Ad Widget

ಗೋಂಟಡ್ಕದಲ್ಲಿ ಮತದಾನ ಬಹಿಷ್ಕಾರದ ಬ್ಯಾನರ್

ಗೋಂಟಡ್ಕದಲ್ಲಿ ಮತದಾನ ಬಹಿಷ್ಕಾರ ಬ್ಯಾನರ್ ಹಾಕಲಾಗಿದ್ದು ವಿವಿಧ ಬೇಡಿಕೆಗಳು ಈಡೇರದ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಪಂಜ ಪ್ರಾ.ಕೖ.ಪ.ಸ.ಸಂಘದ ವಾರ್ಷಿಕ ಮಹಾಸಭೆ

ಪಂಜ ಪ್ರಾ.ಕೖ.ಪ.ಸ.ಸಂಘದ ವಾರ್ಷಿಕ ಮಹಾಸಭೆಯು ಡಿ.19ರಂದು ಪಂಜ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಸುಬ್ರಹ್ಮಣ್ಯ ಕುಳರವರ ಅಧ್ಯಕ್ಷತೆಯಲ್ಲಿ ನಡೆಯಿತು.
Ad Widget

ಅರಂತೋಡು : ಪಯಸ್ವಿನಿ ನದಿಗೆ ತ್ಯಾಜ್ಯ ಎಸೆದ ಅನಾಗರಿಕರು

ಸುಳ್ಯದ ಜೀವ ನದಿ ಪಯಸ್ವಿನಿಗೆ ಅರಂತೋಡು ತೊಡಿಕಾನ ಸಂಪರ್ಕ ಸೇತುವೆ ಯ ಸಮಾಜ ಕಂಟಕರು ಮೇಲಿಂದ ತಿಂದು ಉಳಿದ ಎಂಜಲು ಆಹಾರ,ಊಟಕ್ಕೆ ಬಳಸಿದ ಹಾಳೆ ತಟ್ಟೆ ಎಸೆದು ಅನಾಗರಿಕತೆ ಮೆರೆದಿದ್ದಾರೆ.ಪಯಸ್ವಿನಿಗೆ ನದಿಗೆ ಸೇತುವೆ ಮೂಲಕ ನಿಂತು ತ್ಯಾಜ್ಯ ಎಂಜಲು ಆಹಾರ ಎಸೆದಿದ್ದಾರೆ. ಈ ಸೇತುವೆಯ ಮೇಲೆ ಎಂಜಲು ಆಹಾರ ಚೆಲ್ಲಿ ದುರ್ವಾಸನೆ ಬೀರುತ್ತಿದೆ.ಇದರಿಂದ ತೊಡಿಕಾನ ಶ್ರೀ...

ಪಾರ್ಶ್ವವಾಯು ಪೀಡಿತ ಕೇಪಣ್ಣ ಗೌಡ ಕಲ್ಲಗದ್ದೆಯವರಿಗೆ ಬೇಕಿದೆ ನೆರವಿನ ಹಸ್ತ

ಅರಂತೋಡು ಗ್ರಾಮದ ಕಲ್ಲಗದ್ದೆ ಕೇಪಣ್ಣ ಗೌಡರುಪಾರ್ಶ್ವವಾಯು ಪೀಡಿತರಾಗಿ ತೀವ್ರ ಅನಾರೋಗ್ಯ ಕ್ಕೊಳಗಾಗಿದ್ದು, ಇವರ ಚಿಕಿತ್ಸೆಯ ವೆಚ್ಚವನ್ನು ಭರಿಸಲಾಗದೆ ಕುಟುಂಬ ಆರ್ಥಿಕ ಸಂಕಷ್ಟಗೊಳಗಾಗಿದ್ದು,ಇವರಿಗೆ ದಾನಿಗಳ ನೆರವಿನಹಸ್ತ ಬೇಕಾಗಿದೆ.ಪ್ರತಿನಿತ್ಯ ಕೂಲಿಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ಕೇಪಣ್ಣ ಗೌಡರ ಕುಟುಂಬ ಇದೀಗ ದಾನಿಗಳ ನೆರವನ್ನು ಕೋರಿದ್ದು , ಇವರಿಗೆ ನೆರವು ನೀಡುವವರು ಬ್ಯಾಂಕ್ ಆಫ್ ಬರೋಡಾ ಅರಂತೋಡು ಶಾಖೆ ಅಕೌಂಟ್...

ಸುಳ್ಯ 851 ನಾಮಪತ್ರ ಸಲ್ಲಿಕೆ – 20 ನಾಮಪತ್ರ ತಿರಸ್ಕೃತ

ಗ್ರಾಮ ಪಂಚಾಯತ್ ಚುನಾವಣೆಗೆ ನಾಮಪತ್ರ ಸಲ್ಲಿಕೆ ಡಿ.16 ಕೊನೆಯ ದಿನವಾಗಿದ್ದು ಸುಳ್ಯ ತಾಲೂಕಿನಲ್ಲಿ ಒಟ್ಟು 851 ನಾಮಪತ್ರ ಸಲ್ಲಿಕೆಯಾಗಿದೆ. ಡಿ. 17 ರಂದು ನಾಮಪತ್ರ ಪರಿಶೀಲನೆ ನಡೆದು 20 ನಾಮಪತ್ರ ತಿರಸ್ಕೃತ ಗೊಂಡಿದೆ. ಕಣದಲ್ಲಿ 831 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ನಾಮಪತ್ರ ಹಿಂತೆಗೆಯಲು ಡಿ.19 ಕೊನೆಯ ದಿನವಾಗಿದೆ.ಕೊಡಿಯಾಲ ಗ್ರಾ.ಪಂ.ನ 6 ಸ್ಥಾನಗಳಿಗೆ 22, ಐವತ್ತೊಕ್ಲು (ಪಂಜ) ಗ್ರಾ.ಪಂ.ನ...

ತಹಶೀಲ್ದಾರ್ ಅನಿತಾಲಕ್ಷ್ಮೀ ವರ್ಗಾವಣೆ – ಸುಳ್ಯಕ್ಕೆ ವೇದವ್ಯಾಸ್ ಮುತಾಲಿಕ್

ಸುಳ್ಯ ತಹಶೀಲ್ದಾರ್ ಅನಿತಾಲಕ್ಷ್ಮೀ ಯವರಿಗೆ ಬಂಟ್ವಾಳಕ್ಕೆ ವರ್ಗಾವಣೆ ಆದೇಶವಾಗಿದೆ. ಸುಳ್ಯಕ್ಕೆ ವೇದವ್ಯಾಸ ಮುತಾಲಿಕ್ ಬರಲಿದ್ದಾರೆ ಎಂದು ತಿಳಿದುಬಂದಿದೆ.ಅನಿತಾಲಕ್ಷ್ಮೀ ಯವರು 2 ವಾರದ ಹಿಂದೆಯಷ್ಟೇ ಸುಳ್ಯಕ್ಕೆ ಚುನಾವಣಾ ಹಿನ್ನೆಲೆಯಲ್ಲಿ ಬಂದಿದ್ದರು.

ಪುತ್ತೂರು ನ್ಯಾಯಾಲಯದ ಶಿರಸ್ತೆದಾರ್ ಅಬ್ಬಾಸ್ ಮುಖ್ಯ ಆಡಳಿತಾಧಿಕಾರಿಯಾಗಿ ಉಡುಪಿಗೆ ಭಡ್ತಿ

ಪುತ್ತೂರು ನ್ಯಾಯಾಲಯದಲ್ಲಿ ಶಿರಸ್ತೆದಾರರಾಗಿ ಕಾರ್ಯ ನಿರ್ವಹಿಸುತ್ತಿದ್ದ ಅಬ್ಬಾಸ್ ಸೋಣಂಗೇರಿ ಮುಖ್ಯ ಆಡಳಿತಾಧಿಕಾರಿಯಾಗಿ ಭಡ್ತಿಗೊಂಡು ಉಡುಪಿ ನ್ಯಾಯಾಲಯಕ್ಕೆ ವರ್ಗಾವಣೆಗೊಂಡಿದ್ದಾರೆ . ಮೂಲತಃ ಸುಳ್ಯ ಸೋಣಂಗೇರಿ ನಿವಾಸಿ ಯಾಗಿದ್ದು , ಪ್ರಸ್ತುತ ಪುತ್ತೂರು ದರ್ಬೆಯಲ್ಲಿ ವಾಸವಾಗಿರುವ ಅಬ್ಬಾಸ್‌ರವರು ಈ ಹಿಂದೆ ಪುತ್ತೂರು ನ್ಯಾಯಾಲಯದಲ್ಲಿ 9 ವರ್ಷ ವರುಷ ಶಿರಸ್ತೆದಾರರಾಗಿ ಸೇವೆ ಸಲ್ಲಿಸಿ, ಬಳಿಕ ಸುಳ್ಯದಲ್ಲಿ 9 ವರ್ಷ ಶಿರಸ್ತೆದಾರರಾಗಿ...

ಅಡ್ಕಬಳೆ-ಕಟ್ಟಕೋಡಿ ನಿವಾಸಿಗಳಿಂದ ಮತದಾನ ಬಹಿಷ್ಕಾರಕ್ಕೆ ತೀರ್ಮಾನ

ಅರಂತೋಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಅಡ್ಕಬಳೆ ಕಟ್ಟಕೊಡಿ ಪರಿಸರದ ದಲಿತ ಕುಟುಂಬದ ನಿವಾಸಿಗಳು ಮೂಲಭೂತ ಸೌಲಭ್ಯಗಳ ಕೊರತೆ ನೀಗಿಸುವಂತೆ ಒತ್ತಾಯಿಸಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದೇ ಇದ್ದರೇ ಮತದಾನದ ಬಹಿಷ್ಕಾರದ ನಿರ್ಧಾರ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಬ್ಯಾನರ್ ಅಳವಡಿಸಿದ ಘಟನೆ ಡಿಸೆಂಬರ್ 16ರಂದು ನಡೆದಿದೆ.

ದೇವಚಳ್ಳ : ಪಕ್ಷೇತರ ಅಭ್ಯರ್ಥಿ ಜಯಾನಂದ ಪಟ್ಟೆ ನಾಮಪತ್ರ

ದೇವಚಳ್ಳ ಗ್ರಾಮದ 1 ನೇ ವಾರ್ಡನಿಂದ ಪಕ್ಷೇತರ ಅಭ್ಯರ್ಥಿಯಾಗಿ ಜಯಾನಂದ ಪಟ್ಟೆ ನಾಮಪತ್ರ ಸಲ್ಲಿಸಿದ್ದಾರೆ.‌

ನಾಮಪತ್ರ ಪರಿಶೀಲನೆಗೆ ತೆರಳಿದ ವೇಳೆ ಬಸ್ ನಿಲ್ದಾಣ ಶುಚಿಗೊಳಿಸಿದ ಪಕ್ಷೇತರ ಅಭ್ಯರ್ಥಿ ಅಶೋಕ್ ಕುಮಾರ್

ಗ್ರಾಮ ಪಂಚಾಯತ್ ಚುನಾವಣೆ ಅಭ್ಯರ್ಥಿಗಳ ನಾಮಪತ್ರ ಪರಿಶೀಲನೆ ಇಂದು ನಡೆಯುತ್ತಿದ್ದು ಈ ವೇಳೆ ಅಜ್ಜಾವರ ಗ್ರಾಮದ 5 ನೇ ವಾರ್ಡಿನಲ್ಲಿ ಪಕ್ಷೆತರ ಅಭ್ಯರ್ಥಿ ಅಶೋಕ್ ಕುಮಾರ್ ಪಂಚಾಯತ್ ಗೆ ಬಂದಿದ್ದರು. ಅವರಿಗೆ ಪಂಚಾಯತ್ ನ ಎದುರಿನಲ್ಲೆ ಇರುವ ಬಸ್ ನಿಲ್ದಾಣದಲ್ಲಿ ಕಸದ ರಾಶಿ ಇರುವುದನ್ನು ಗಮನಿಸಿದ ಇವರು ತಕ್ಷಣವೇ ಕಸವನ್ನು ಹೆಕ್ಕಿ ಗುಡಿಸಿ ಶುಚಿಗೊಳಿಸಿದರು ಇವರಿಗೆ...
Loading posts...

All posts loaded

No more posts

error: Content is protected !!