Ad Widget

ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಸದಸ್ಯರ ನೇಮಕ

ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ನೂತನ ಸದಸ್ಯರ ನೇಮಕಗೊಳಿಸಿ ಸರಕಾರ ಆದೇಶಿಸಿದೆ. ಸದಸ್ಯರಾಗಿ ಕಿಶೋರ್ ಕುಮಾರ್ ಉಳುವಾರು, ಗಣಪತಿ ಭಟ್ ಮಜಿಗುಂಡಿ, ಉಮಾಶಂಕರ್ ಅಡ್ಯಡ್ಕ, ಎಸ್.ಪಿ.ಲೋಕನಾಥ ಪೆಲ್ತಡ್ಕ, ಚಂದ್ರಪ್ರಕಾಶ್ , ವಾರಿಜಾ ಪುರುಷೋತ್ತಮ ಕುರುಂಜಿ, ವೇದಾವತಿ ಚಿನ್ನಪ್ಪ ಗೌಡ ಕುತ್ತಮೊಟ್ಟೆ, ಲೋಕೇಶ್ ಕುಮಾರ್ ದೊಡ್ಡೇರಿ, ಪ್ರಧಾನ ಅರ್ಚಕ ಕೇಶವ ಮೂರ್ತಿ ಇವರುಗಳನ್ನು ಸದಸ್ಯರಾಗಿ...

ಕರ್ಲಪ್ಪಾಡಿ ಶ್ರೀ ಶಾಸ್ತಾವೇಶ್ವರ ದೇವಸ್ಥಾನ ಜಾತ್ರೋತ್ಸವ ಸಮಿತಿ ರಚನೆ – ಅಧ್ಯಕ್ಷ ಪ್ರೋ. ಮನಮೋಹನ ಮುಡೂರು, ಪ್ರ. ಕಾರ್ಯದರ್ಶಿ ಮಿಥುನ್ ಕರ್ಲಪ್ಪಾಡಿ

ಕರ್ಲಪ್ಪಾಡಿ ಶ್ರೀ ಶಾಸ್ತಾವೇಶ್ವರ ದೇವಸ್ಥಾನ ಕಾಲಾವಧಿ ಜಾತ್ರೋತ್ಸವದ ನೂತನ ಸಮಿತಿಯನ್ನು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಧನಂಜಯ ಅಡ್ಪಂಗಾಯರ ನೇತೃತ್ವದಲ್ಲಿ ರಚಿಸಲಾಯಿತು. ನೂತನ ಅಧ್ಯಕ್ಷರಾಗಿ ಪ್ರೋ. ಮನಮೋಹನ ಮುಡೂರು ಪ್ರಧಾನ ಕಾರ್ಯದರ್ಶಿಯಾಗಿ ಮಿಥುನ್ ಕರ್ಲಪ್ಪಾಡಿ ಅವಿರೋಧ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಪುಟ್ಟಣ್ಣ ಗೌಡ ಪಡ್ಡಂಬೈಲು , ಡಾ. ದಾಮೋದರ ನಾರಾಲು ಕಾರ್ಯದರ್ಶಿಯಾಗಿ ರೂಪಾನಂದ ಕರ್ಲಾಪ್ಪಾಡಿ ,ಮಾಧವ ಮುಡೂರು ಸದಸ್ಯರಾಗಿ...
Ad Widget

ಬಿದ್ದು ಸಿಕ್ಕಿದ ಪರ್ಸ್ ನ್ನು ಹಿಂತಿರುಗಿಸಿ ಮಾನವೀಯತೆ ಮರೆದ ಮಹಿಮಾ ಆಟೋ ವರ್ಕ್ಸ್ ನ ಮಾಲಕ ನವೀನ್

ಸುಳ್ಯ ಎಸ್ ಡಿ ಎ ಯು ಇದರ ಸುಳ್ಯ ತಾಲೂಕು ಅಧ್ಯಕ್ಷ ಶಾಫಿ ರವರ 7000 ಹಣ ಮತ್ತು ಇತರ ಅತ್ಯಮೂಲ್ಯ ದಾಖಲೆ ಗಳಿದ್ದ ಪರ್ಸ್ ಗಾಂಧಿನಗರದ ಆಸುಪಾಸಿನಲ್ಲಿ ಕಳೆದು ಹೋಗಿತ್ತು. ಇದು ಮಹಿಮಾ ಆಟೋ ವರ್ಕ್ಸ್ ನ ಮಾಲಕರಾದ ನವೀನ್ ಎಂಬವರಿಗೆ ಬಿದ್ದು ಸಿಕ್ಕಿದ್ದು ಅವರು ಪರ್ಸ್ ನಲ್ಲಿದ್ದ ದಾಖಲೆಗಳಿದ್ದ ಹೆಸರು ಮತ್ತು ವಿಳಾಸವನ್ನು...

ರಾಜ್ಯದ ಮಸೀದಿಗಳಲ್ಲಿ ಧ್ವನಿವರ್ಧಕ ತೆರವುಗೊಳಿಸಲು ಪೊಲೀಸ್ ಮಹಾನಿರ್ದೇಶಕ ಕಚೇರಿಯಿಂದ ಆದೇಶ

ರಾಜ್ಯಾದ್ಯಂತ ಮಸೀದಿಗಳಲ್ಲಿ ಅಳವಡಿಸಿರುವ ಧ್ವನಿವರ್ಧಕಗಳನ್ನು ತೆರವುಗೊಳಿಸಬೇಕೆಂದು ಕೋರಿ ವಕೀಲ ಹರ್ಷ ಮುತಾಲಿಕ್ ಎಂಬವರು ಸಲ್ಲಿಸಿದ ಮನವಿಯನ್ನು ಉಲ್ಲೇಖಿಸಿ ಕ್ರಮಕೈಗೊಳ್ಳುವಂತೆ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಸುತ್ತೋಲೆ ಹೊರಡಿಸಿದ್ದಾರೆ. ಆದೇಶದಲ್ಲಿ ಉಲ್ಲೇಖಿತ ಮನವಿಯನ್ನು ಲಗತ್ತಿಸಲಾಗಿದ್ದು, ಮನವಿಯಲ್ಲಿ ರಾಜ್ಯಾದ್ಯಂತ ಮುಸ್ಲಿಮ್ ಬಾಂಧವರು ಸಲ್ಲಿಸುವ ಪ್ರಾರ್ಥನೆಗಳಲ್ಲಿ ಹೆಚ್ಚು ಧ್ವನಿಯುಂಟಾಗುತ್ತಿದ್ದು, ಅವುಗಳಿಂದ ತೊಂದರೆಯುಂಟಾಗುತ್ತಿದ್ದು, ಈ ಬಗ್ಗೆ ಮಸೀದಿಗಳಿಂದ ಧ್ವನಿವರ್ಧಕವನ್ನು ತೆರವುಗೊಳಿಸಬೇಕೆಂದು ಆಕ್ಷೇಪಿಸಿರುತ್ತಾರೆ....

ಸುಳ್ಯದಲ್ಲಿ ಪೊಲೀಸರ ಕಾರ್ಯಚರಣೆ – ಕಾರಿನಲ್ಲಿ ಸಾಗಿಸುತ್ತಿದ್ದ ಗಾಂಜಾ ಸಹಿತ ಆರೋಪಿಗಳು ವಶಕ್ಕೆ

ಕೇರಳ ರಾಜ್ಯದ ರಿಜಿಸ್ಟರ್ ನಂಬರ್ ಹೊಂದಿರುವ ಕೆಂಪು ಬಣ್ಣದ ಸ್ವಿಫ್ಟ್ ಕಾರಿನಲ್ಲಿ ಲಕ್ಷಾಂತರ ಬೆಲೆ ಬಾಳುವ ಗಾಂಜಾವನ್ನು ಸಾಗಿಸುತ್ತಿರುವ ಖಚಿತ ಮಾಹಿತಿ ಮೇರೆಗೆ ಸುಳ್ಯ ಪೊಲೀಸರು ಮಾಲು ಸಮೇತ ಆರೋಪಿಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸರು ಹಿಂಬಾಲಿಸಿಕೊಂಡು ಬಂದು ಸುಳ್ಯ ಜ್ಯೋತಿ ವೃತ್ತದ ಬಳಿ ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ ಎಂದು ತಿಳಿದುಬಂದಿದೆ.

ಟವರ್ ನಿರ್ಮಾಣಕ್ಕೆ ಶಾಸಕರಿಂದ ಜಿಯೋ ಸಂಸ್ಥೆಗೆ ಪತ್ರ

ಸುಳ್ಯ ತಾಲೂಕಿನ ಮಡಪ್ಪಾಡಿ, ದೇವಚಳ್ಳ ಗ್ರಾಮದ ಕರಂಗಲ್ಲು, ಕೂತ್ಕುಂಜ ಗ್ರಾಮದ ಬಳ್ಳಕ, ಬಾಳುಗೋಡು ಪ್ರದೇಶಗಳಲ್ಲಿ ಸರಿಯಾದ ನೆಟ್ವರ್ಕ್ ಸಿಗದೇ ಇರುವುದರಿಂದ ಈ ಭಾಗದ ಜನರಿಗೆ, ಸಹಕಾರಿ ಸಂಘ, ಸ್ಥಳೀಯ ಸಂಸ್ಥೆ, ಧಾರ್ಮಿಕ ಸಂಸ್ಥೆಗಳಿಗೆ ತೊಂದರೆ ಉಂಟಾಗುತ್ತಿದ್ದು ಇದರಿಂದ ಈ ಪ್ರದೇಶದಲ್ಲಿ ಟವರ್ ಮುಖ್ಯವಾಗಿರುವುದರಿಂದ ಈ ಕುರಿತಂತೆ ಶಾಸಕ ಎಸ್.ಅಂಗಾರ ಜಿಯೋ ಕಂಪೆನಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ಸುಳ್ಯದ ಪ್ರತಿಷ್ಠಿತ ಮೊಬೈಲ್ ಸಂಸ್ಥೆಯೊಂದು ಪುಕ್ಕಟೆ ಪ್ರಚಾರ ಪಡೆಯುತ್ತಿದೆ – ಬಹುಮಾನ ಕೊಡದೇ ಮೋಸ ಮಾಡಿದೆ ಎಂಬ ಬರಹ ಜಾಲತಾಣದಲ್ಲಿ ವೈರಲ್ – ಸಂಸ್ಥೆಯ ಮಾಲಕರಿಂದ ಸ್ಪಷ್ಟನೆ

ಕಳೆದ ಕೆಲವು ದಿನಗಳ ಹಿಂದಿನಿಂದ ಸುಳ್ಯದ ಕೆಲವು ಮೊಬೈಲ್ ಅಂಗಡಿ ಗಳು ತಮ್ಮ ಸಂಸ್ಥೆಯ ಪ್ರಚಾರ ಪತ್ರದೊಂದಿಗೆ ಜಾಹೀರಾತನ್ನು ಪ್ರಕಟಿಸಿ ಈ ಜಾಹೀರಾತನ್ನು ಸಾರ್ವಜನಿಕರು ತಮ್ಮ ತಮ್ಮ ಮೊಬೈಲ್ ನಲ್ಲಿ ಸ್ಟೇಟಸ್ ಆಗಿಸಿ ಅದರಲ್ಲಿ 500 ಮತ್ತು 200 ವೀಕ್ಷಕರನ್ನು ಮಾಡಿದರೆ ಅವರಿಗೆ ಸಂಸ್ಥೆಯ ವತಿಯಿಂದ ಸೂಕ್ತ ಬಹುಮಾನ ನೀಡುವುದಾಗಿ ಪ್ರಚಾರಪಡಿಸಿದ್ದರು. ಕೆಲವು ಅಂಗಡಿಗಳು ಒಂದು...

ಅತಿವೃಷ್ಟಿ ಪೀಡಿತ ತಾಲೂಕು ಪಟ್ಟಿಗೆ ಸುಳ್ಯ ಸೇರ್ಪಡೆ

ಇತ್ತೀಚೆಗೆ ಸರಕಾರ ಘೋಷಿಸಿದ ಅತಿವೃಷ್ಟಿ ಪೀಡಿತ ತಾಲೂಕು ಪಟ್ಟಿಯಲ್ಲಿ ಸುಳ್ಯ ವನ್ನು ಕೈಬಿಡಲಾಗಿತ್ತು. ಇದಕ್ಕೆ ಭಾರಿ ವಿರೋಧ ವ್ಯಕ್ತವಾಗಿತ್ತು. ಈ ಬಗ್ಗೆ ಶಾಸಕ ಎಸ್ ಅಂಗಾರ ರವರು ಸಚಿವರು ಮುಖಾಂತರ ಒತ್ತಡ ತಂದ ಹಿನ್ನೆಲೆಯಲ್ಲಿ ಸುಳ್ಯ ತಾಲೂಕನ್ನು ಸೇರ್ಪಡೆಗೊಳಿಸಿ ಸರಕಾರ ಆದೇಶ ಮಾಡಿದೆ.

ಕ್ರೀಡಾ ಕ್ಷೇತ್ರದ ಪ್ರಶಸ್ತಿ ಘೋಷಣೆ : ಸಾಧಕರಿಗೆ ನಮ್ಮದೊಂದು ಸೆಲ್ಯೂಟ್

ಮೂರು ವರ್ಷಗಳಿಂದ ಬಾಕಿಯುಳಿದಿದ್ದ ರಾಜ್ಯದ ಪ್ರತಿಷ್ಠಿತ ಕ್ರೀಡಾ ಪ್ರಶಸ್ತಿಗಳಾದ ಏಕಲವ್ಯ, ಕರ್ನಾಟಕ ಕ್ರೀಡಾರತ್ನ, ಜೀವಮಾನ ಸಾಧನೆ ಮತ್ತು ಕ್ರೀಡಾ ಪೋಷಕ ಪ್ರಶಸ್ತಿಗಳನ್ನು ರಾಜ್ಯದ ಕ್ರೀಡಾ ಇಲಾಖೆ ಸಚಿವರಾದ ಸಿ.ಟಿ.ರವಿ ಅವರು ನ.೧ರಂದು ಬಿಡುಗಡೆಗೊಳಿಸಿದ್ದರು. ನಂತರ ನ. ೨ರಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪರ ನೇತೃತ್ವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ೨೦೧೭, ೨೦೧೮, ೨೦೧೯ನೇ ಸಾಲಿನ...

ಪತ್ರಕರ್ತರ ಮನವಿಗೆ ಸಚಿವ ಈಶ್ವರಪ್ಪ ಸ್ಪಂದನೆ : ಮಡಪ್ಪಾಡಿ ಗ್ರಾಮದ ರಸ್ತೆ ಅಭಿವೃದ್ಧಿಗೆ 2 ಕೋಟಿ ಬಿಡುಗಡೆಗೆ ಸೂಚನೆ

ಮಂಗಳೂರು ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಕಳೆದ ಜನವರಿ 5 ರಂದು ಗ್ರಾಮ ವಾಸ್ತವ್ಯ ಮಾಡಿದ್ದ ಸುಳ್ಯ ತಾಲೂಕಿನ ಮಡಪ್ಪಾಡಿ ಗ್ರಾಮದ ಸಮಗ್ರ ಅಭಿವೃದ್ಧಿಗೆ ವಿಶೇಷ ಅನುದಾನ ಘೋಷಣೆ ಮಾಡಬೇಕು ಎಂದು ಆಗ್ರಹಿಸಿ ದ.ಕ‌.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವರಾದ ಕೆ.ಎಸ್.ಈಶ್ವರಪ್ಪ, ಆರ್.ಅಶೋಕ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು. ಇದಕ್ಕೆ...
Loading posts...

All posts loaded

No more posts

error: Content is protected !!