್ನದಾತರಾಗಿರುವ ಇವರು ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ನೀಡುವುದು ಕಲಿಕಾ ಸಾಮಾಗ್ರಿಗಳನ್ನು ನೀಡುವುದು, ಅಶಕ್ತರಿಗೆ ಆರ್ಥಿಕ ನೆರವು, ಆಹಾರ ಸಾಮಾಗ್ರಿ ನೀಡುವುದು, ಅನಾರೋಗ್ಯ ಪೀಡಿತರ ಆರೈಕೆ, ಸುಬ್ರಹ್ಮಣ್ಯ ಪರಿಸರದಲ್ಲಿ ಸ್ವಚ್ಚತಾ ಕಾರ್ಯ ಸೇರಿದಂತೆ ಹಲವು...
ಮರ್ಕಂಜದ ದೊಡ್ಡಿಹಿತ್ಲು ಸಮೀಪ ರಬ್ಬರ್ ಟ್ಯಾಪಿಂಗ್ ಕಾರ್ಮಿಕ ಮರವೇರಿ ಕುಳಿತ ಘಟನೆ ಇಂದು ನಡೆದಿದೆ. ಸ್ಥಳೀಯರು ಪೋಲೀಸರಿಗೆ ಮಾಹಿತಿ ನೀಡಿದ್ದಾರೆ. ಆತ ಯಾರು, ಮರವೇರಲು ಕಾರಣವೇನು ಎಂದು ತಿಳಿದುಬಂದಿಲ್ಲ. ಸ್ಥಳಕ್ಕೆ ಪೋಲೀಸರು ಹಾಗೂ ಅಗ್ನಿಶಾಮಕ ದಳವರು ಆಗಮಿಸಿದ್ದಾರೆ ಎಂದು ತಿಳಿದುಬಂದಿದೆ.
ಅಮರ ಮುಡ್ನೂರು ಗ್ರಾಮದ ಪೈಲಾರು ಪಡ್ಪುಮನೆ ಶ್ರೀಮತಿ ಕುಸುಮ ಮತ್ತು ದಿ.ಬಾಲಕೃಷ್ಣ ಗೌಡರ ಪುತ್ರಿ ಧನ್ಯಶ್ರೀ ಯ ವಿವಾಹವು ಪುತ್ತೂರು ತಾ. ಬಲ್ನಾಡು ಗ್ರಾಮದ ಕೋಡಿಯಡ್ಕ ಗಂಗಾಧರ ಗೌಡರ ಪುತ್ರ ಸನತ್ ಕುಮಾರ್ ರೊಂದಿಗೆ ಜ.3 ರಂದು ಕಂಜರ್ಪಣೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಹಾಗೂ ಅತಿಥಿ ಸತ್ಕಾರ ಕಾರ್ಯಕ್ರಮ ವಧುವಿನ ಮನೆಯಲ್ಲಿ ನಡೆಯಿತು.
ದೇವಚಳ್ಳ ಗ್ರಾಮದ ದೇವ ಆನಂದ ಬೆಳ್ಚಪ್ಪಾಡ ರವರ ಪುತ್ರ ಸಂಪಾಜೆ ವಲಯ ಅರಣ್ಯ ಇಲಾಖಾ ಸಿಬ್ಬಂದಿ ಕಾರ್ತಿಕ್ ರ ವಿವಾಹ ನಿಶ್ಚಿತಾರ್ಥವು ಎಣ್ಮೂರು ಗ್ರಾಮದ ನಿಂತಿಕಲ್ಲು ನಾರಾಯಣ ಬೆಳ್ಚಪ್ಪಾಡ ರವರ ಪುತ್ರಿ ಪುತ್ರಿ ಕಾವ್ಯರೊಂದಿಗೆ ಜ.3 ರಂದು ವಧುವಿನ ಮನೆಯಲ್ಲಿ ನಡೆಯಿತು.
ಸುಳ್ಯದ ಅಮರ ಶಿಲ್ಪಿ ಡಾ. ಕುರುಂಜಿ ವೆಂಕಟ್ರಮಣ ಗೌಡರ ಜನ್ಮ ದಿನಾಚರಣೆ ಪ್ರಯುಕ್ತ ವಿದ್ಯಾರ್ಥಿಗಳಿಗೆ ಸಾಹಿತ್ಯಿಕ ಸ್ಪರ್ಧೆಗಳ ಉದ್ಘಾಟನೆಯು ಜ 3 ರಂದು ಕೆವಿಜಿ ಕಾನೂನು ಕಾಲೇಜಿನಲ್ಲಿ ನಡೆಯಿತು.ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಡಾ.ಹರಪ್ರಸಾದ್ ತುದಿಯಡ್ಕ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು.ಜ.23 ರಂದು ನಡೆಯಲಿರುವ ಕೆ.ವಿ.ಜಿ.ಸುಳ್ಯ ಹಬ್ಬದ ಆಮಂತ್ರಣವನ್ನು ಸಮಿತಿಯ...
ಸುಳ್ಯದಿಂದ ಪಾಣತ್ತೂರು ಕಡೆಗೆ ಸಂಚರಿಸುತ್ತಿದ್ದ ಖಾಸಗಿ ಬಸ್ಸೊಂದು ಪಲ್ಟಿಯಾದ ಪರಿಣಾಮ ಏಳು ಜನರು ದುರ್ಮರಣಕ್ಕೀಡಾದ ಘಟನೆ ಇಂದು ನಡೆದಿದೆ. ಹಲವಾರು ಜನರಿಗೆ ಗಂಭೀರ ಗಾಯಗಳಾಗಿದೆ ಎಂದು ತಿಳಿದುಬಂದಿದೆ.ಕೇರಳ ಕರ್ನಾಟಕ ಗಡಿಯ ಪಾಣತ್ತೂರು ಸಮೀಪದ ಗಡಿಗುಡ್ಡೆ ಎಂಬಲ್ಲಿ ನಡೆದಿದೆ. ಪುತ್ತೂರಿನ ಖಾಸಗಿ ಬಸ್ ಮದುವೆ ಸಮಾರಂಭಕ್ಕೆಂದು ಜನರನ್ನು ಕರೆದೊಯ್ಯುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈಶ್ವರಮಂಗಲದಿಂದ...
Loading posts...
All posts loaded
No more posts