ಕಳೆದ ಹತ್ತು ವರ್ಷಗಳಿಂದ ಸುಳ್ಯ ತಾಲೂಕಿನ ಜನತೆಯ ಜನಪರ ಕನ್ನಡ ವಾರಪತ್ರಿಕೆ ಕಳೆದ ನಾಲ್ಕು ವರ್ಷಗಳಿಂದ ದೀಪಾವಳಿ ಸಂಚಿಕೆ ಮಾರುಕಟ್ಟೆಗೆ ನೀಡುತ್ತಿದ್ದು ಇದರ ಅಂಗವಾಗಿ ಈ ಬಾರಿಯು ಅಮರ ಸುಳ್ಯ ಸುದ್ದಿ ಬಳಗ ದೀಪಾವಳಿ ವಿಶೇಷಾಂಕ ಹೊರತರುವಲ್ಲಿ ಯಶಸ್ವಿ ಯಾಗಿದೆ. ನವೆಂಬರ್ 12ರಂದು ಅಮರ ಸುಳ್ಯ ಸುದ್ದಿ ಪತ್ರಿಕೆಯ ಕಚೇರಿಯಲ್ಲಿ ನೂತನ ದೀಪಾವಳಿ ವಿಶೇಷಾಂಕ ಬಿಡುಗಡೆಗೊಳಿಸಲಾಯಿತು.
ಪತ್ರಿಕೆಯ ಪ್ರಧಾನ ಸಂಪಾದಕ ಮುರಳೀಧರ ಅಡ್ಡನಪಾರೆ ಸಂಚಿಕೆಯನ್ನು ಹೊರ ತರುವಲ್ಲಿ ಸಹಕರಿಸಿದ ಸುಳ್ಯದ ಸಮಸ್ತ ಜನತೆಗೆ ಹಾಗೂ ಸಿಬ್ಬಂದಿವರ್ಗದವರಿಗೆ ಕೃತಜ್ಞತೆಯನ್ನು ಸಲ್ಲಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಸಂಚಿಕೆಯ ನಿರ್ವಾಹಕ ಹಾಗೂ ಜಾಹಿರಾತು ವಿನ್ಯಾಸಕರಾಗಿ ಸಹಕರಿಸಿದ ವಿಶ್ವನಾಥ ಮೋಟುಕಾನ, ಮತ್ತು ಸಿಬ್ಬಂದಿಗಳಾದ ಪದ್ಮನಾಭ ಅರಂಬೂರು, ರಂಜಿತ್ ಅಂಬೆಕಲ್ಲು, ಸಂದೀಪ್ ಮಂಚಿಕಟ್ಟೆ, ಸೌಮ್ಯ ಮಿತ್ತಡ್ಕ, ಧನುಷ್ ಉಬರಡ್ಕ ಉಪಸ್ಥಿತರಿದ್ದರು. ಪತ್ರಿಕೆಯ ವರದಿಗಾರ ಹಸೈನಾರ್ ಜಯನಗರ ಸ್ವಾಗತಿಸಿ, ಜಗದೀಶ್ ಮುಂಡುಗಾರು ವಂದಿಸಿದರು.