Ad Widget

ಕಳಂಜ : ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ

ಶ್ರೀ ರಘುನಾಥ ರೈ ಕಳಂಜ ಮತ್ತು ಊರ ಹತ್ತು ಸಮಸ್ತರಿಂದ ನಡೆಸಲ್ಪಡುವ 30ನೇ ವರ್ಷದ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯವರ ಶ್ರೀ ದೇವಿ ಮಹಾತ್ಮೆ ಎಂಬ ಯಕ್ಷಗಾನ ಬಯಲಾಟವು ಜ.15 ರಂದು ಕಳಂಜದ ವಿಷ್ಣುನಗರದಲ್ಲಿ ನಡೆಯಿತು. ಯಕ್ಷಗಾನ ಬಯಲಾಟವನ್ನು ಕಲಾಸಕ್ತರು, ಯಕ್ಷಾಭಿಮಾನಿಗಳು, ಊರವರು ವೀಕ್ಷಿಸಿ ಯಕ್ಷಗಾನದ ಸವಿಯುಂಡರು.

ಸಚಿವ ಅಂಗಾರರ ಯಶೋಗಾಥೆ – ಒಬ್ಬ ಸಂಘದ ಸಾಮಾನ್ಯ ಸ್ವಯಂ ಸೇವಕನಿಂದ ಶಾಸಕನವರೆಗೆ – ಒಬ್ಬ ಕೂಲಿ ಕಾರ್ಮಿಕನಿಂದ ರಾಜ್ಯ ಸಂಪುಟ ದರ್ಜೆಯ ಸಚಿವನವರೆಗೆ

ಸುಳ್ಯ ವಿಧಾನ ಸಭಾ ಕ್ಷೇತ್ರದ ಯಾವುದೋ ಒಂದು ಮೂಲೆಯಲ್ಲಿ ಅತ್ಯಂತ ನಿಷ್ಠೆಯಿಂದ ಸಂಘದ ಸ್ವಯಂ ಸೇವಕನಾಗಿ ಸೇವೆ ಸಲ್ಲಿಸುತ್ತಾ, ಹೊಟ್ಟೆ ಪಾಡಿಗಾಗಿ ಮನೆ ನಿರ್ವಹಣೆಗೆ ತನ್ನ ವಿದ್ಯಾಭ್ಯಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ ದಿನಗೂಲಿ ಕಾರ್ಮಿಕನಾಗಿ ದುಡಿದು ಇಂದು ತನ್ನ ನಿಸ್ವಾರ್ಥ ಸೇವೆಯಿಂದ ಆರು ಬಾರಿ ಸುಳ್ಯ ಕ್ಷೇತ್ರದ ಶಾಸಕನಾಗಿ , ಇದೀಗ ರಾಜ್ಯ ಸಚಿವ ಸಂಪುಟದಲ್ಲಿ ಸಚಿವರಾಗಿ...
Ad Widget

ಸುಳ್ಯದಲ್ಲಿ ಸಚಿವರಿಗೆ ಅದ್ದೂರಿ ಸ್ವಾಗತ – ಮೆರವಣಿಗೆ – ಮುಗಿಲು ಮುಟ್ಟಿದ ಕಾರ್ಯಕರ್ತರ ಹರ್ಷೋದ್ಘಾರ

https://youtu.be/7AvJ43aHK94 ಸುಳ್ಯಕ್ಕೆ ಆಗಮಿಸಿದ ಸಚಿವ ಅಂಗಾರರಿಗೆ ಮುಖಂಡರು ಹಾಗೂ ಕಾರ್ಯಕರ್ತರ ಭವ್ಯ ಸ್ವಾಗತ ದೊರೆಯಿತು. ಕಾರ್ಯಕರ್ತರ ಹರ್ಷೋದ್ಘಾರದ ನಡುವೆ ಸಾಗಿ ಬಂದ ಸಚಿವರಿಗೆ ಮುಖಂಡರು, ಕಾರ್ಯಕರ್ತರು ಸೇರಿದಂತೆ ಪಕ್ಷಭೇದ ಮರೆತು ಅಭಿನಂದಿಸಿದರು. ಸಚಿವ ಅಂಗಾರರು ಎಲ್ಲರಿಗೂ ಕೈ ಮುಗಿದು ಧನ್ಯವಾದ ಸಮರ್ಪಿಸಿದರು.

ಜಾಲ್ಸೂರು ತಲುಪಿದ ಸಚಿವ ಅಂಗಾರರಿಗೆ ಭವ್ಯ ಸ್ವಾಗತ

ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಇಂದು ಸ್ವಕ್ಷೇತ್ರಕ್ಕೆ ಮೊದಲ ಭೇಟಿ ಮಾಡುತ್ತಿರುವ ಸಚಿವ ಅಂಗಾರರಿಗೆ ಬಿಜೆಪಿ ಮಂಡಲ ಸಮಿತಿ ಹಾಗೂ ಕಾರ್ಯಕರ್ತರಿಂದ ಭವ್ಯ ಸ್ವಾಗತ ನೀಡಲಾಯಿತು. ಜಾಲ್ಸೂರು ನಿಂದ ಸುಳ್ಯದವರೆಗೆ ವಾಹನ ಜಾಥಾ ಹಾಗೂ ಜ್ಯೋತಿ ಸರ್ಕಲ್ ನಿಂದ ತೆರೆದ ವಾಹನದಲ್ಲಿ ಭವ್ಯವಾದ ಮೆರವಣಿಗೆ ಮುಖಾಂತರ ನೂತನ ಸಚಿವರಿಗೆ ಅದ್ದೂರಿ ಸ್ವಾಗತ ನಡೆಯಲಿದೆ.

ಇಂದು ನೂತನ ಸಚಿವರು ಸುಳ್ಯಕ್ಕೆ – ಅದ್ದೂರಿ ಸ್ವಾಗತಕ್ಕೆ ಬಿಜೆಪಿ ಸಿದ್ಧತೆ

ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿರುವ ಎಸ್ ಅಂಗಾರ ಇಂದು ಮೊದಲ ಬಾರಿಗೆ ಸುಳ್ಯಕ್ಕೆ ಆಗಮಿಸಲಿದ್ದು, ಅದ್ದೂರಿ ಸ್ವಾಗತಕ್ಕೆ ಸುಳ್ಯ ಮಂಡಲ ಸಿದ್ದತೆ ಮಾಡಿಕೊಂಡಿದೆ.‌‌ ಜ.15 ರಂದು ಆಗಮಿಸುವ ಸಚಿವರು ಪೂ.ಗಂ 10.30 ಕ್ಕೆ-ಬೆಂಗಳೂರಿನಿಂದ ವಿಮಾನ ಮೂಲಕ ಮಂಗಳೂರಿಗೆ ಬರಲಿದ್ದಾರೆ. ಪೂ.ಗಂ 11.30 ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಅಲ್ಲಿಂದಮ.ಗಂ 12.00 ಕ್ಕೆ ಮಂಗಳೂರು ಕದ್ರಿ ಶ್ರೀ...
error: Content is protected !!