Ad Widget

ದೇವಚಳ್ಳ: ಹೆಣ್ಣು ಶಿಶು ಪ್ರದರ್ಶನ ಕಾರ್ಯಕ್ರಮ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸುಳ್ಯ ಶಿಶು ಅಭಿವೃದ್ಧಿ ಯೋಜನೆಯ ಜಂಟಿ ಆಶ್ರಯದಲ್ಲಿ ಬಿಬಿಬಿಪಿ ಯೋಜನೆಯಡಿ ಗ್ರಾಮ ಮಟ್ಟದ ಹೆಣ್ಣು ಮಕ್ಕಳ ಶಿಶು ಪ್ರದರ್ಶನ ಕಾರ್ಯಕ್ರಮ ದೇವಚಳ್ಳ ಗ್ರಾಮ ಪಂಚಾಯತ್‌ನಲ್ಲಿ ನಡೆಯಿತು. ಕಾರ್ಯಕ್ರಮವನ್ನು ದೇವಚಳ್ಳ ಗ್ರಾ.ಪಂ ನ ನಿಕಟಪೂರ್ವ ಅಧ್ಯಕ್ಷ ದಿವಾಕರ ಮುಂಡೋಡಿ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ತ್ರೀಶಕ್ತಿ ಗೊಂಚಲಿನ ಪ್ರತಿನಿಧಿ ಸಾವಿತ್ರಿ ಕಣೆಮರಡ್ಕ...

ನ.22 : ಬೆಳ್ಳಾರೆಯಲ್ಲಿ ಸಿಂಚನ ಡೆವಲಪ್ಪರ್ಸ್ ರಬ್ಬರ್ ಖರೀದಿ ಕೇಂದ್ರ ಶುಭಾರಂಭ

ಬೆಳ್ಳಾರೆಯ ಮೇಲಿನ ಪೇಟೆಯಲ್ಲಿರುವ ಮಾಸ್ತಿಕಟ್ಟೆ ಮೊಯಿದೀನ್ ಕಾಂಪ್ಲೆಕ್ಸ್ ನಲ್ಲಿ ಲೋಕೇಶ್ ಮೊಗಪ್ಪೆ ಮತ್ತು ಶಶಿಕುಮಾರ್ ಮೊಗಪ್ಪೆ ಮಾಲಕತ್ವದ ಸಿಂಚನ ಡೆವಲಪ್ಪರ್ಸ್ ರಬ್ಬರ್ ಖರೀದಿ ಕೇಂದ್ರ ನ.22 ರಂದು (ನಾಳೆ) ಶುಭಾರಂಭಗೊಳ್ಳಲಿದೆ. ಇಲ್ಲಿ ಗ್ರೇಡ್ ರಬ್ಬರ್, ಲೋಟ್ ರಬ್ಬರ್ ಮತ್ತು ರಬ್ಬರ್ ಸ್ಕ್ರಾಪ್ ಗಳನ್ನು ಉತ್ತಮ ದರದಲ್ಲಿ ಖರೀದಿಸಲಾಗುವುದೆಂದು ಮಾಲಕರು ತಿಳಿಸಿರುತ್ತಾರೆ.
Ad Widget

ಕೇಂದ್ರ ಮತ್ತು ರಾಜ್ಯ ಸರಕಾರ ಕಾರ್ಮಿಕರ ಕಾನೂನುಗಳನ್ನು ಬದಲಿಸಿ ಪ್ರಶ್ನೆ ಮಾಡುವ ಹಕ್ಕನ್ನು ಕಸಿದು, ದುಡಿಯುವ ವರ್ಗದ ಬೆನ್ನೆಲುಬನ್ನೇ ಮುರಿಯುವಂತೆ ಮಾಡಿದ್ದಾರೆ : ಕೆ.ಪಿ.ಜಾನಿ

ಕೋವಿಡ್ 19 ರ ಹಿನ್ನೆಲೆಯಲ್ಲಿ ಲಾಕ್ ಡೌನ್ ನಂತರದಲ್ಲಿ ಕಾರ್ಮಿಕ ವರ್ಗ ಮತ್ತು ರೈತಾಪಿ ವರ್ಗಗಳು ಅಡಳಿತದ ಕಡೆಯಿಂದ ಹೊಡೆತ ಮೇಲೆ ಹೊಡೆತ ತಿನ್ನುತ್ತಲೇ ಇದೆ. ಮಾತ್ರವಲ್ಲ ಮಹಾಮಾರಿ ವೈರಸ್ಸಿನಿಂದ ಹೊಡೆತ ಒಂದು ಕಡೆಯಾದರೆ ಸ್ವಯಂಕೃತ ಅಪರಾದವೆನ್ನಬಹುದಾದ ರೀತಿಯಲ್ಲಿ ಸರಕಾರಗಳು ದೇಶಕ್ಕೆ ಅನ್ನ ನೀಡುವ ರೈತರನ್ನು ದಮನಿಸುವ ಕಾರ್ಯ ಗಳನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು...

ಗುತ್ತಿಗಾರು : ಎಸ್.ಬಿ.ಗ್ರೂಪ್ಸ್ ಆನ್ಲೈನ್ ಸೇವೆ ಮತ್ತು ಡಿಜಿಟಲ್ ಪ್ರಿಂಟಿಂಗ್ ಶುಭಾರಂಭ

ದುಷ್ಯಂತ್ ಶೀರಡ್ಕ ಮಾಲೀಕತ್ವದ ಎಸ್.ಬಿ.ಗ್ರೂಪ್ಸ್ ಆನ್ಲೈನ್ ಸೇವೆಗಳು ಮತ್ತು ಡಿಜಿಟಲ್ ಪ್ರಿಂಟಿಂಗ್ ಇಂದು ( ನ.21) ಗುತ್ತಿಗಾರು ಶ್ರೀಹರಿ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಂಡಿದೆ. ಚಿನ್ನಪ್ಪ ಗೌಡ ಶೀರಡ್ಕ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಾಜ್ಯ ಅರೇಭಾಷೆ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಶ್ರೀ ಪಿ.ಸಿ.ಜಯರಾಮ, ದೇವಚಳ್ಳ ಗ್ರಾಮ ಪಂಚಾಯತ್ ಸದಸ್ಯರಾದ ಶೈಲೇಶ್...

ಪಡ್ಪಿನಂಗಡಿ : ಹೆಣ್ಣುಮಕ್ಕಳ ಶಿಶು ಪ್ರದರ್ಶನ ಮತ್ತು ಕಿಶೋರಿ ಮಾಹಿತಿ ಕಾರ್ಯಾಗಾರ

ದ.ಕ.ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಸುಳ್ಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಪ್ತಶ್ರೀ ಗೊಂಚಲು ಕಲ್ಮಡ್ಕ ಮತ್ತು ಗ್ರಾಮ ಪಂಚಾಯತ್ ಕಲ್ಮಡ್ಕ ಇದರ ಆಶ್ರಯದಲ್ಲಿ ಹೆಣ್ಣು ಮಗುವನ್ನು ರಕ್ಷಿಸಿ ಹೆಣ್ಣು ಮಕ್ಕಳನ್ನು ಓದಿಸಿ ಕಾರ್ಯಕ್ರಮದಡಿಯಲ್ಲಿ ಹೆಣ್ಣು ಮಕ್ಕಳ ಶಿಶು ಪ್ರದರ್ಶನ ಮತ್ತು ಕಿಶೋರಿಯರಿಗೆ ಮಾಹಿತಿ ಕಾರ್ಯಾಗಾರವು...

ಕಸ್ತೂರಿ ರಂಗನ್ ವರದಿ ಜಾರಿ ವಿರುದ್ಧದ ಪ್ರತಿಭಟನಾ ಸಭೆಯ ಪೂರ್ವಭಾವಿಯಾಗಿ ಇಂದು ಬೈಕ್ ಜಾಥಾ

ಕಸ್ತೂರಿ ರಂಗನ್ ವರದಿ ವಿರುಧ್ಧದ ಮಲೆನಾಡು ಜನಹಿತ ರಕ್ಷಣಾ ವೇದಿಕೆ ನೇತೃತ್ವದಲ್ಲಿ (ನ.27)ನಡೆಯಲಿರುವ ಪ್ರತಿಭಟನಾ ಸಭೆಯ ಪೂರ್ವಭಾವಿಯಾಗಿ ಹಮ್ಮಿಕೊಂಡ ಜಾಗೃತಿ ಜಾಥಾ ನ.21 ರಂದು ಮಧ್ಯಾಹ್ನ 1.30 ಕ್ಕೆ ಕುಕ್ಕೆ ಸುಬ್ರಹ್ಮಣ್ಯ ದಿಂದ ಹೊರಡಲಿದೆ. ಯಜ್ಙೇಶ್ ಆಚಾರ್ ಜಾಥಾ ಕ್ಕೆ ಚಾಲನೆ ನೀಡಲಿದ್ದಾರೆ. ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ, ಪತ್ರಕರ್ತ ಮಹೇಶ್ ಪುಚ್ಚಪ್ಪಾಡಿ, ರಾಜಕೀಯ ನೇತಾರರಾದ...
error: Content is protected !!