Ad Widget

ಸುಳ್ಯ ನ.ಪಂ ಅಧ್ಯಕ್ಷ ಉಪಾಧ್ಯಕ್ಷರುಗಳ ಅಧಿಕಾರ ಸ್ವೀಕಾರ


. . . . . . . . .

ಚುನಾವಣೆ ಕಳೆದು ಒಂದೂವರೆ ವರ್ಷಗಳ ಬಳಿಕ ಸುಳ್ಯದ ಜನತೆಯ ಬಹಳ ನಿರೀಕ್ಷೆಯಲ್ಲಿದ್ದ ನಗರ ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷರುಗಳ ಅಧಿಕಾರ ಸ್ವೀಕಾರ ಇಂದು ನಡೆಯಿತು. ಈಗಾಗಲೇ ಅವಿರೋಧವಾಗಿ ಆಯ್ಕೆಗೊಂಡಿರುವ ಅಧ್ಯಕ್ಷ ವಿನಯ್‌ಕುಮಾರ್ ಕಂದಡ್ಕ ಹಾಗೂ ಉಪಾಧ್ಯಕ್ಷೆ ಸರೋಜಿನಿ ಪೆಲ್ತಡ್ಕರವರು ಇಂದು ಬೆಳಗ್ಗೆ ೧೦.೩೫ ಸಮಯ ನಿಗದಿಪಡಿಸಿ ಪಕ್ಷದ ಮುಖಂಡರು ಹಾಗೂ ನಗರ ಪಂಚಾಯತ್‌ನ ಎಲ್ಲಾ ಸದಸ್ಯರ ಸಮ್ಮುಖದಲ್ಲಿ ತಮ್ಮ ಅಧಿಕಾರ ಆಸನವನ್ನು ಸ್ವೀಕರಿಸಿದರು. ಬಿಜೆಪಿ ಪಕ್ಷದ ಹಿರಿಯ ಮುಖಂಡ ಪಿ.ಕೆ ಉಮೇಶ್ ಅಧಿಕಾರ ಸ್ವೀಕಾರ ನೆರವೇರಿಸಿ ಮಾತನಾಡಿ ನಿಮ್ಮ ಈ ಸೇವೆಯನ್ನು ಜನರ ಪರವಾಗಿ ಮತ್ತು ಸುಳ್ಯ ಜನರ ಅಭಿವೃದ್ಧಿಗಾಗಿ ಪಕ್ಷ ಭೇದವನ್ನು ಮರೆತು ಕಾರ್ಯನಿರ್ವಹಿಸುವಂತೆ ಸಲಹೆ ನೀಡಿ ಮಾತನಾಡಿದರು. ಈ ಸಂದರ್ಭದಲ್ಲಿ ತಾ.ಪಂ ಉಪಾಧ್ಯಕ್ಷೆ ಪುಷ್ಪಾ ಮೇದಪ್ಪ, ಸುಳ್ಯ ವರ್ತಕ ಸಂಘದ ಅಧ್ಯಕ್ಷ ಸುಧಾಕರ ರೈ, ಕಾರ್ಯದರ್ಶಿ, ಧೀರಾ ಕ್ರಾಸ್ತಾ, ವಿಪಕ್ಷ ನಾಯಕ ಬಾಲಕೃಷ್ಣ ಭಟ್ ಕೊಡೆಂಕೇರಿ, ಸ್ವತಂತ್ರ ಪಕ್ಷದ ನ.ಪಂ ಸದಸ್ಯ ರಿಯಾಝ್ ಕಟ್ಟೆಕ್ಕಾರ್, ಉದ್ಯಮಿ ರಾಜೇಶ್ ಶೆಟ್ಟಿ ಮೇನಾಲ, ಪಕ್ಷದ ಹಿರಿಯರಾದ ಸುಭೋದ್ ಶೆಟ್ಟಿ ಮೇನಾಲ, ಸಿ.ಎ ಬ್ಯಾಂಕ್ ಅಧ್ಯಕ್ಷ ಹರೀಶ್ ಬೂಡು ಪನ್ನೆ, ಪಕ್ಷದ ಇನ್ನಿತರ ಮುಖಂಡರುಗಳು ಕಾರ್ಯಕರ್ತರು, ನ.ಪಂ ಸದಸ್ಯರುಗಳು ಉಪಸ್ಥಿತರಿದ್ದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading