ಮಿತ್ರ ಮಂಡಲ ನಾಗತೀರ್ಥ ಇದರ ಆಶ್ರಯದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ದೀಪಾವಳಿ ಕಪ್ -2020 ಹಾಗೂ ಡಾ||ದೇವಿಪ್ರಸಾದ್ ಕಾನತ್ತೂರ್ ಅವರಿಗೆ ಗೌರವಾರ್ಪಣೆ ಉದ್ಘಾಟನಾ ಸಮಾರಂಭವನ್ನು ಪಂಜ ಪಂಚಲಿಂಗೇಶ್ವರ ದೇವಸ್ಥಾನದ ಅರ್ಚಕರಾದ ನಾಗರಾಜ್ ಹೆಗ್ಡೆ ಅವರು ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಮಾಧವ ಗೌಡ ಬಿ.ಕೆ ಅಧ್ಯಕ್ಷರು ಸುಳ್ಯ ತಾಲೂಕು ಕಬಡ್ಡಿ ಅಸೋಸಿಯೇಷನ್, ಪಂಜ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತಾಧಿಕಾರಿಗಳಾದ ಡಾ|| ದೇವಿಪ್ರಸಾದ್ ಕಾನತ್ತೂರ್, ಅನುರಾಜ್ ಕಕ್ಯಾನ,ರಾಜೇಶ್ ಕುದ್ವ ,ನಿತಿನ್ ನಾಗತೀರ್ಥ,ಸಾವರ್ಕರ್ ಸ್ಟ್ರೈಕರ್ಸ್ ತಂಡದ ನಾಯಕ ಪುನಿತ್ ಮಚಿಕಟ್ಟೆ, ಭಗತ್ ವಾರಿಯರ್ಸ್ ನ ನಾಯಕ ಜೀವನ್ ಜಲಕದಹೊಳೆ ,ಸುಭಾಷ್ ಟೈಗರ್ಸ್ ನ ನಾಯಕ ಹರ್ಷಿತ್ ಸಂಪ ,ಶಿವಾಜಿ ಲಯನ್ಸ್ ನ ನಾಯಕ ಚರನ್ ಕಕ್ಯಾನ ,ಆಝಾದ್ ಎಟಾಕರ್ಸ್ ನ ನಾಯಕ ಕಾರ್ತಿಕ್ ನಾಗತೀರ್ಥ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕ್ರೀಡಾಕೂಟಕ್ಕೆ ಚಾಲನೆ :
ದೀಪ ಬೆಳಗಿಸುವುದರ ಮೂಲಕ ವಿದ್ಯುಕ್ತವಾಗಿ ಉದ್ಘಾಟನೆಗೊಂಡು ಅನಂತರ ಡಾ|| ದೇವಿಪ್ರಸಾದ್ ಕಾಣತ್ತೂರ್ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.
ಪ್ರಥಮ ಸ್ಥಾನವನ್ನು ಆಝಾದ್ ಎಟಾಕರ್ಸ್ ತಂಡ ಗೆದ್ದುಕೊಂಡಿತು ದ್ವೀತಿಯ ಸ್ಥಾನವನ್ನು ಸಾವರ್ಕರ್ ಸ್ಟ್ರೈಕರ್ಸ್ ತಂಡ ಗೆದ್ದುಕೊಂಡಿತು ,ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಚರನ್ ಕಕ್ಯಾನ,ಪಂದ್ಯ ಶ್ರೇಷ್ಠ ರಿಯಾಝ್ ಪೊಳೆಂಜ,ಉತ್ತಮ ಬೌಲರ್ ನವನೀತ್ ಬೊಳ್ಳಾಜೆ , ಉತ್ತಮ ಫೀಲ್ಡರ್ ಕೃತಿಕ್ ಬೇರ್ಯ ,ಉತ್ತಮ ದಾಂಡಿಗ ನವೀನ್ ಕೃಷ್ಣನಗರ ಪಡೆದುಕೊಂಡರು.
ಸಮಾರೋಪ ಸಮಾರಂಭದಲ್ಲಿ ಪುರುಷೋತ್ತಮ ನಾಗತೀರ್ಥ ,ಚಂದ್ರಶೇಖರ ಕರಿಮಜಲು,ರಾಜೇಶ್ ಕುದ್ವ ವಿಜೇತರಿಗೆ ಬಹುಮಾನ ಹಸ್ತಾಂತರಿಸಿದರು.
ರವಿ ಬಿ ನಾಗತೀರ್ಥ, ಚೇತನ್ ಜಲಕದಹೊಳೆ ,ಶರತ್ ಕುದ್ವ ಸಂದೀಪ್ ಪಲ್ಲೋಡಿ ಕಾರ್ಯವನ್ನು ನೆರವೇರಿಸಿದರು.