- Sunday
- November 24th, 2024
ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ಉಪನ್ಯಾಸಕರಾದ ಶ್ರೀಮತಿ ಶ್ರುತಿ ಬಿ ಎಚ್ ಅವರು ಕರ್ನಾಟಕ ರಾಜ್ಯ ಉಪನ್ಯಾಸಕರ ಆರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಕೊಲ್ಲಮೊಗ್ರು ಗ್ರಾಮ ಪಂಚಾಯತಿ ಸದಸ್ಯ ಅಶ್ವಥ್ ಯಾಲದಾಳು ಅವರ ಪತ್ನಿ.
ಎಡಮಂಗಲ ಜಾಲ್ತಾರು ತರವಾಡು ಮನೆಯಲ್ಲಿ ಕೊಲ್ಲರ್ನೂಜಿ ಕುಟುಂಬದ ಧರ್ಮದೈವ ಹಾಗೂ ಉಪದೈವಗಳಿಗೆ ಧರ್ಮ ನಡಾವಳಿ ಕಾರ್ಯಕ್ರಮವು ಜ.08 ಹಾಗೂ ಜ.09 ರಂದು ಜರುಗಿತು.ಬೆಳಗ್ಗೆ ಗಣಹೋಮ ನೆರವೇರಿತು. ತದನಂತರ ರಾತ್ರಿಯಿಂದ ಸತ್ಯದೇವತೆ, ಕಲ್ಲುರ್ಟಿ, ವರ್ಣಾರ ಪಂಜುರ್ಲಿ, ರುದ್ರಚಾಮುಂಡಿ, ಗುಳಿಗ ಹಾಗೂ ಉಪದೈವಗಳಿಗೆ ನೇಮ ನಡಾವಳಿ ನಡೆಯಿತು. ಈ ಸಂದರ್ಭದಲ್ಲಿ ಕುಟುಂಬಸ್ಥರು, ಬಂಧು - ಮಿತ್ರರು ಹಾಗೂ ಊರವರು...
ಸುಳ್ಯ ಕೊಶಮಟ್ಟಂ ಫೈನಾನ್ಸ್ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದ ಪ್ರಮೋದ್ ಕುಂಟುಕಾನ ಎಂಬ ಯುವಕ ಕಳೆದ ಒಂದು ವಾರದಿಂದ ನಾಪತ್ತೆಯಾಗಿದ್ದರು. ಯುವಕನ ಮನೆಯವರು ಕಾಣೆಯಾದ ದಿನದಂದು ಸುಳ್ಯ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತದನಂತರ ಮನೆಯವರು ಮತ್ತು ಸ್ಥಳೀಯರು ಹುಡುಕಾಟ ನಡೆಸಿದರೂ ಎಲ್ಲಿಯೂ ಕೂಡ ಪತ್ತೆಯಾಗಿರಲಿಲ್ಲ. ಇಂದು ಬೆಳಿಗ್ಗೆ ಅವರ ಮನೆಯ ಸಮೀಪ ಕಾಡಿನಲ್ಲಿ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ...
ಪ್ರಸಿದ್ಧ ಪುಣ್ಯಕ್ಷೇತ್ರ ಸುಬ್ರಹ್ಮಣ್ಯದಲ್ಲಿ ಉತ್ತಮ ವೈದ್ಯರ ಅವಶ್ಯಕತೆ ಅತೀ ಹೆಚ್ಚಾಗಿದ್ದು ,ಇದೀಗ ಸುಬ್ರಹ್ಮಣ್ಯದ ಕಾರ್ತಿಕೆಯ ವಸತಿಗೃಹ ಕಟ್ಟಡದಲ್ಲಿ ಡಾ. ಆದಿತ್ಯ ಚನಿಲ ರವರು ಹೋಮಿಯೋಪತಿ ಕ್ಲಿನಿಕ್ ಆರಂಭಿಸಿದ್ದಾರೆ. ಡಾ. ಆದಿತ್ಯ ರವರು ಪ್ರಾಥಮಿಕ ಶಿಕ್ಷಣವನ್ನು ಗುತ್ತಿಗಾರು ಶಾಲೆಯಲ್ಲಿ ಹಾಗೂ ಪ್ರೌಢ ಮತ್ತು ಪದವಿಪೂರ್ವ ಶಿಕ್ಷಣವನ್ನು ಸುಬ್ರಹ್ಮಣ್ಯದಲ್ಲಿ ಮುಗಿಸಿ, ಐದುವರೆ ವರ್ಷ ಫಾದರ್ ಮುಲ್ಲಾರ್ ಮೆಡಿಕಲ್ ಕಾಲೇಜ್...
ಉಬರಡ್ಕ ಮಿತ್ತೂರು ಗ್ರಾಮದ ಬಳ್ಳಡ್ಕ ಮೋನಪ್ಪ ಗೌಡ ಮತ್ತು ಚಂದ್ರಾವತಿ ದಂಪತಿಯ ಪುತ್ರ, ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಜಯಪ್ರಕಾಶ ಬಿ.ಎಂ. ಬಳ್ಳಡ್ಕ ಡಿಸೆಂಬರ್ ನಲ್ಲಿ ಸೇನಾ ನಿವೃತ್ತಿ ಹೊಂದಿದ್ದಾರೆ. ಇವರು ಡಿಸೆಂಬರ್ 2003 ರಲ್ಲಿ ಭಾರತೀಯ ಸೇನೆಯ ಎಂಜಿನಿಯರ್ ವಿಭಾಗದಲ್ಲಿ ಸರ್ವೆ ಟೆಕ್ನಿಷಿಯನ್ ಆಗಿ ಸೇರ್ಪಡೆಯಾಗಿ 17 ವರ್ಷಗಳ ಕಾಲ ಭಾರತೀಯ ಭೂ ಸೇನೆಯಲ್ಲಿ ಸೇವೆ...
ಸುಳ್ಯಕ್ಕೆ ತಹಶೀಲ್ದಾರ್ ಆಗಿ ಬಂದಿದ್ದ ಕು.ಅನಿತಾಲಕ್ಷ್ಮೀ ಯವರು ಬಂದು ಕೆಲವೇ ದಿನದಲ್ಲಿ ಗ್ರಾ.ಪಂ.ಚುನಾವಣೆಯ ಹಿನ್ನೆಲೆಯಲ್ಲಿ ಬಂಟ್ವಾಳಕ್ಕೆ ನಿಯೋಜನೆಗೊಂಡಿದ್ದರು. ಇದೀಗ ಸುಳ್ಯ ತಹಶೀಲ್ದಾರ್ ಆಗಿ ಅನಿತಾಲಕ್ಷ್ಮಿಯವರು ಮತ್ತೆ ಸುಳ್ಯಕ್ಕೆ ಮರಳಿದ್ದಾರೆ. ಸುಳ್ಯಕ್ಕೆ ತಹಶೀಲ್ದಾರ್ ಬೆಂಗಳೂರಿನಿಂದ ಆಗಮಿಸಿದ್ದ ವೇದವ್ಯಾಸ್ ಮುತಾಲಿಕ್ ಮತ್ತೆ ಸ್ವಕ್ಷೇತ್ರಕ್ಕೆ ಮರಳಿದ್ದಾರೆ.
ವಿಶ್ವ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಸ್ಥೆ ಹಿರಿಯೂರು, ಚಿತ್ರದುರ್ಗದವರು ಆಯೋಜಿಸಿದ್ದ 2020-2021ನೇ ಸಾಲಿನ ದ್ವಿತೀಯ ವಿಶ್ವ ಕನ್ನಡ ಸಾಹಿತ್ಯೋತ್ಸವ ಸಮಾರಂಭದ ವೇದಿಕೆ ಕವಿಗೋಷ್ಠಿಗೆ ಶ್ರೀಮತಿ ಲತಾಶ್ರೀ ಸುಪ್ರೀತ್ ಮೋಂಟಡ್ಕ ರವರು ಆಯ್ಕೆಯಾಗಿದ್ದಾರೆ. ಕಾರ್ಯಕ್ರಮವು ಜ.10 ರಂದು ಬೆಂಗಳೂರಿನ ಮಹಾಲಕ್ಷ್ಮಿ ಕಲ್ಯಾಣ ಮಂಟಪದಲ್ಲಿ ಜರುಗಲಿದ್ದು, ಕಾರ್ಯಕ್ರಮದ ಉದ್ಘಾಟನೆಯನ್ನು ಖ್ಯಾತ ಸಂಗೀತ ಸಂಯೋಜಕರು ಮತ್ತು ಸಾಹಿತಿಗಳಾದ ಡಾ....
ನಿಂತಿಕಲ್ಲು - ಬೆಳ್ಳಾರೆ ಮುಖ್ಯ ರಸ್ತೆಯ ಬಳಿ ಆನಂದ ಗೌಡ ಬೊಳ್ಳಾಜೆ ಮಾಲಕತ್ವದ ಹೋಟೆಲ್ ಮಹಾರಾಣಿ ಇಂದುಬೆಳಗ್ಗೆ ಗಣಹೋಮದೊಂದಿಗೆ ಶುಭಾರಂಭಗೊಂಡಿತು. ಶ್ರೀ ಶಂಭಯ್ಯ ಭಟ್ ಮುಂಡುಗಾರು ಗಣಹೋಮ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾಲಕರಾದ ಆನಂದ ಬೊಳ್ಳಾಜೆ ಹಾಗೂ ಕುಟುಂಬಸ್ಥರು, ಕಿಟ್ಟಣ್ಣ ಗೌಡ ಕಳಂಜ, ಶೇಷಪ್ಪ ಗೌಡ ಹುದೇರಿ, ಪ್ರದೀಪ್ ಹುದೇರಿ ಮತ್ತಿತರರು ಉಪಸ್ಥಿತರಿದ್ದರು. ಇಲ್ಲಿ ಸಸ್ಯಾಹಾರಿ...
ಸರ್ಕಾರಿ ಪ್ರೌಢಶಾಲೆ ಅಜ್ಜಾವರದಲ್ಲಿ ಪೋಷಣಾ ಅಭಿಯಾನದ ಅಂಗವಾಗಿ ಮಂದಾರ ಇಕೋಕ್ಲಬ್ ವತಿಯಿಂದ ಹಣ್ಣಿನ ಗಿಡ ಮತ್ತು ಔಷಧಿ ಗಿಡಗಳನ್ನು ನೆಡುವ ಕಾರ್ಯಕ್ರಮ ಜ.7 ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಶಾಲಾ ಎಸ್. ಡಿ ಎಂ.ಸಿ. ಕಾರ್ಯಕಾರಿ ಅಧ್ಯಕ್ಷರಾದ ಶ್ರೀ ಸುಂದರ, ಶಾಲಾ ಮುಖ್ಯ ಶಿಕ್ಷಕರಾದ ಶ್ರೀ ಗೋಪಿನಾಥ ಎಂ, ಧನಲಕ್ಷಿ ಮಹಿಳಾ ಮಂಡಲದ ಅಧ್ಯಕ್ಷರಾದ ಶ್ರೀಮತಿ...
Loading posts...
All posts loaded
No more posts