Ad Widget

ಸುಳ್ಯ ತಾಲೂಕು ಅಂಬೇಡ್ಕರ್ ತತ್ವರಕ್ಷಣಾ ವೇದಿಕೆ ವತಿಯಿಂದ ತಹಶೀಲ್ದಾರ್ ಅನಂತಶಂಕರ್‌ರವರಿಗೆ ಹೂಗುಚ್ಛ ನೀಡಿ ಕೃತಜ್ಞತೆ


ಸುಳ್ಯ ತಾಲೂಕು ಕಸಬಾ ಗ್ರಾಮದ ಕಲ್ಲುಮುಟ್ಲು ನಿವಾಸಿ ಜಯರಾಮ ಎಂಬುವವರ ಮನೆ ಕಳೆದ ಮಳೆಗಾಲದಲ್ಲಿ ಭೂಕುಸಿತಕ್ಕೊಳಗಾಗಿ ಇಲಾಖೆಗಳಿಂದ ಯಾವುದೇ ಪರಿಹಾರ ಸಿಗದೇ ಸಂಕಷ್ಟದಲ್ಲಿದ್ದರು. ಈ ಸಂದರ್ಭದಲ್ಲಿ ಸುಳ್ಯ ತಾಲೂಕು ಅಂಬೇಡ್ಕರ್ ತತ್ವರಕ್ಷಣಾ ವೇದಿಕೆ ಅಧ್ಯಕ್ಷ ಪಿ. ಸುಂದರ ಪಾಟಾಜೆರವರು ಇವರಿಗೆ ಪರಿಹಾರ ಒದಗಿಸುವ ಕುರಿತು ಜಿಲ್ಲಾಧಿಕಾರಿಯವರಿಗೆ ಹಾಗೂ ಸುಳ್ಯ ತಹಶೀಲ್ದಾರ್ ಅನಂತಶಂಕರ್‌ರವರಿಗೆ ಮನವಿ ಮಾಡಿಕೊಂಡಿದ್ದರು. ಇದಕ್ಕೆ ಸ್ಪಂದಿಸಿದ ತಹಶೀಲ್ದಾರ್ ಅನಂತಶಂಕರ್ ಸರಕಾರದಿಂದ ಬರಬೇಕಾಗಿದ್ದ ಪರಿಹಾರದ ಮೊತ್ತ 25,೦೦೦ರೂ.ಗಳ ಚೆಕ್‌ನ್ನು ತರಿಸುವ ಮೂಲಕ ಸಂತ್ರಸ್ತರಿಗೆ ಸ್ಪಂದನೆ ನೀಡಿದ್ದಾರೆ. ಇವರ ಈ ಕಾರ್ಯಕ್ಕೆ ಸುಳ್ಯ ತಾಲೂಕು ಅಂಬೇಡ್ಕರ್ ತತ್ವರಕ್ಷಣಾ ವೇದಿಕೆ ವತಿಯಿಂದ ಅಧ್ಯಕ್ಷ ಸುಂದರ ಪಾಟಾಜೆಯವರು ನ.23ರಂದು ತಹಶೀಲ್ದಾರವರಿಗೆ ಹೂಗುಚ್ಛವನ್ನು ನೀಡಿ ಅಭಿನಂದಿಸಿದರು.  
ಈ ಸಂದರ್ಭದಲ್ಲಿ ಸಮಿತಿ ಸದಸ್ಯ ಭರತ್ ಹಾಗೂ ಸುಳ್ಯ ಕಂದಾಯ ನಿರೀಕ್ಷಕ ಕೊರಗಪ್ಪ ಹೆಗ್ಡೆ ಉಪಸ್ಥಿತರಿದ್ದರು. 

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading