ಸರ್ಕಾರಿ ಪ್ರೌಢಶಾಲೆ ಅಜ್ಜಾವರದಲ್ಲಿ ಪೋಷಣಾ ಅಭಿಯಾನದ ಅಂಗವಾಗಿ ಮಂದಾರ ಇಕೋಕ್ಲಬ್ ವತಿಯಿಂದ ಹಣ್ಣಿನ ಗಿಡ ಮತ್ತು ಔಷಧಿ ಗಿಡಗಳನ್ನು ನೆಡುವ ಕಾರ್ಯಕ್ರಮ ಜ.7 ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಶಾಲಾ ಎಸ್. ಡಿ ಎಂ.ಸಿ. ಕಾರ್ಯಕಾರಿ ಅಧ್ಯಕ್ಷರಾದ ಶ್ರೀ ಸುಂದರ, ಶಾಲಾ ಮುಖ್ಯ ಶಿಕ್ಷಕರಾದ ಶ್ರೀ ಗೋಪಿನಾಥ ಎಂ, ಧನಲಕ್ಷಿ ಮಹಿಳಾ ಮಂಡಲದ ಅಧ್ಯಕ್ಷರಾದ ಶ್ರೀಮತಿ ಶಶ್ಮಿ ಭಟ್, ಸದಸ್ಯರಾದ ಶ್ರೀಮತಿ ಜಯಂತಿ, ಶಾಲಾ ಶಿಕ್ಷಕ ಶಿಕ್ಷಕಿಯರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದರು. ಭಾರತವನ್ನು ಅಪೌಷ್ಟಿಕತೆಯಿಂದ ಸಂಪೂರ್ಣವಾಗಿ ಮುಕ್ತಗೊಳಿಸಲು ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ಹಣ್ಣಿನ ಗಿಡ ಮತ್ತು ಔಷಧಿಯ ಗಿಡಗಳನ್ನು ಬೆಳೆಸಿ ಪೋಷಿಸುವ ತೀರ್ಮಾನ ಕೈಗೊಳ್ಳಲಾಯಿತು. ಶಾಲಾ ಆವರಣದಲ್ಲಿ ನೆಟ್ಟ ಹಣ್ಣಿನ ಗಿಡಗಳನ್ನು ತಲಾ ಇಬ್ಬರು ವಿದ್ಯಾರ್ಥಿಗಳು ದತ್ತು ತೆಗೆದುಕೊಂಡು ಪೋಷಿಸುವ ಜವಾಬ್ದಾರಿಯನ್ನು ವಹಿಸಿಕೊಂಡರು.
- Thursday
- November 21st, 2024