- Tuesday
- December 3rd, 2024
ರಾಷ್ಟ್ರೀಯ ಗಂಥಾಲಯ ಸಪ್ತಾಹದ ಅಂಗವಾಗಿ ಇಲಾಖಾ ವತಿಯಿಂದ ನೀಡುವ ಗ್ರಂಥಾಲಯ ಸಿಬ್ಬಂದಿ ಸೇವಾ ಪುರಸ್ಕಾರಕ್ಕೆ ದೇವಚಳ್ಳ ಗ್ರಂಥಾಲಯ ಮೇಲ್ವಿಚಾರಕಿ ಸಾವಿತ್ರಿರಾಮ್ ಕಣೆಮರಡ್ಕ ಭಾಜನರಾಗಿದ್ದರು . ಇವರಿಗೆ ಇಂದು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪ್ರಶಸ್ತಿ ನೀಡಿ ಗೌರವಿಸಿದರು. ಇವರು ಮಂಡೆಕೋಲು ಗ್ರಾಮದ ಉಪ ಅಂಚೆ ಪಾಲಕ ಸೀತಾರಾಮ ಕಣೆಮರಡ್ಕ ಇವರ ಪತ್ನಿ.
ಅಮರ ಸುಳ್ಯ ಸುದ್ದಿ ಪತ್ರಿಕೆಯ ವತಿಯಿಂದ ವರ್ಷಂಪ್ರತಿ ದೀಪಾವಳಿ ವಿಶೇಷಾಂಕ ಹೊರತರುತ್ತಿದ್ದು ಈ ಬಾರಿ ನಾಲ್ಕನೆಯ ಯಶಸ್ವಿ ಸಂಚಿಕೆ ಮಾರುಕಟ್ಟೆಗೆ ಬಿಡುಗಡೆ ಗೊಂಡಿರುತ್ತದೆ. ಈ ವಿಶೇಷಾಂಕದ ಆಕರ್ಷಣೀಯ ಭಾಗದಲ್ಲಿ ಒಂದಾಗಿರುವ ಮುದ್ದು ಕಂದ ಫೋಟೋ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಸುಮಾರು ನೂರಕ್ಕೂ ಹೆಚ್ಚು ಮಕ್ಕಳ ಫೋಟೋಗಳು ಬಂದಿದ್ದು ಅದರಲ್ಲಿ ಆಯ್ಕೆದಾರರ ಮನಮುಟ್ಟುವಲ್ಲಿ ಮೂವರು ಮಕ್ಕಳ...
ಪುತ್ತೂರು ಕಡೆಯಿಂದ ಸುಳ್ಯದ ಕಡೆಗೆ ಬರುತ್ತಿದ್ದ ಬೈಕ್ ಗೆ ದನ ಅಡ್ಡ ಬಂದ ಪರಿಣಾಮ ಬೈಕ್ ಪಲ್ಟಿ ಹೊಡೆದು ಇಬ್ಬರು ಯುವಕರು ಗಾಯಗೊಂಡ ಘಟನೆ ನಿನ್ನೆ ರಾತ್ರಿ ವರದಿಯಾಗಿದೆ. ಬೈಕ್ ನಲ್ಲಿದ್ದ ಅರಂತೋಡು ಗ್ರಾಮದ ಪಿಂಡಿಮನೆ ಸಂತೋಷ್ ಮತ್ತು ಪ್ರವೀಣ್ ಎಂಬವರು ಗಾಯಗೊಂಡವರು. ಪ್ರವೀಣ್ ಎಂಬವರಿಗೆ ಗಂಭೀರ ಗಾಯಗೊಂಡಿದ್ದು, ಸಂತೋಷ್ ಅಲ್ಪ ಸ್ವಲ್ಪ ಗಾಯಗಳಿಂದ ಪಾರಾಗಿದ್ದಾರೆ....
ದುಷ್ಯಂತ್ ಶೀರಡ್ಕ ಮಾಲೀಕತ್ವದ ಎಸ್.ಬಿ.ಗ್ರೂಪ್ಸ್ ಆನ್ಲೈನ್ ಸೇವೆಗಳು ಮತ್ತು ಡಿಜಿಟಲ್ ಪ್ರಿಂಟಿಂಗ್ ನ.21 ರಂದು ಗುತ್ತಿಗಾರಿನ ಶ್ರೀ ಹರಿ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಳ್ಳಲಿದೆ. ಇಲ್ಲಿ ಜನರಿಗೆ ಅಗತ್ಯವಿರುವ ಎಲ್ಲಾ ತರಹದ ಸರ್ಕಾರಿ ಹಾಗೂ ಸರ್ಕಾರೇತರ ಆನ್ಲೈನ್ ಸೇವೆಗಳು ಮತ್ತು ಡಿಜಿಟಲ್ ಪ್ರಿಂಟಿಂಗ್ ಕೆಲಸಗಳನ್ನು ಶೀಘ್ರ ಮಾಡಿಕೊಡಲಾಗುವುದು ಎಂದು ಮಾಲಕರು ತಿಳಿಸಿದ್ದಾರೆ.