2020 ಹಲವಾರು ಏಳುಬೀಳುಗಳನ್ನು ಕಂಡ ಜೀವನದ ಪಾಠವನ್ನು ಕಲಿಸಿದ ವರ್ಷ ಎಂದು ಹೇಳಿದರೆ ತಪ್ಪಾಗಲಾರದು. ಈಗ ಆ 2020 ನೇ ವರ್ಷವನ್ನು ಕಳೆದು ನಾವು 2021 ನೇ ವರ್ಷಕ್ಕೆ ಕಾಲಿಟ್ಟಿದ್ದೇವೆ. ಕಳೆದ ವರ್ಷ ಪ್ರತಿ ವರ್ಷದಂತೆ ಇರಲಿಲ್ಲ. ವರ್ಷದ ಆರಂಭದಲ್ಲೇ ಕೊರೋನಾ ಎಂಬ ಭೀಕರ ಮಹಾಮಾರಿ ವಕ್ಕರಿಸಿತು. ಜನರ ಜೀವನವೆಲ್ಲ ಬದಲಾಗಿ ಹೋಯಿತು. ಪ್ರತಿನಿತ್ಯ ಶಾಲಾ ಕಾಲೇಜುಗಳಲ್ಲಿ ಪಾಠ ಪ್ರವಚನಗಳನ್ನು ಕೇಳುತ್ತಿದ್ದ ವಿದ್ಯಾರ್ಥಿಗಳು ಮೊಬೈಲ್ ಮೂಲಕ ಪಾಠ ಕೇಳುವಂತಾಯಿತು. ತಮ್ಮ ಮಕ್ಕಳಿಗೆ ಮೊಬೈಲ್ ಕೊಡಲು ಹಿಂಜರಿಯುತ್ತಿದ್ದ ಫೋಷಕರು ಮಕ್ಕಳಿಗೆ ಮೊಬೈಲ್ ಕೊಡಿಸುವಂತಾಯಿತು. ಪ್ರತಿನಿತ್ಯ ಆಫೀಸ್ ಗಳಲ್ಲಿ ವರ್ಕ್ ಮಾಡುತ್ತಿದ್ದವರಿಗೆ ಮನೆಯಿಂದಲೇ ಕೆಲಸ ನಿರ್ವಹಿಸುವಂತಾಯಿತು.
ಪ್ರತಿನಿತ್ಯ ಮನೆಯಿಂದ ಹೊರಹೋಗುತ್ತಿದ್ದವರಿಗೆ ಮನೆಯಲ್ಲಿಯೇ ಇರುವಂತಹಾ ಪರಿಸ್ಥಿತಿ ಬಂತು. ಕೆಲವರ ಮನೆಗಳಲ್ಲಿ ಸೂರ್ಯ ಕಿಟಕಿಯಲ್ಲಿ ಹುಟ್ಟಿ ಕಿಟಕಿಯಲ್ಲಿಯೇ ಮುಳುಗುವಂತಾಯಿತು. ಪಟ್ಟಣಗಳಲ್ಲಿ ಇರುವವರಿಗೆ ಹಳ್ಳಿ ಜೀವನವೇ ಲೇಸು ಎನಿಸಿ ಹಲವಾರು ಜನರು ಪಟ್ಟಣಗಳಿಂದ ಹಳ್ಳಿಗಳಿಗೆ ಮರಳಿ ಬರತೊಡಗಿದರು. ಸಾವಿರಾರು ಜನರ ಸಮ್ಮುಖದಲ್ಲಿ ನೆರವೇರುತ್ತಿದ್ದ ಮದುವೆ ಮುಂತಾದ ಕಾರ್ಯಕ್ರಮಗಳು ಹತ್ತಾರು ಜನರ ಸಮ್ಮುಖದಲ್ಲಿ ನೆರವೇರುವಂತಾಯಿತು.
ಈ ಕೊರೋನಾ ಮಹಾಮಾರಿಯಿಂದಾಗಿ ಇಡೀ ದೇಶವೇ ಸಂಪೂರ್ಣ ಲಾಕ್ ಡೌನ್ ಆಗಿ ಯಾರೊಬ್ಬರೂ ಮನೆಯಿಂದ ಹೊರಬರುವಂತಿರಲಿಲ್ಲ. ಆ ಸಂದರ್ಭದಲ್ಲಿ ತಂದೆ-ತಾಯಿ, ಅಣ್ಣ-ತಮ್ಮ, ಅಕ್ಕ, ತಂಗಿ ಯ ಮದ್ಯೆ ಉತ್ತಮ ಬಾಂಧವ್ಯ ಏರ್ಪಟ್ಟಿತು. ನೆರೆಹೊರೆಯವರ ಮಧ್ಯೆ ಒಗಟ್ಟು ಏರ್ಪಟ್ಟಿತು. ಈ ಕೊರೋನಾ ದಿಂದಾಗಿ ಜನರು ಹಣದ ಉಳಿತಾಯ ಮಾಡುವುದನ್ನು ಹಾಗೂ ಇರುವ ಸ್ವಲ್ಪ ಹಣದಿಂದ ಬದುಕುವುದನ್ನು ಕಲಿತರು. ಹೀಗೆ ಈ 2020 ರಲ್ಲಿ ಜನರು ಸಾಕಷ್ಟು ಕಲಿತರು. ಅಷ್ಟೇ ಅಲ್ಲದೇ ವೀಕೆಂಡ್ ನಲ್ಲಿ ನಡೆಯುತ್ತಿದ್ದ ಪಾರ್ಟಿಗಳಿಗೆ ಬ್ರೇಕ್ ಬಿದ್ದಿತು.
ಜನರು ಹಣದ ಮೌಲ್ಯವನ್ನು, ಸಂಬಂಧಗಳ ಮೌಲ್ಯಗಳನ್ನು, ಜೀವನದ ಮೌಲ್ಯವನ್ನು ಕಲಿತರು.
ಹೀಗೆ ಈ ಕೊರೋನಾ ಮಹಾಮಾರಿಯಿಂದಾಗಿ ಹಲವಾರು ಕೆಟ್ಟದ್ದೂ ಆಯಿತು ಅದೇ ರೀತಿ ಹಲವಾರು ಒಳ್ಳೆಯದ್ದೂ ಆಯಿತು. ಹೀಗೆ ನೋಡು ನೋಡುತ್ತಿದ್ದಂತೆ 2021ರ ಕ್ಯಾಲೆಂಡರ್ ತಿರುಗಿಸುವ ಸಮಯವೂ ಬಂದೇ ಬಿಟ್ಚಿತು ಅಂದರೆ 2020ನೇ ವರ್ಷ ಕಳೆದು 2021ನೇ ವರ್ಷವೂ ಬಂದೇ ಬಿಟ್ಚಿತು. ಈ 2021 ರಲ್ಲಿ ಶಾಲಾ ಕಾಲೇಜುಗಳು ಮುಂತಾದವುಗಳು ಒಂದೊಂದಾಗಿ ಓಪನ್ ಆಗುತ್ತಿವೆ. ಸುಮಾರು 10 ತಿಂಗಳಿನಿಂದ ಶಾಲೆಯನ್ನು, ಗೆಳೆಯರನ್ನು, ಶಿಕ್ಷಕರನ್ನು ನೋಡದ ವಿದ್ಯಾರ್ಥಿಗಳು, ವಿದ್ಯಾರ್ಥಿಗಳ ಮುಖವನ್ನು ನೋಡದ ಶಿಕ್ಷಕರು ಈಗ ಒಬ್ಬರನ್ನೊಬ್ಬರು ನೋಡುವ ಸಮಯ ಬಂದೇ ಬಿಟ್ಚಿದೆ. ಆದೇ ರೀತಿ ದೇಶವೂ ನಿಧಾನವಾಗಿ ಈ ಕೊರೋನಾ ಭಯದಿಂದ ಹೊರಬರಲು ಸಜ್ಜಾಗುತ್ತಿದೆ. ಆದ್ದರಿಂದ ಈ 2021 ನೇ ವರ್ಷವು ಜನರಿಗೆ ಒಳಿತನ್ನು ಮಾಡಲಿ. ಈ ವರ್ಷದಲ್ಲಿ ನಾವು ಮಾಡುವ ಎಲ್ಲಾ ಧನಾತ್ಮಕ ಯೋಜನೆಗಳು ಯಾವುದೇ ವಿಘ್ನ ಅಥವಾ ತೊಂದರೆಗಳಿಲ್ಲದೇ ಸಾಕಾರಗೊಳ್ಳಲಿ ಎಂದು ಅಶಿಸುತ್ತೇನೆ.
✍ಉಲ್ಲಾಸ್ ಕಜ್ಜೋಡಿ