- Wednesday
- April 2nd, 2025

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಹೊಸದಾಗಿ ರಚಿಸಲಾದ ಗೀತೆಯನ್ನು ಯೂಟ್ಯೂಬ್ ನಲ್ಲಿ ಟಾಲೆಂಟ್ ಹಂಟರ್ಸ್ ಎಂಬ ಚಾನೆಲ್ ನಲ್ಲಿ ನವಂಬರ್ 1 ರಂದು ಬಿಡುಗಡೆ ಮಾಡಲಾಯಿತು. ನಮ್ಮ ಕನ್ನಡದ ಜನಪ್ರಿಯ ಸಂಸ್ಕೃತಿಯನ್ನು ಎತ್ತಿ ತೋರಿಸುವ ಮೂಲಕ ಹೊಸ ಪ್ರಯತ್ನದಲ್ಲಿ ಗಾಯಕನಾಗಿ ಉಜಿತ್ ಶ್ಯಾಮ್ ಚಿಕ್ಮುಳಿ, ಕೊಳಲಿನಲ್ಲಿ ವೀಕ್ಷಿತ್ ಕುತ್ಯಾಳ ಇವರಿದ್ದು ಉತ್ತಮವಾಗಿ ಮೂಡಿಬಂದಿದೆ. ವೀಕ್ಷಿಸಲು ಇಲ್ಲಿ ಕ್ಲಿಕ್...

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಇಂದು ಮಂಗಳೂರಿನಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಸುಳ್ಯದ ದೈಹಿಕ ಶಿಕ್ಷಣ ಶಿಕ್ಷಕ ದೊಡ್ಡಣ್ಣ ಬರೆಮೇಲು, ಹಾಗೂ ಪ್ರಗತಿಪರ ಕೃಷಿಕ ವಿಶ್ವನಾಥ ಪೈ ಯವರಿಗೆ ಪ್ರಶಸ್ತಿ ಪ್ರಧಾನ ನಡೆಯಿತು. ಸಂಸದ ನಳೀನ್ ಕುಮಾರ್ ಕಟೀಲ್, ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರು ಮತ್ತಿತರರು ಉಪಸ್ಥಿತರಿದ್ದರು.

ಕೊಡಗಿನ ಸುಂಟಿಕೊಪ್ಪ ಎಂಬಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಸ್ಥಳೀಯ ನಿವಾಸಿ ಎಂ.ಎಸ್. ರವಿ ಎಂಬುವವರು ಕನ್ನಡದ ಧ್ವಜ ಮತ್ತು ಕನ್ನಡದ ಪೇಟವನ್ನು ಧರಿಸಿ ಪೇಟೆಯಲ್ಲಿ ಸಂಚರಿಸಿ ಜನರಲ್ಲಿ ವಿಶೇಷ ಆಕರ್ಷಣೆಯನ್ನು ಮೂಡಿಸುತ್ತಿದ್ದಾರೆ. ಇವರು ಸತತ 25 ವರ್ಷಗಳಿಂದ ಕನ್ನಡದ ಕಂಪನ್ನು ಬೀರುತ್ತಿದ್ದಾರೆ. ಡಾಕ್ಟರ್ ರಾಜಕುಮಾರ್ ಅಭಿಮಾನಿ ಬಳಗದಲ್ಲಿ ಗುರುತಿಸಿಕೊಂಡು, ಪ್ರಸ್ತುತ ಸುಂಟಿಕೊಪ್ಪ ಡಾಕ್ಟರ್ ಅಂಬೇಡ್ಕರ್ ಸಂಘದ...

ಕಡಬ ತಾ. ಎಡಮಂಗಲ ಗ್ರಾಮದ ದೋಣಿಮನೆ ದಿ.ಮುತ್ತಪ್ಪ ಗೌಡರ ಪುತ್ರ ದೀಪಕ್ ರ ವಿವಾಹವು ಕಡಬ ತಾ. ಕೊಣಾಜೆ ಗ್ರಾಮದ ಪಟ್ಲ ಮನೆ ರುಕ್ಮಯ್ಯ ಗೌಡರ ಪುತ್ರಿ ಮಲ್ಲಿಕಾ ರೊಂದಿಗೆ ವರನ ಮನೆಯಲ್ಲಿ ಅ.28 ರಂದು ನಡೆಯಿತು.