- Saturday
- November 23rd, 2024
ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಇಂದು ಸ್ವಕ್ಷೇತ್ರಕ್ಕೆ ಮೊದಲ ಭೇಟಿ ಮಾಡುತ್ತಿರುವ ಸಚಿವ ಅಂಗಾರರಿಗೆ ಬಿಜೆಪಿ ಮಂಡಲ ಸಮಿತಿ ಹಾಗೂ ಕಾರ್ಯಕರ್ತರಿಂದ ಭವ್ಯ ಸ್ವಾಗತ ನೀಡಲಾಯಿತು. ಜಾಲ್ಸೂರು ನಿಂದ ಸುಳ್ಯದವರೆಗೆ ವಾಹನ ಜಾಥಾ ಹಾಗೂ ಜ್ಯೋತಿ ಸರ್ಕಲ್ ನಿಂದ ತೆರೆದ ವಾಹನದಲ್ಲಿ ಭವ್ಯವಾದ ಮೆರವಣಿಗೆ ಮುಖಾಂತರ ನೂತನ ಸಚಿವರಿಗೆ ಅದ್ದೂರಿ ಸ್ವಾಗತ ನಡೆಯಲಿದೆ.
ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿರುವ ಎಸ್ ಅಂಗಾರ ಇಂದು ಮೊದಲ ಬಾರಿಗೆ ಸುಳ್ಯಕ್ಕೆ ಆಗಮಿಸಲಿದ್ದು, ಅದ್ದೂರಿ ಸ್ವಾಗತಕ್ಕೆ ಸುಳ್ಯ ಮಂಡಲ ಸಿದ್ದತೆ ಮಾಡಿಕೊಂಡಿದೆ. ಜ.15 ರಂದು ಆಗಮಿಸುವ ಸಚಿವರು ಪೂ.ಗಂ 10.30 ಕ್ಕೆ-ಬೆಂಗಳೂರಿನಿಂದ ವಿಮಾನ ಮೂಲಕ ಮಂಗಳೂರಿಗೆ ಬರಲಿದ್ದಾರೆ. ಪೂ.ಗಂ 11.30 ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಅಲ್ಲಿಂದಮ.ಗಂ 12.00 ಕ್ಕೆ ಮಂಗಳೂರು ಕದ್ರಿ ಶ್ರೀ...
ಕಲ್ಮಡ್ಕ ಗ್ರಾಮದ ಕಾಚಿಲ ನಿವಾಸಿ ಮರಾಟಿ ಸಮುದಾಯದ ಹಿರಿಯರಾಗಿರುವ ನಾರ್ಣು ನಾಯ್ಕ ಕಾಚಿಲ ವಯೋಸಹಜ ಕಾಯಿಲೆಯಿಂದ ಜ.14 ರ ಸಂಜೆ ನಿಧನರಾದರು. ಇವರಿಗೆ 90 ವರ್ಷ ವಯಸ್ಸಾಗಿತ್ತು. ಇವರು ಪತ್ನಿ ಶ್ರೀಮತಿ ದೇವಕಿ ಕಾಚಿಲ, ಮಕ್ಕಳಾದ ಚನಿಯಪ್ಪ ನಾಯ್ಕ ಕಾಚಿಲ, ಸೋಮಣ್ಣನಾಯ್ಕ ಕಾಚಿಲ, ಸಾವಿತ್ರಿ ಬಳ್ಳಕ್ಕ, ಗೀತ ಕೇಪು, ಸುಶೀಲ ಕೇಪು, ಶೋಭವತಿ ಪೆರ್ಣಾಜೆ, ಗೋಪಾಲ...
ಬಾಳಿಲ ಗ್ರಾಮದ ತೋಟದಮೂಲೆ ತರವಾಡಿನ ಧರ್ಮದೈವ ಹಾಗೂ ಪರಿವಾರ ದೈವಗಳ ಪ್ರತಿಷ್ಠಾ ವಾರ್ಷಿಕೋತ್ಸವ ಜ. 14ರ ಮಕರ ಸಂಕ್ರಮಣ ದಿನದಂದು ನಡೆಯಿತು. ಪ್ರತಿಷ್ಠಾ ವಾರ್ಷಿಕೋತ್ಸವದ ಅಂಗವಾಗಿ ಗಣಹೋಮ,ನಾಗ ತಂಬಿಲ, ಮುಡಿಪು ಪೂಜೆ, ಸತ್ಯನಾರಾಯಣ ಪೂಜೆ ಮತ್ತು ಧರ್ಮದೈವ ಹಾಗೂ ಪರಿವಾರ ದೈವಗಳ ತಂಬಿಲ ನಡೆಯಿತು.ಈ ಸಂದರ್ಭದಲ್ಲಿ ಕುಟುಂಬಸ್ಥರು ಉಪಸ್ಥಿತರಿದ್ದರು.
ಮಾವಿನಕಟ್ಟೆ ಉದಯಗಿರಿ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಒತ್ತೆಕೋಲದ ಪೂರ್ವಭಾವಿಯಾಗಿ ಕೊಳ್ಳಿ ಮುಹೂರ್ತ ಕಾರ್ಯಕ್ರಮವು ಜ.14 ರಂದು ಜರುಗಿತು. ಈ ಸಂದರ್ಭದಲ್ಲಿ ಸಮಿತಿಯ ಮುಖ್ಯಸ್ಥರು, ಭಕ್ತಾದಿಗಳು ಉಪಸ್ಥಿತರಿದ್ದರು.
ನಿಸರ್ಗ ಯುವಕ ಮಂಡಲದ 2020-2021ನೇ ಸಾಲಿನ ವಾರ್ಷಿಕ ಮಹಾಸಭೆ ಹಾಗೂ ಪದಗ್ರಹಣ ಕಾರ್ಯಕ್ರಮ ಜ.10 ರಂದು ಐನೆಕಿದು ಶಾಲಾ ವಠಾರದಲ್ಲಿ ನಡೆಯಿತು.ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವಕ ಮಂಡಲದ ಅಧ್ಯಕ್ಷರಾದ ಶಶಿಧರ್ ಕತ್ತಿಮಜಲ್ ವಹಿಸಿದ್ದರು. ವೇದಿಕೆಯಲ್ಲಿ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ನ ಸದಸ್ಯರಾದ ಗಿರೀಶ್ ಪೈಲಾಜೆ, ಭಾರತಿ ಮೂಕಮಲೆ, ಲಲಿತಾ ಗುಂಡಡ್ಕ, ಐನೆಕಿದು ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ...
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುರುಳ್ಯ ಶಾಂತಿನಗರ ಇಲ್ಲಿ 14 ವರ್ಷಗಳಿಂದ ಸಹಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿ ಕಾಣಿಯೂರು ಸ.ಪ.ಪೂ. ಕಾಲೇಜಿನ ಪ್ರೌಢಶಾಲಾ ವಿಭಾಗಕ್ಕೆ ವರ್ಗಾವಣೆಗೊಂಡ ಶಿಕ್ಷಕಿ ಶ್ರೀಮತಿ ಕುಸುಮಾವತಿ ಮತ್ತು 9 ವರ್ಷಗಳಿಂದ ಕರ್ತವ್ಯ ನಿರ್ವಹಿಸಿ ಬಂಟ್ವಾಳಕ್ಕೆ ವರ್ಗಾವಣೆಗೊಂಡ ಶಿಕ್ಷಕಿ ಶ್ರೀಮತಿ ಪುಷ್ಪಾವತಿ ಇವರ ಬೀಳ್ಕೊಡುಗೆ ಹಾಗೂ ಸನ್ಮಾನ ಸಮಾರಂಭವು ಜ.9 ರಂದು ಮುರುಳ್ಯ ಶಾಂತಿನಗರ...
ಮಂಗಳೂರಿನ ಪ್ರತಿಷ್ಠಿತ ಸ್ವರ್ಣೋದ್ಯಮಿ, ಸತ್ಯ, ಶುದ್ಧ ಮನಸ್ಸಿನ ಸನ್ಮಾನ್ಯ ಶ್ರೀ ರಮೇಶ್ ಕೃಷ್ಣ ಶೇಟ್ ರವರ ಶೈಕ್ಷಣಿಕ, ಧಾರ್ಮಿಕ ಸಮಾಜಸೇವೆಯನ್ನು ಪರಿಗಣಿಸಿ ಅಮೇರಿಕಾದ 'ಐಸ್ಟೀನ್' ವಿಶ್ವವಿದ್ಯಾನಿಲಯವು 2 ವರ್ಷಗಳ ಹಿಂದೆ ಗೌರವ ಡಾಕ್ಟರೇಟ್ ಗೆ ಆಯ್ಕೆಮಾಡಿದ್ದು, ಅವರ ಅನಾರೋಗ್ಯ ಹಾಗೂ ಕೋವಿಡ್ ನಿಬಂಧನೆಯ ಹಿನ್ನೆಲೆಯಿಂದ ಕಾರ್ಯಕ್ರಮಕ್ಕೆ ತೆರಳಲು ಸಾಧ್ಯವಾಗಿರಲಿಲ್ಲ. ಸದ್ಯ ಅವರ ಗೌರವ ಡಾಕ್ಟರೇಟ್ ನ್ನು...
Loading posts...
All posts loaded
No more posts