- Friday
- April 4th, 2025

ದಕ್ಷಿಣ ಕನ್ನಡ ಜಿಲ್ಲಾ ಯುವ ಬ್ರಿಗೇಡ್ ನ ಸಂಚಾಲಕರಾಗಿ ಸುಳ್ಯದ ಮನೀಶ್ ಗೂನಡ್ಕ ಆಯ್ಕೆಯಾಗಿದ್ದರೆ. ಬೆಂಗಳೂರಿನ ಶೇಷಾದ್ರಿಪುರಂನಲ್ಲಿ ನಡೆದ ರಾಜ್ಯಮಟ್ಟದ ಲೀಡರ್ಸ್ ಮೀಟ್ ಕಾರ್ಯಕ್ರಮದಲ್ಲಿ ರಾಜ್ಯ ಮಾರ್ಗದರ್ಶನ ಮಂಡಳಿ ಇವರನ್ನು ಆಯ್ಕೆ ಮಾಡಿದೆ.

ಕಡಬ ತಾ. ಕೇನ್ಯ ಗ್ರಾಮದ ಪೋಳೆ ದಿ ಕಿಟ್ಟಣ್ಣ ಗೌಡರ ಪುತ್ರ ಹೇಮಂತ್ ಪಿ.ಕೆ. ಇವರ ವಿವಾಹವು ಬೆಳ್ತಂಗಡಿ ತಾ. ತಣ್ಣೀರುಪಂತ ಗ್ರಾಮದ ಮಡಪ್ಪಾಡಿ ಬಾಬು ಗೌಡರ ಪುತ್ರಿ ಡೀಕ್ಷಿತಾ (ಸೌಮ್ಯ ಎಂ.)ಳೊಂದಿಗೆ ಅ.28 ರಂದು ಪಂಜ ಪೈಂದೋಡಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.

ವಿಶ್ವ ಹಿಂದೂ ಪರಿಷತ್ ಭಜರಂಗದಳ ಛತ್ರಪತಿ ಶಾಖೆ ಮುಕ್ಕೂರು ಕುಂಡಡ್ಕ ಇದರ ವತಿಯಿಂದ ಮುಕ್ಕೂರು ಶಾಲಾ ವಠಾರದ ಸ್ವಚ್ಛತಾ ಕಾರ್ಯಕ್ರಮವು ನ.01 ರಂದು ನಡೆಯಿತು. ಸ್ವಚ್ಛತಾ ಕಾರ್ಯಕ್ರಮದಲ್ಲಿ ಶಾಖೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು.

ಯುವಸೇನೆ ಮುಕ್ಕೂರು ಪೆರುವಾಜೆ ವತಿಯಿಂದ ಶ್ರೀ ಕೊರಗಜ್ಜ ದೈವಸ್ಥಾನ ಕುಂಡಡ್ಕ ಇದರ ಬ್ರಹ್ಮಕಲಶ ಸಂದರ್ಭದಲ್ಲಿ ನಡೆಸಿದ 'ಯುವಸೇನೆ ಸೇವಾರ್ಥ ಲಕ್ಕಿ ಕೂಪನ್' ನಲ್ಲಿ ಉಳಿಕೆಯಾದ ರೂ.29,230 ಹಣವನ್ನು ದೈವಸ್ಥಾನಕ್ಕೆ ಹಸ್ತಾಂತರಿಸಲಾಯಿತು. ದೈವಸ್ಥಾನದ ವತಿಯಿಂದ ಕುಂಬ್ರ ದಯಾಕರ ಆಳ್ವ ಪೆರುವಾಜೆ, ಕುಶಾಲಪ್ಪ ಗೌಡ ಕುಂಡಡ್ಕ, ದಯಾನಂದ ರೈ ಕನ್ನೆಜಲು, ಬಾಲಕೃಷ್ಣ ರೈ ಕನ್ನೆಜಲು ಹಾಗೂ ಹೊನ್ನಪ್ಪ ಗೌಡ...

ಶಿವ ಫ್ರೆಂಡ್ಸ್ (ರಿ) ಪಂಜ ಇದರ ಆಶ್ರಯದಲ್ಲಿ ಆಹ್ವಾನಿತ ಸ್ಥಳೀಯ ತಂಡಗಳ ವಾಲಿಬಾಲ್ ಪಂದ್ಯಾಟ ಮತ್ತು ಕರೋನ ವಾರಿಯರ್ಸ್ ಗೆ ಗೌರವಾರ್ಪಣೆ. ಈ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ರೋಹಿತ್ ಪೆರ್ಮಾಜೆ ಅಧ್ಯಕ್ಷರು ಶಿವ ಫ್ರೆಂಡ್ಸ್ (ರಿ)ಪಂಜ, ಡಾ. ಮಂಜುನಾಥ್ ಭಟ್ ಪ್ರಾಥಮಿಕ ಆರೋಗ್ಯ ಕೇಂದ್ರ ಪಂಜ,ಡಾ. ದೇವಿಪ್ರಸಾದ್ ಕಾನತ್ತೂರ್ ಆಡಳಿತಾಧಿಕಾರಿಗಳು ಶ್ರೀ ಪರಿವಾರ ಪಂಚಲಿಂಗೇಶ್ವರ...

ಪಂಜ ಅರಣ್ಯಾಧಿಕಾರಿಗಳ ಮಿಂಚಿನ ಕಾರ್ಯಾಚರಣೆಯಿಂದಾಗಿ ಅಕ್ರಮ ಮರ ಸಾಗಾಟ ಮಾಡುತ್ತಿದ್ದಾಗ ತಡೆದು ವಾಹನ ವಶಪಡಿಸಿಕೊಂಡ ಘಟನೆ ನಡೆದಿದೆ. ಸುಬ್ರಹ್ಮಣ್ಯ ಮಂಜೇಶ್ವರ ರಾಜ್ಯ ಹೆದ್ದಾರಿಯ ಸಮಹಾದಿ ಎಂಬಲ್ಲಿ ಅಕ್ರಮವಾಗಿ ಕಿರಾಲ್‍ಬೋಗಿ ಮತ್ತು ಹಲಸು ಜಾತಿಯ ಮರದ ದಿಮ್ಮಿಗಳನ್ನು ಈಚರ್ ಟಿಪ್ಪರ್ ವಾಹನದಲ್ಲಿ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಪಂಜ ವಲಯದ ಎಡಮಂಗಲ ಶಾಲೆಯ ಸಿಬ್ಬಂದಿಗಳು ಹಾಗೂ ರಾತ್ರಿ ಗಸ್ತು...

ಮಹಾತ್ಮ ಗಾಂಧಿ ಚಾರಿಟೇಬಲ್ ಟ್ರಸ್ಟ್ ಸುಳ್ಯ ಇದರ ವತಿಯಿಂದ 65ನೇ ವರ್ಷದ ಕನ್ನಡ ರಾಜ್ಯೋತ್ಸವ ಆಚರಣೆ ಇಂದು ಸುಳ್ಯ ತಾಲೂಕು ಪಂಚಾಯತ್ ವಾಣಿಜ್ಯ ಸಂಕೀರ್ಣದ ಟ್ರಸ್ಟ್ ಕಚೇರಿ ಆವರಣದಲ್ಲಿ ನಡೆಯಿತು. ಮಹಾತ್ಮ ಗಾಂಧಿ ಚಾರಿಟೇಬಲ್ ಟ್ರಸ್ಟ್ ಇದರ ಅಧ್ಯಕ್ಷರಾದ ಎನ್ ಜಯಪ್ರಕಾಶ್ ರೈ ಯವರು ಧ್ವಜಾರೋಹಣ ನೆರವೇರಿಸಿದರು. ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ಕನ್ನಡ ನಾಡು...

ಇದೇ ಮೊದಲ ಬಾರಿಗೆ ಸುಳ್ಯದಲ್ಲಿ ರೋಡ್ ರನ್ನರ್ಸ್ ಎಂಬ ಫುಡ್ ಡೆಲಿವರಿ ಸಂಸ್ಥೆ ಇಂದು ಶುಭಾರಂಭಗೊಂಡಿತು. ಸುಳ್ಯ ನಗರ ವ್ಯಾಪ್ತಿಯಲ್ಲಿ ಪ್ರತಿದಿನ ಸಂಜೆ 6.30 ರಿಂದ ರಾತ್ರಿ 10.30 ರ ತನಕ ಫುಡ್ ಡೆಲಿವರಿ ವ್ಯವಸ್ಥೆ ಮಾಡಲಿದ್ದಾರೆ. 8123067957 ಸಂಖ್ಯೆಯ ವಾಟ್ಸಾಪ್ ನಂಬರ್ ಗೆ ಸಂದೇಶ ಕಳುಹಿಸಿದರೆ ಕೂಡಲೇ ನಿಮ್ಮ ಮನೆ ಬಾಗಿಲಿಗೆ ಫುಡ್ ಡೆಲಿವರಿ...

ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿ ಯವರ ಪುಣ್ಯಸ್ಮರಣೆ ಕಾರ್ಯಕ್ರಮ ಹಾಗೂ ಕಾಂಗ್ರೆಸ್ ಸಮಿತಿ ಗ್ರಾಮ ಪಂಚಾಯತ್ ಚುನಾವಣೆ ಉಸ್ತುವಾರಿಗಳ ಮತ್ತು ಗ್ರಾಮ ಅಧ್ಯಕ್ಷರುಗಳು, ಸಾಮಾಜಿಕ ಜಾಲತಾಣ ವಿಭಾಗದ ಸಂಯೋಜಕರು ಸಭೆಯನ್ನು ಇಂದು ಸುಳ್ಯದ ಯೋಜನಾ ಸಂಯುಕ್ತ ಮಂಡಲಿ ಸಭಾಂಗಣದಲ್ಲಿ ಆಯೋಜಿಸಲಾಯಿತು. ಅಧ್ಯಕ್ಷತೆಯನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಜಯಪ್ರಕಾಶ್...

ಸುಳ್ಯ ಕೆ.ಎಸ್.ಆರ್.ಟಿ.ಸಿ ಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಗೋಪಾಲ ದುಗ್ಗಲಡ್ಕ ಇವರನ್ನು ಸನ್ಮಾನಿಸಲಾಯಿತು. ಇವರು ಈಗ ಕೆ.ಎಸ್.ಆರ್.ಟಿ.ಸಿ. ಯ ನೌಕರನಲ್ಲದಿದ್ದರೂ ತನ್ನದೇ ಸಂಸ್ಥೆ ಎಂಬಂತೆ ಸೇವೆ ಸಲ್ಲಿಸುತ್ತಿದ್ದು ಇವರ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಸುಳ್ಯ ಘಟಕ ಹಾಗೂ ಸಿಬ್ಬಂದಿಗಳ ಪರವಾಗಿ ಹೂ ಗುಚ್ಚ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಘಟಕ ವ್ಯವಸ್ಥಾಪಕರಾದ ಸುಂದರ್ ರಾಜ್,...

All posts loaded
No more posts