ಸಾಮಾಜಿಕ ಜಾಲತಾಣದ ಫೇಸ್ಬುಕ್ ಖಾತೆಯಿಂದ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ವಿರುದ್ಧ ಅವಹೇಳನಕಾರಿ ಬರಹವನ್ನು ವೈರಲ್ ಮಾಡಿರುವ ವ್ಯಕ್ತಿ
ಅನಿಲ್ ಕುಮಾರ್ ಶೆಟ್ಟಿ ಪೆಡ್ಡುರ್ ಎಂಬಾತನ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಜ.22 ರಂದು ಸುಳ್ಯ ಕೋಟ ಶ್ರೀನಿವಾಸ ಪೂಜಾರಿ ಅಭಿಮಾನಿ ಬಳಗದ ವತಿಯಿಂದ ಸುಳ್ಯ ತಹಶೀಲ್ದಾರ್ ಹಾಗೂ ಪೊಲೀಸ್ ಸಬ್ ಇನ್ಸ್ಪೆಕ್ಟರ್ ರವರ ಮುಖಾಂತರ ದೂರು ನೀಡಲಾಯಿತು.ಈ ಸಂದರ್ಭ ರಂಜಿತ್ ಪೂಜಾರಿ ಸುಳ್ಯ, ಶಶಿಕಲಾ ನಿರಬಿದಿರೆ, ಅನಿಲ್ ಪೂಜಾರಿ ಕುತ್ಯಾಡಿ, ಪುರುಷೋತ್ತಮ ಕುತ್ಯಾಡಿ. ಶಶಿಧರ ಪೂಜಾರಿ ಪರಿವಾರಕಾನ, ಪ್ರಸಾದ್ ಪೂಜಾರಿ ಬಳ್ಪ ಉಪಸ್ಥಿತರಿದ್ದರು .
- Thursday
- November 21st, 2024