Ad Widget

ಮಡಿಕೇರಿ : ಅಕ್ರಮ ಸಕ್ರಮ ಸಮಿತಿ ಸದಸ್ಯರಾಗಿ ಸುಬ್ರಹ್ಮಣ್ಯ ಉಪಾಧ್ಯಾಯ

ಅಕ್ರಮ ಸಕ್ರಮ ಸಮಿತಿಗೆ ಸಮಿತಿ ಸದಸ್ಯರಾಗಿ ಚೆಂಬು ಗ್ರಾಮದ ಸುಬ್ರಹ್ಮಣ್ಯ ಉಪಾಧ್ಯಾಯ ರವರನ್ನು ಸರಕಾರ ನೇಮಕ ಮಾಡಿದೆ. ವೀರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೊಳಪಡುವ ಮಡಿಕೇರಿ ತಾಲ್ಲೂಕಿನ 22 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಕ್ರಮ - ಸಕ್ರಮ ಸಮಿತಿಯ ಅಧ್ಯಕ್ಷರಾಗಿ ಶಾಂತೆಯಂಡ ರವಿಕುಶಾಲಪ್ಪರವರನ್ನು ನೇಮಿಸಿ ಸರಕಾರ ಆದೇಶ ಹೊರಡಿಸಿದೆ. ಇದೀಗ ಅಕ್ರಮ ಸಕ್ರಮ ಸಮಿತಿಯಲ್ಲಿ ವಿಲೇವಾರಿಗೆ ಬಾಕಿಯಿರುವ ಸಾರ್ವಜನಿಕರ...

ಸಂಪಾಜೆ : ಅರಮನೆತೋಟ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ದೀಪಾವಳಿ – ಸನ್ಮಾನ

ಸಂಪಾಜೆಯ ಅರಮನೆತೋಟ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ನ.16 ರಂದು ದೀಪಾವಳಿ, ಬಲಿ ಪಾಡ್ಯಮಿ ಹಾಗೂ ವೃಶ್ಚಿಕ ಸಂಕ್ರಾಂತಿ ಪೂಜೆ ನಡೆಯಿತು. ಪೂಜಾ ವಿಧಿವಿಧಾನಗಳ ನಂತರ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದ ಧಾರ್ಮಿಕ ಕಾರ್ಯದಲ್ಲಿ ಸೇವೆ ಸಲ್ಲಿಸಿದ ಹಿರಿಯ ಮಾರ್ಗದರ್ಶಕ ರಾಗಿರುವ ಐತ ಮೊಗೇರ ಇವರನ್ನು ಸ್ಮರಣಿಕೆ ನೀಡಿ ಶಾಲು ಹೊದಿಸಿ ಸನ್ಮಾನಿಸಲಾಯಿತು.
Ad Widget

ಗುತ್ತಿಗಾರು : ಶಾಲಾ ಮೈದಾನದ ಸಮೀಪದಲ್ಲಿ ಬಾಟಲಿ ಎಸೆದು ಹೋಗುತ್ತಿರುವ ಮದ್ಯಪ್ರಿಯರು – ಮಕ್ಕಳಿಗೆ ತೊಂದರೆ ಆಗಬಾರದೆಂದು ಸ್ಥಳೀಯರಿಂದ ಸ್ವಚ್ಛತೆ

ಗುತ್ತಿಗಾರು : ಬಾರ್ ಗೆ ತೆರಳುವ ಮದ್ಯಪ್ರಿಯರಿಗೆ ಶಾಲಾ ಮೈದಾನವೆಂಬ ಅರಿವಿಲ್ಲದೆಯೋ ಅಥವಾ ಅಮಲಿನ ಭರದಲ್ಲಿಯೋ ಕುಡಿದು ಬಾಟಲ್, ಪ್ಯಾಕೆಟ್ ಗಳನ್ನು ಎಸೆದು ಹೋಗುತ್ತಿದ್ದಾರೆ ಎಂಬ ದೂರು ಹಲವು ಸಮಯದಿಂದ ಕೇಳಿ ಬರುತ್ತಿದ್ದವು. ಸರಕಾರಿ ಆಸ್ಪತ್ರೆಯ ಸಮೀಪ ಶಾಲಾ ಮೈದಾನದ ಮೂಲಕ ಹಲವಾರು ಮದ್ಯಪ್ರಿಯರ ಸಂಚಾರ ಜೋರಾಗಿಯೇ ಇದೆ. ಶಾಲಾ ಮೈದಾನಕ್ಕೆ ಸಂಪೂರ್ಣ ಆವರಣ ಗೋಡೆ...

ಪಂಜ ಪಂಚಲಿಂಗೇಶ್ವರ ದೇವಳದಲ್ಲಿ ದೀಪಾವಳಿ ಆಚರಣೆ

ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ದೀಪಾವಳಿ ಪ್ರಯುಕ್ತ ಬಲೀಂದ್ರ ಪೂಜೆ ಹಾಗೂ ವಿಶೇಷವಾಗಿ ಗೋಪೂಜೆ ಮಾಡಲಾಯಿತು.ಈ ಸಂದರ್ಭದಲ್ಲಿ ಡಾಕ್ಟರ್ ದೇವಿಪ್ರಸಾದ್ ಕಾನತ್ತೂರು ಆಡಳಿತಾಧಿಕಾರಿಗಳು ಪರಿವಾರ ಪಂಚಲಿಂಗೇಶ್ವರ ದೇವಸ್ಥಾನ ಪಂಜ ಹಾಗೂ ದಂಪತಿ, ಅರ್ಚಕರಾದ ಶ್ರೀ ನಾಗರಾಜ್ ಹೆಗ್ಡೆ, ಶ್ರೀರಾಮಚಂದ್ರ ಭಟ್ ಹಾಗೂ ಊರವರು ಉಪಸ್ಥಿತರಿದ್ದರು.

ನಾಗತೀರ್ಥ: ಮಿತ್ರ ಮಂಡಲ ಇದರ ಆಶ್ರಯದಲ್ಲಿ ದೀಪಾವಳಿ ಕಪ್ 2020 ಮತ್ತು ಡಾ| ದೇವಿಪ್ರಸಾದ್ ಕಾನತ್ತೂರು ಅವರಿಗೆ ಗೌರವಾರ್ಪಣೆ

ಮಿತ್ರ ಮಂಡಲ ನಾಗತೀರ್ಥ ಇದರ ಆಶ್ರಯದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ದೀಪಾವಳಿ ಕಪ್ -2020 ಹಾಗೂ ಡಾ||ದೇವಿಪ್ರಸಾದ್ ಕಾನತ್ತೂರ್ ಅವರಿಗೆ ಗೌರವಾರ್ಪಣೆ ಉದ್ಘಾಟನಾ ಸಮಾರಂಭವನ್ನು ಪಂಜ ಪಂಚಲಿಂಗೇಶ್ವರ ದೇವಸ್ಥಾನದ ಅರ್ಚಕರಾದ ನಾಗರಾಜ್ ಹೆಗ್ಡೆ ಅವರು ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಮಾಧವ ಗೌಡ ಬಿ.ಕೆ ಅಧ್ಯಕ್ಷರು ಸುಳ್ಯ ತಾಲೂಕು ಕಬಡ್ಡಿ ಅಸೋಸಿಯೇಷನ್, ಪಂಜ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತಾಧಿಕಾರಿಗಳಾದ...

ಸ್ವದೇಶಿ ವಸ್ತುಗಳ ಬಳಕೆ ಮತ್ತು ತಯಾರಿಕೆಗೆ ಉತ್ತೇಜನ ಕೊಡೋಣ

ಸ್ವಾತಂತ್ರ್ಯ ಬಂದ ಬಳಿಕ ಒಂದು ಚಿಕ್ಕ ಸೂಜಿಯಿಂದ ಹಿಡಿದು ದೊಡ್ಡ ದೊಡ್ಡ ಯಂತ್ರಗಳ ವರೆಗೂ ಹೆಚ್ಚಿನ ವಸ್ತುಗಳಿಗೆ ವಿದೇಶ ಗಳನ್ನು ಅವಲಂಬಿಸಬೇಕಾಗಿತ್ತು. ಬಳಿಕ ಸರಕಾರಗಳು ಪ್ರಯತ್ನದಿಂದ ನಮ್ಮ ದೇಶದಲ್ಲೇ ವಿವಿಧ ಕಾರ್ಖಾನೆಗಳು ಹೆಚ್ಚೆಚ್ಚೂ ಬೆಳೆಯತೊಡಗಿತು. ಇದೀಗ ಸನ್ಮಾನ್ಯ ಶ್ರೀ ನರೇಂದ್ರ ಮೋದಿ ಯವರ ಸರ್ಕಾರದಲ್ಲಿ ಸ್ವದೇಶಿ ವಸ್ತುಗಳ ಉತ್ಪಾದನೆ ಹಾಗೂ ಬಳಕೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ....

ಮಾವಿನಕಟ್ಟೆ : ಶ್ರೀ ಶಭರೀಶ ಎಲೆಕ್ಟ್ರಿಕಲ್ ಸೇಲ್ಸ್ & ಸರ್ವಿಸ್ ಉದ್ಘಾಟನೆ

ಮಾವಿನಕಟ್ಟೆಯ ಶ್ರೀ ಶಭರೀಶ ಕಾಂಪ್ಲೆಕ್ಸ್ ನಲ್ಲಿ ನ.4 ರಂದು ವಿಜೇತ್ ಎಂ ಮಾಲೀಕತ್ವದ ಶ್ರೀ ಶಭರೀಶ ಎಲೆಕ್ಟ್ರಿಕಲ್ ಸೇಲ್ಸ್ & ಸರ್ವಿಸ್ ಉದ್ಘಾಟನೆ ಗೊಂಡಿತು. ಈ ಸಂದರ್ಭದಲ್ಲಿ ದೇರಣ್ಣ ಗೌಡ, ಕೃಷ್ಣಪ್ಪಗೌಡ ಮಾವಿನಕಟ್ಟೆ ಹೊನ್ನಪ್ಪಗೌಡ ಮಾವಿನಕಟ್ಟೆ,ವೆಂಕಟ್ರಮಣ ಗೌಡ ಕುಚ್ಚಾಲ, ಸುಬ್ರಮಣ್ಯ ಪಾರೆಪ್ಪಾಡಿ, ಭಾಸ್ಕರ ಮೆದು ಹಾಗು ಊರವರು ಆಗಮಿಸಿದ್ದರು.

ಯು.ಸಂ‌.ಮಂಡಳಿ ಹಾಗೂ ಗರುಡ ಯುವಕ ಮಂಡಲದಿಂದ ಅಕ್ಕೋಜಿಪಾಲ್ ಕಾಲೋನಿಯಲ್ಲಿ ವಸ್ತ್ರದಾನ ಮತ್ತು ದೀಪಾವಳಿ ಆಚರಣೆ

ಯುವಜನ ಸಂಯುಕ್ತ ಮಂಡಳಿ (ರಿ) ಸುಳ್ಯ ಮತ್ತು ಗರುಡ ಯುವಕ ಮಂಡಲ (ರಿ) ಚೊಕ್ಕಾಡಿ ಇದರ ಜಂಟಿ ಆಶ್ರಯದಲ್ಲಿ ನ.15 ರಂದು ಸಂಜೆ ಅಕ್ಕೋಜಿಪಾಲ್ ಕಾಲೋನಿಯಲ್ಲಿ ವಸ್ತ್ರದಾನ ಮತ್ತು ದೀಪಾವಳಿ ಆಚರಣೆ ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಗರುಡ ಯುವಕ ಮಂಡಲದ ಸ್ಥಾಪಕ ಅಧ್ಯಕ್ಷರಾದ ಶ್ರೀಧರ್ ಕರ್ಮಾಜೆಯವರು ಭಾಗವಹಿಸಿದ್ದರು, ಸಭಾಧ್ಯಕ್ಷತೆಯನ್ನು ಯುವಜನ ಸಂಯುಕ್ತ ಮಂಡಳಿ...

ದೀಪಗಳ ಹಬ್ಬ….. ದೀಪಾವಳಿ

ಸಾಲು ಸಾಲು ದೀಪಗಳಿಂದ ದೀಪಗಳನ್ನು ಹಚ್ಚಿ ಸಂಭ್ರಮಿಸುವ ದಿನ. ಅಜ್ಞಾನದಿಂದ ಸುಜ್ಞಾನದೆಡೆಗೆ, ಅಂಧಕಾರದಿಂದ ಬೆಳಕಿನೆಡೆಗೆ ಸಾಗುವ ದಿನವೇ ದೀಪಾವಳಿ ಹಬ್ಬ ಎಂದರೆ ತಪ್ಪಾಗಲಾರದು. ಮನೆಯನ್ನು, ಮನಗಳನ್ನು ಬೆಳಗುತ್ತಾ ಸಮಗ್ರ ಕುಟುಂಬವನ್ನು ತನ್ನ ಪರಿಸರದ ಜತೆ ಬೆಸೆದು ಸಂಭ್ರಮವನ್ನು ಹೆಚ್ಚಿಸುವಂಥ ಶುಭ ದಿನ. ಕತ್ತಲು ಕಳೆದು ಬಾಳಲ್ಲಿ ಬೆಳಕು ಮೂಡಿಸುವ ದೀಪಾವಳಿಗೆ ದೀಪ + ಅವಳಿ, ಅಂದರೆ...

ದೀಪಾವಳಿ ಅಂಗವಾಗಿ ಬಿಜೆಪಿ ಕಾರ್ಯಕರ್ತರಿಂದ ಬಡಕುಟುಂಬಕ್ಕೆ ಅಗತ್ಯವಸ್ತುಗಳ ನೆರವು

ಸುಳ್ಯ ಜಯನಗರ 19ನೇ ವಾರ್ಡಿನಲ್ಲಿ ಬಡ ಕುಟುಂಬದ ಯಜಮಾನ ಅನಾರೋಗ್ಯದಿಂದ ಬಳಲುತ್ತಿದ್ದು ಸಂಕಷ್ಟದ ಪರಿಸ್ಥಿತಿಯಲ್ಲಿ ಇದ್ದಾರೆ. ಇದನ್ನು ಗಮನಿಸಿದ ಜಯನಗರ 19ನೇ ವಾರ್ಡಿನ ಬಿಜೆಪಿ ಪಕ್ಷದ ಕಾರ್ಯಕರ್ತರು ಸ್ಥಳೀಯ ನಗರ ಪಂಚಾಯತ್ ಸದಸ್ಯೆ ಶಿಲ್ಪಾ ಸುದೇವ ರವರ ನೇತೃತ್ವದಲ್ಲಿ ಬಡಕುಟುಂಬಕ್ಕೆ ದೀಪಾವಳಿ ಹಬ್ಬ ಆಚರಿಸಲು ಬೇಕಾಗಿರುವ ಆಹಾರ ಸಾಮಾಗ್ರಿಗಳು ಮತ್ತು ನೂತನ ಉಡುಪುಗಳನ್ನು ನೀಡಿ ದೀಪಾವಳಿ...
Loading posts...

All posts loaded

No more posts

error: Content is protected !!