Ad Widget

ಮರಕತ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಿಪತ್ತು ನಿರ್ವಹಣಾ ಸಮಿತಿಯಿಂದ ಶ್ರಮದಾನ

ನಾಲ್ಕೂರು ಮರಕತ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಿಪತ್ತು ನಿರ್ವಹಣಾ ಸಮಿತಿ ನಾಲ್ಕೂರು ಘಟಕದ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.ಧರ್ಮಸ್ಥಳ ವಿಪತ್ತು ನಿರ್ವಹಣಾ ಸಮಿತಿ ನಾಲ್ಕೂರು ಘಟಕದ ಸ್ವಯಂ ಸೇವಕರಾದ ಕರುಣಾಕರ ಸಂಪ್ಯಾಡಿ, ನವಿನ ಕುಮಾರ, ಲೋಹಿತ್ ಚೆಮ್ನೂರು ಇವರು ಮರಕತ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಠಾರದಲ್ಲಿ ಸ್ವಚ್ಛತೆ ಹಾಗೂ ದೇವಸ್ಥಾನಕ್ಕೆ ಬೇಕಾದ ಕಟ್ಟಿಗೆ ಒಡೆಯುವ ಕಾರ್ಯ...

ವಿಶ್ವ ಹಿಂದೂ ಪರಿಷದ್ ಭಜರಂಗದಳ ಸುಳ್ಯ ವತಿಯಿಂದ ದಿ| ಸಂತೋಷ್ ಮಡ್ತಿಲರಿಗೆ ಶ್ರದ್ಧಾಂಜಲಿ

ವಿಶ್ವ ಹಿಂದೂ ಪರಿಷದ್ ಭಜರಂಗದಳ ಸುಳ್ಯ ಪ್ರಖಂಡ ವತಿಯಿಂದ ಬೈಠಕ್ ಹಾಗೂ ಭಜರಂಗದಳ ಪ್ರಥಮ ನಗರ ಸಂಯೋಜಕರಾದ ದಿವಂಗತ ಸಂತೋಷ್ ಮಡ್ತಿಲರಿಗೆ ಶ್ರದ್ದಾಂಜಲಿ ಸಭೆ ನಡೆಯಿತು. 2001ರ ಸಮಯದಲ್ಲಿ ತಾಲೂಕು ಸಂಯೋಜಕರಾದ ಶೈಲೇಶ್ ಅಂಬೆಕಲ್ಲು ನುಡಿ ನಮನ ಸಲ್ಲಿಸಿದರು. ಸಂತೋಷ್ ಮಡ್ತಿಲರವರು ಸಂಘಟನೆಯ ಕಾರ್ಯಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರ ಬಗ್ಗೆ ಭಜರಂಗದಳ ಜಿಲ್ಲಾ ಸಹ ಸಂಯೋಜಕ್ ಲತೀಶ್...
Ad Widget

ಚೊಕ್ಕಾಡಿ : ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರಿಂದ ಶ್ರಮದಾನ

ಚೊಕ್ಕಾಡಿ ಶ್ರೀ ಉಳ್ಳಾಕುಲು ದೈವಸ್ಥಾನದ ಚಾವಡಿ ಬಳಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಒಕ್ಕೂಟ ಅಮರಪಡ್ನೂರು ಚೊಕ್ಕಾಡಿ ಮತ್ತು ಅಮರಮುಡ್ನೂರು ಇದರ ಸದಸ್ಯರಿಂದ ಒಂದು ದಿನದ ಶ್ರಮದಾನ ನಡೆಯಿತು. ಶ್ರಮದಾನದಲ್ಲಿ ಒಕ್ಕೂಟದ ಸದಸ್ಯರು ಭಾಗವಹಿಸಿದರು.

ಚುನಾವಣೆಯಲ್ಲಿ ಗೆದ್ದ ಕಾರ್ಮಿಕ ಸಂಘಟನೆಯ ಸದಸ್ಯರಿಗೆ ಸನ್ಮಾನ

ಸಂಪಾಜೆಯ ಕಾರ್ಮಿಕ ಸಂಘದ ಸದಸ್ಯರಾಗಿದ್ದು ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿರುವ ದ.ಕ.ಸಂಪಾಜೆ ಪಂಚಾಯತ್ ಸದಸ್ಯರಾದ ವಿಮಲ ಆರ್.ಪ್ರಸಾದ್ ಮತ್ತು ಚೆಂಬು ಗ್ರಾಮ ಪಂಚಾಯತ್ ಸದಸ್ಯೆ ಕುಸುಮಾ ಯೋಗೇಶ್ವರ ಇವರನ್ನು ಸಂಘಟನೆಯ ವತಿಯಿಂದ ಇಂದು (ಜ.10) ಕಲ್ಲುಗುಂಡಿಯ ಸಂಘದ ಕಛೇರಿಯಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕಾರ್ಮಿಕ ಮುಖಂಡ ಕೆ.ಪಿ.ಜೋನಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಲಾಕ್ ಡೌನ್ ಅವಧಿಯನ್ನು ಸದುಪಯೋಗ ಪಡಿಸಿಕೊಂಡ ಬಹುಮುಖ ಪ್ರತಿಭೆ ಶ್ರೇಯಾ ಮೇರ್ಕಜೆ

ಕೊರೊನಾ ಎಂಬ ಮಹಾಮಾರಿಯಿಂದ ನಮ್ಮ-ನಮ್ಮ ಜೀವನದಲ್ಲಿ ಸಾಕಷ್ಟು ಬದಲಾವಣೆ ಕಂಡಿದೆ. ಈ ಸಮಯವನ್ನು ಹಾಳು ಮಾಡದೇ ಸದುಪಯೋಗ ಪಡಿಸಿಕೊಂಡ ಅದೆಷ್ಟೋ ಮಂದಿ ಇದ್ದಾರೆ. ಆ ಸಾಲಿಗೆ ಇಲ್ಲೊಬ್ಬಳು ಸೇರುತ್ತಾಳೆ. ಅವಳೇ ಶ್ರೇಯಾ ಮೇರ್ಕಜೆ, ಶ್ರೀ ಗುರುಪ್ರಸಾದ್ ಮೇರ್ಕಜೆ ಮತ್ತು ಪ್ರಮೀಳ ಮೇರ್ಕಜೆರವರ ಪುತ್ರಿ. ಜ್ಞಾನದೀಪ ವಿದ್ಯಾಸಂಸ್ಥೆ ಎಲಿಮಲೆಯಲ್ಲಿ 7ನೇ ತರಗತಿ ಯಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿದ್ದಾಳೆ. ಜತೆಗೆ...

ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಕವಿಗೋಷ್ಠಿಯಲ್ಲಿ ಲತಾಶ್ರೀ ಸುಪ್ರೀತ್ ಮೋಂಟಡ್ಕ ಕವನ ವಾಚನ

ಬೆಂಗಳೂರಿನ ಮಹಾಲಕ್ಷ್ಮಿ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜ.10 ರಂದು ನಡೆದ ವಿಶ್ವ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಸ್ಥೆ ಹಿರಿಯೂರು, ಚಿತ್ರದುರ್ಗದವರು ಆಯೋಜಿಸಿದ್ದ 2020-2021ನೇ ಸಾಲಿನ ದ್ವಿತೀಯ ವಿಶ್ವ ಕನ್ನಡ ಸಾಹಿತ್ಯೋತ್ಸವ ಸಮಾರಂಭದ ವೇದಿಕೆ ಕವಿಗೋಷ್ಠಿಯಲ್ಲಿ ಶ್ರೀಮತಿ ಲತಾಶ್ರೀ ಸುಪ್ರೀತ್ ಮೋಂಟಡ್ಕ ರವರು ಸ್ವರಚಿತ ಕವನ ವಾಚಿಸಿ, ವೇದಿಕೆಯ ವತಿಯಿಂದ ಸನ್ಮಾನವನ್ನು ಸ್ವೀಕರಿಸಿದರು. ಲತಾಶ್ರೀ...

ಪೆರುವಾಜೆ : ಬಿಜೆಪಿಯಿಂದ ಅಭಿನಂದನಾ ಕಾರ್ಯಕ್ರಮ – ಸದೃಢ ದೇಶ ಕಟ್ಟಲು ಸಜ್ಜನಿಕೆಯ ರಾಜಕಾರಣವೇ ಮೆಟ್ಟಿಲು: ರಾಕೇಶ್ ರೈ ಕೆಡೆಂಜಿ

ಸದೃಢ ದೇಶ ಕಟ್ಟಲು ಸಜ್ಜನಿಕೆಯ ರಾಜಕಾರಣವೇ ಮೆಟ್ಟಿಲಾಗಬೇಕು. ಸಮಾಜದ ಅಶಕ್ತ ವರ್ಗದವರ ಕಣ್ಣೀರು ಒರೆಸಲು ಸಹೃದಯರ ಅವಶ್ಯಕತೆಯಿದೆ ಎಂಬುದರ ಫಲಿತಾಂಶವೇ ಪೆರುವಾಜೆ ವಾರ್ಡ್ 2ರ ಅಭ್ಯರ್ಥಿಗಳ ವಿಜಯ. ಮತದಾರ ಬಾಂಧವರ ಧೃಢ ನಿಶ್ಚಯ ಹಾಗೂ ಕಾರ್ಯಕರ್ತರು ಮಾಡಿದ ಸೇವಾ ಆಂದೋಲನವೇ ಈ ನಮ್ಮ ಗೆಲುವಿಗೆ ಕಾರಣವಾಗಿದೆ ಎಂದು ಭಾರತೀಯ ಜನತಾ ಪಾರ್ಟಿ‌ಯ ಸುಳ್ಯ ಮಂಡಲದ ಪ್ರಧಾನ...

ಗುತ್ತಿಗಾರು ಭಜನಾ ಮಂದಿರದಲ್ಲಿ ಶ್ರಮದಾನ

ಗುತ್ತಿಗಾರು ಅಯ್ಯಪ್ಪ ಸೇವಾ ಸಮಿತಿ ಗುತ್ತಿಗಾರು ಹಾಗೂ ಶ್ರೀ ಕೃಷ್ಣ ಭಜನಾ ಮಂಡಳಿಯ ಆಡಳಿತ ಸಮಿತಿ ಮತ್ತು ಭಜನಾ ಸಮಿತಿಯ ಸದಸ್ಯರಿಂದ ಗುತ್ತಿಗಾರು ಶ್ರೀ ಕೃಷ್ಣಾ ಭಜನಾ ಮಂದಿರದಲ್ಲಿ ಶ್ರಮದಾನ ಜ.10 ರಂದು ನಡೆಯಿತು.

ಬೆಳ್ಳಾರೆ ಅಂಚೆ ಕಚೇರಿಯಲ್ಲಿ ಪರ್ಸ್ ಬಿದ್ದು ಸಿಕ್ಕಿರುತ್ತದೆ

ಜನವರಿ 07 ರಂದು ಬೆಳ್ಳಾರೆಯ ಅಂಚೆಕಚೇರಿಯಲ್ಲಿ ಅಮೂಲ್ಯ ದಾಖಲೆಗಳುಳ್ಳ ಪರ್ಸ್ ಬಿದ್ದು ಸಿಕ್ಕಿರುತ್ತದೆ. ಸಂಬಂಧಪಟ್ಟವರು ಬೆಳ್ಳಾರೆ ಅಂಚೆಕಚೇರಿಗೆ ಬಂದು ಗುರುತು ಹೇಳಿ ಪರ್ಸ್ ಪಡೆದುಕೊಳ್ಳಬಹುದು ಎಂದು ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಸಂಪರ್ಕ ಸಂಖ್ಯೆ 9482251184.

ಕರ್ನಾಟಕ ರಾಜ್ಯ ಉಪನ್ಯಾಸಕರ ಅರ್ಹತಾ ಪರೀಕ್ಷೆಯಲ್ಲಿ ಸ್ವಾತಿ.ಕೆ ಉತ್ತೀರ್ಣ

ಕರ್ನಾಟಕ ರಾಜ್ಯ ಉಪನ್ಯಾಸಕರ ಅರ್ಹತಾ ಪರೀಕ್ಷೆ (ಕೆ-ಸೆಟ್) ನ ರಾಜ್ಯಶಾಸ್ತ್ರ ವಿಭಾಗದಲ್ಲಿ ಸ್ವಾತಿ.ಕೆ ರವರು ಉತ್ತೀರ್ಣರಾಗಿದ್ದಾರೆ.ಇವರು ಮಂಗಳೂರು ವಿಶ್ವವಿದ್ಯಾನಿಲಯದಿಂದ ರಾಜ್ಯಶಾಸ್ತ್ರ ವಿಭಾಗದಲ್ಲಿ ಎಂ.ಎ ಪದವಿಯನ್ನು ಪಡೆದಿದ್ದು, ಪ್ರಸ್ತುತ ಸುಬ್ರಹ್ಮಣ್ಯದ ಕುಕ್ಕೇ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಡಬ ತಾಲೂಕು ಸುಬ್ರಹ್ಮಣ್ಯ ಗ್ರಾಮದ ಕುದುರೆಮಜಲ್ ಸೀತಾರಾಮ ಗೌಡ ಮತ್ತು ಚೆನ್ನಮ್ಮ ದಂಪತಿಗಳ ಪುತ್ರಿ....
Loading posts...

All posts loaded

No more posts

error: Content is protected !!