Ad Widget

ಕುಂಡಡ್ಕ- ಚೆನ್ನಾವರ ರಸ್ತೆ ಅಭಿವೃದ್ಧಿಯ ಬೇಡಿಕೆ ಈಡೇರದಿದ್ದರೆ ಜಿ.ಪಂ.,ತಾ.ಪಂ. ಚುನಾವಣೆ ಬಹಿಷ್ಕಾರಕ್ಕೆ ನಿರ್ಧಾರ

ಪೆರುವಾಜೆ ಗ್ರಾಮದ ಕುಂಡಡ್ಕ ಮೂಲ ಸೌಕರ್ಯ ಅಭಿವೃದ್ಧಿ ಚಿಂತನ ಸಮಿತಿ ಇದರ ಆಶ್ರಯದಲ್ಲಿ ಕುಂಡಡ್ಕ- ಚೆನ್ನಾವರ ರಸ್ತೆ ಅಭಿವೃದ್ಧಿ ಬೇಡಿಕೆಗೆ ಸಂಬಂಧಿಸಿ ಜ.11 ರಂದು ಕುಂಡಡ್ಕದಲ್ಲಿ ಪೂರ್ವಭಾವಿ ಸಭೆ ನಡೆಯಿತು. ಸಾರ್ವಜನಿಕ ಹಿತ ಚಿಂತನ ಸಮಿತಿ ಚೆನ್ನಾವರ, ಪಾಲ್ತಾಡಿ ಹಾಗೂ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಚೆನ್ನಾವರದಲ್ಲಿ ನಡೆಯಲಿರುವ ಜನಪ್ರತಿನಿದಿಗಳೊಂದಿಗೆ ಸಂವಾದ ಕಾರ್ಯಕ್ರಮಕ್ಕೆ ಪೂರಕವಾಗಿ ಈ...

ಹರಿಹರಪಲ್ಲತ್ತಡ್ಕ : ಶ್ರೀ.ಕ್ಷೇ.ಧ.ಗ್ರಾ.ಯೋಜನೆಯ ತ್ರೈಮಾಸಿಕ ಸಭೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹರಿಹರ ಪಲ್ಲತ್ತಡ್ಕ ಒಕ್ಕೂಟದ ತ್ರೈಮಾಸಿಕ ಸಭೆ ಜ.10 ರಂದು ನಡೆಯಿತು.ಕೊರೊನಾ ಲಾಕ್ ಡೌನ್ ಬಳಿಕ ಮೊದಲ ಬಾರಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹರಿಹರ ಪಲ್ಲತ್ತಡ್ಕ ಒಕ್ಕೂಟದ ತ್ರೈಮಾಸಿಕ ಸಭೆಯು ಸುಮಾರು 10 ತಿಂಗಳ ಬಳಿಕ ಎಲ್ಲಾ ರೀತಿಯ ಸುರಕ್ಷಾ ಕ್ರಮಗಳೊಂದಿಗೆ ಹರಿಹರ ಪಲ್ಲತ್ತಡ್ಕ ದ ಶ್ರೀ ಹರಿಹರೇಶ್ವರ ಕಲಾಮಂದಿರದಲ್ಲಿ...
Ad Widget

ಮಾ.19: ರಕ್ಷಿತ್ ಶೆಟ್ಟಿ ಮ್ಯಾರಥಾನ್ ಓಟ ತಾರಿಕೆರೆ ಸ್ವಾಮಿ ಕೊರಗಪ್ಪ ಸನ್ನಿಧಿಯಿಂದ ಆರಂಭಗೊಂಡು ಪೊಳಲಿಯಾಗಿ ಕಟೀಲಿನವರೆಗೆ 42 ಕಿ.ಮೀ ಆರೋಗ್ಯಕ್ಕಾಗಿ ಓಟ

19 ಬಾರಿ ವಿಶ್ವದಾಖಲೆ ಸ್ಥಾಪಿಸಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕ್ರೀಡಾಪಟು ರಕ್ಷಿತ್ ಶೆಟ್ಟಿ ಇವರ ನೇತೃತ್ವದಲ್ಲಿ ಮ್ಯಾರಥಾನ್ ಓಟ ಓಡಿ ಯುವಜನತೆಗೆ ಸ್ಪೂರ್ತಿ ತುಂಬಲಿರುವ ಮ್ಯಾರಥಾನ್ ಓಟ ಮಾ.19ರಂದು ನಡೆಯಲಿದೆ. ಆಸಕ್ತರಿಗೆ ಮುಕ್ತ ಅವಕಾಶ ಕಲ್ಪಿಸಿಕೊಡಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.

ತೊಡಿಕಾನಕ್ಕೆ ಸಿನಿಮಾ ಹಾಸ್ಯ ನಟ ಭೇಟಿ

ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ತೊಡಿಕಾನಕ್ಕೆ ಸಿನಿಮಾ ಹಾಸ್ಯ ನಟ‌ ತಬಲಾ ನಾಣಿ ಹಾಗೂ ಕಾಮಿಡಿ ಕಿಲಾಡಿ ಖ್ಯಾತಿಯ ಗೋವಿಂದೇ ಗೌಡ (ಜಿ.ಜಿ) ಭೇಟಿ ನೀಡಿ ದರ್ಶನ ಪಡೆದರು.

ಸುಳ್ಯ ರಥೋತ್ಸವ – ಭಕ್ತರಿಗೆ ಅಭಯ ನೀಡಿದ ಚೆನ್ನಕೇಶವ

ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ಜಾತ್ರೋತ್ಸವದ ಅಂಗವಾಗಿ ಜ.10 ರಂದು ರಾತ್ರಿ ನಡೆದ ವೈಭವದ ರಥೋತ್ಸವದಲ್ಲಿ ಶ್ರೀ ಚೆನ್ನಕೇಶವ ದೇವರು ವಿರಾಜಮಾನರಾದರು. ಈ ಬಾರಿಯ ಜಾತ್ರೆ ಸಂತೆ, ಆಡಂಬರಗಳಿಲ್ಲದಿದ್ದರೂ ಆಗಮಿಸಿದ ಸಾವಿರಾರು ಭಕ್ತಾದಿಗಳು ಶ್ರೀ ದೇವರ ದರ್ಶನ ಪಡೆದು ಪುನೀತರಾದರು. ದೇವಸ್ಥಾನಕ್ಕೆ ಕಲ್ಕುಡ ಭಂಡಾರ ಆಗಮಿಸಿದ ಬಳಿಕ ವಿಶೇಷ ಪೂಜೆ ಮತ್ತು ಉತ್ಸವ ಬಲಿ ನಡೆದು...

ಕುಕ್ಕೆ ದೇಗುಲದ ಆಸ್ತಿಯ ರಕ್ಷಣೆ ಮಾಡುವಂತೆ ಒತ್ತಾಯಿಸಿ ಮನವಿ

ರಾಜ್ಯದ ಪ್ರಮುಖ ಶ್ರದ್ದಾಕೇಂದ್ರವಾದ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸೇರಿದ ಯಾವುದೇ ಜಾಗವನ್ನು ಯಾವುದೇ ಇಲಾಖೆ, ಸಂಸ್ಥೆಗಳಿಗೆ ಪರಭಾರೆ ಮಾಡುವುದು ಸರಿಯಲ್ಲ. ದೇವಸ್ಥಾನದ ಜಾಗವನ್ನು ಉಳಿಸಿಕೊಂಡು ದೇವಸ್ಥಾನದ ಅಭಿವೃದ್ಧಿ ಚಟುವಟಿಕೆಗಳಿಗೆ ಬಳಸಿಕೊಳ್ಳುವಂತೆ ಒತ್ತಾಯಿಸಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಕಿಶೋರ್ ಶಿರಾಡಿಯವರು ನೀಡಿರುವ ಮನವಿಯಲ್ಲಿ ಒತ್ತಾಯಿಸಿದ್ದಾರೆ. ಯಾವುದೇ ಇಲಾಖೆಗೆ ಪರಭಾರೆ ಮಾಡಿದರೂ...

ಸಂಪಾಜೆ : ದಲಿತ ಸಂಘಟನೆಯಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ

ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಸಂಪಾಜೆ ಹೋಬಳಿ ಘಟಕದ ವತಿಯಿಂದ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಸಂಪಾಜೆ ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ನಡೆಯಿತು. ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆ ವೃತ್ತ ನಿರೀಕ್ಷಕ ಸಿ.ಎನ್ ದಿವಾಕರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ...

ರಾಷ್ಟ್ರಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನ ಪಡೆದ ಶರತ್ ಮರ್ಗಿಲಡ್ಕ

ಕುಂಡಲಿನಿ ಯೋಗ ಶಾಲಾ ಬೆಂಗಳೂರು ಇವರು ನಡೆಸಿದ ರಾಷ್ಟ್ರ ಮಟ್ಟದ ಮುಕ್ತ ಯೋಗಾಸನ ಸ್ಪರ್ಧೆಯಲ್ಲಿ ಶರತ್ ಮರ್ಗಿಲಡ್ಕ ರವರು ಟಾಪ್ 10ರಲ್ಲಿ 4ನೇ ಪಡೆದಿರುತ್ತಾರೆ.ಈ ಮೊದಲು ದಸರಾ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದರು. ಯೋಗ ಗುರು ಸಂತೋಷ್ ಮುಂಡಕಜೆ ಯವರ ಶಿಷ್ಯ.
error: Content is protected !!