
ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘ. ನಿ. ಇದರ ನೆಟ್ಟಣ ಶಾಖಾ ಸಲಹಾ ಸಮಿತಿ ಸಭೆಯು ನ. 17ರಂದು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೆಟ್ಟಣ ಶಾಖೆಯಲ್ಲಿ ಸಲಹಾ ಸಮಿತಿ ಅಧ್ಯಕ್ಷ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ರವಿ ಕಕ್ಕೆಪದವು ವಹಿಸಿದ್ದರು. ಸಭೆಯಲ್ಲಿ ಮೂರ್ತೆದಾರರ ಸೇವಾ ಸಹಕಾರಿ ಸಂಘ ಆಲಂಕಾರು ಅಧ್ಯಕ್ಷ ರಾದ ಮುತ್ತಪ್ಪ ಪೂಜಾರಿ ನೆಯ್ಯಲ್ಗ , ಸಂಘದ ನಿರ್ಧೇಶಕರಾದ ಚಂದ್ರಶೇಖರ ಆಲಂಕಾರು, ವಸಂತ ಪೂಜಾರಿ ಬದಿಬಾಗಿಲು, ಜಯಂತ ನೆಕ್ಕಿಲಾಡಿ, ನೆಟ್ಟಣ ಶಾಖಾ ಸಲಹಾ ಸಮಿತಿ ಉಪಾಧ್ಯಕ್ಷರಾದ ಕುಮಾರಿ ವಾಸುದೇವನ್. ಸದಸ್ಯರುಗಳಾದ ಸಂತೋಶ್ ಕುಮಾರ್ ಗುಂಡ್ಯ, ಸತೀಶ್ ಪೂಜಾರಿ ಐತ್ತೂರು, ಮಾಯಿಲಪ್ಪ ಪೂಜಾರಿ ಕೊಂಬಾರು, ಮೋನಪ್ಪ ಪೂಜಾರಿ ಮರ್ಧಾಳ, ಕೊಯಿಲ ಶಾಖಾ ಸಲಹಾ ಸಮಿತಿ ಅಧ್ಯಕ್ಷ ರಾದ ಜನರ್ಧಾನ ಕದ್ರ ಹಾಜರಿದ್ದು ಸಂಘದ ಬೆಳವಣಿಗೆ ಬಗ್ಗೆ ಚರ್ಚಿಸಲಾಯಿತು. ಗುಂಡ್ಯ ಸಂತೋಷ್ ಕುಮಾರ್ ಆರ್ ಇವರನ್ನು ಸಲಹಾ ಸಮಿತಿ ಉಪಾಧ್ಯಕ್ಷ ರಾಗಿ ಆಯ್ಕೆ ಮಾಡಲಾಯಿತು. ಸಂಘದ ಸಹಾಯಕ ಕಾರ್ಯನಿರ್ವಾಹಣಾಧಿಕಾರಿ ಯೋಗೀಶ್ ಕುಮಾರ್ ಅಗತ್ತಾಡಿ ಸ್ವಾಗತಿಸಿ, ಶಾಖಾವ್ಯವಸ್ಥಾಪಕ ಮಿಥುನ್ ಸುಂದರ್ ಪಲ್ಲತ್ತಡ್ಕ ವಂದಿಸಿದರು. ಸಿಬ್ಬಂದಿ ಗಳಾದ ದೀಕ್ಷಿತ್ ಪಣೆಮಜಲು, ಅಜಯ್ ಕುಮಾರ್ ಆರ್ ಸಹಕರಿಸಿದರು.