Ad Widget

ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿ ಯವರ ಪುಣ್ಯಸ್ಮರಣೆ ಕಾರ್ಯಕ್ರಮ

ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿ ಯವರ ಪುಣ್ಯಸ್ಮರಣೆ ಕಾರ್ಯಕ್ರಮ ಹಾಗೂ ಕಾಂಗ್ರೆಸ್ ಸಮಿತಿ ಗ್ರಾಮ ಪಂಚಾಯತ್ ಚುನಾವಣೆ ಉಸ್ತುವಾರಿಗಳ ಮತ್ತು ಗ್ರಾಮ ಅಧ್ಯಕ್ಷರುಗಳು, ಸಾಮಾಜಿಕ ಜಾಲತಾಣ ವಿಭಾಗದ ಸಂಯೋಜಕರು ಸಭೆಯನ್ನು ಇಂದು ಸುಳ್ಯದ ಯೋಜನಾ ಸಂಯುಕ್ತ ಮಂಡಲಿ ಸಭಾಂಗಣದಲ್ಲಿ ಆಯೋಜಿಸಲಾಯಿತು. ಅಧ್ಯಕ್ಷತೆಯನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಜಯಪ್ರಕಾಶ್...

ನಿಸ್ವಾರ್ಥ ಸೇವೆಯನ್ನು ಗುರುತಿಸಿ ಗೋಪಾಲ ದುಗ್ಗಲಡ್ಕರಿಗೆ ಗೌರವಾರ್ಪಣೆ

ಸುಳ್ಯ ಕೆ.ಎಸ್.ಆರ್.ಟಿ.ಸಿ ಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಗೋಪಾಲ ದುಗ್ಗಲಡ್ಕ ಇವರನ್ನು ಸನ್ಮಾನಿಸಲಾಯಿತು. ಇವರು ಈಗ ಕೆ.ಎಸ್.ಆರ್.ಟಿ.ಸಿ. ಯ ನೌಕರನಲ್ಲದಿದ್ದರೂ ತನ್ನದೇ ಸಂಸ್ಥೆ ಎಂಬಂತೆ ಸೇವೆ ಸಲ್ಲಿಸುತ್ತಿದ್ದು ಇವರ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಸುಳ್ಯ ಘಟಕ ಹಾಗೂ ಸಿಬ್ಬಂದಿಗಳ ಪರವಾಗಿ ಹೂ ಗುಚ್ಚ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಘಟಕ ವ್ಯವಸ್ಥಾಪಕರಾದ ಸುಂದರ್ ರಾಜ್,...
Ad Widget

ಕನ್ನಡ ರಾಜ್ಯೋತ್ಸವದ ಅಂಗವಾಗಿ ಉಜಿತ್ ಶ್ಯಾಮ್ ಚಿಕ್ಮುಳಿ ಹಾಗೂ ವೀಕ್ಷಿತ್ ಕುತ್ಯಾಳ ಇವರಿಂದ ಯೂಟ್ಯೂಬ್ ನಲ್ಲಿ ಗೀತೆ ಬಿಡುಗಡೆ

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಹೊಸದಾಗಿ ರಚಿಸಲಾದ ಗೀತೆಯನ್ನು ಯೂಟ್ಯೂಬ್ ನಲ್ಲಿ ಟಾಲೆಂಟ್ ಹಂಟರ್ಸ್ ಎಂಬ ಚಾನೆಲ್ ನಲ್ಲಿ ನವಂಬರ್ 1 ರಂದು ಬಿಡುಗಡೆ ಮಾಡಲಾಯಿತು. ನಮ್ಮ‌ ಕನ್ನಡದ ಜನಪ್ರಿಯ ಸಂಸ್ಕೃತಿಯನ್ನು ಎತ್ತಿ ತೋರಿಸುವ ಮೂಲಕ ಹೊಸ ಪ್ರಯತ್ನದಲ್ಲಿ ಗಾಯಕನಾಗಿ ಉಜಿತ್ ಶ್ಯಾಮ್ ಚಿಕ್ಮುಳಿ, ಕೊಳಲಿನಲ್ಲಿ ವೀಕ್ಷಿತ್ ಕುತ್ಯಾಳ ಇವರಿದ್ದು ಉತ್ತಮವಾಗಿ ಮೂಡಿಬಂದಿದೆ. ವೀಕ್ಷಿಸಲು ಇಲ್ಲಿ ಕ್ಲಿಕ್...

ಸುಳ್ಯದ ಇಬ್ಬರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಇಂದು ಮಂಗಳೂರಿನಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಸುಳ್ಯದ ದೈಹಿಕ ಶಿಕ್ಷಣ ಶಿಕ್ಷಕ ದೊಡ್ಡಣ್ಣ ಬರೆಮೇಲು, ಹಾಗೂ ಪ್ರಗತಿಪರ ಕೃಷಿಕ ವಿಶ್ವನಾಥ ಪೈ ಯವರಿಗೆ ಪ್ರಶಸ್ತಿ ಪ್ರಧಾನ ನಡೆಯಿತು. ಸಂಸದ ನಳೀನ್ ಕುಮಾರ್ ಕಟೀಲ್, ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರು ಮತ್ತಿತರರು ಉಪಸ್ಥಿತರಿದ್ದರು.

ಸುಂಟಿಕೊಪ್ಪದಲ್ಲೊಬ್ಬ ಕನ್ನಡದ ಅಭಿಮಾನಿಯಿಂದ ಕನ್ನಡ ರಾಜ್ಯೋತ್ಸವಕ್ಕೆ ವಿಶೇಷ ಮೆರುಗು

ಕೊಡಗಿನ ಸುಂಟಿಕೊಪ್ಪ ಎಂಬಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಸ್ಥಳೀಯ ನಿವಾಸಿ ಎಂ.ಎಸ್. ರವಿ ಎಂಬುವವರು ಕನ್ನಡದ ಧ್ವಜ ಮತ್ತು ಕನ್ನಡದ ಪೇಟವನ್ನು ಧರಿಸಿ ಪೇಟೆಯಲ್ಲಿ ಸಂಚರಿಸಿ ಜನರಲ್ಲಿ ವಿಶೇಷ ಆಕರ್ಷಣೆಯನ್ನು ಮೂಡಿಸುತ್ತಿದ್ದಾರೆ. ಇವರು ಸತತ 25 ವರ್ಷಗಳಿಂದ ಕನ್ನಡದ ಕಂಪನ್ನು ಬೀರುತ್ತಿದ್ದಾರೆ. ಡಾಕ್ಟರ್ ರಾಜಕುಮಾರ್ ಅಭಿಮಾನಿ ಬಳಗದಲ್ಲಿ ಗುರುತಿಸಿಕೊಂಡು, ಪ್ರಸ್ತುತ ಸುಂಟಿಕೊಪ್ಪ ಡಾಕ್ಟರ್ ಅಂಬೇಡ್ಕರ್ ಸಂಘದ...

ಶುಭವಿವಾಹ : ದೀಪಕ್ ದೋಣಿಮನೆ – ಮಲ್ಲಿಕಾ ಪಟ್ಲಮನೆ

ಕಡಬ ತಾ. ಎಡಮಂಗಲ ಗ್ರಾಮದ ದೋಣಿಮನೆ ದಿ.ಮುತ್ತಪ್ಪ ಗೌಡರ ಪುತ್ರ ದೀಪಕ್ ರ ವಿವಾಹವು ಕಡಬ ತಾ. ಕೊಣಾಜೆ ಗ್ರಾಮದ ಪಟ್ಲ ಮನೆ ರುಕ್ಮಯ್ಯ ಗೌಡರ ಪುತ್ರಿ ಮಲ್ಲಿಕಾ ರೊಂದಿಗೆ ವರನ ಮನೆಯಲ್ಲಿ ಅ.28 ರಂದು ನಡೆಯಿತು.

ಶುಭ ವಿವಾಹ : ಪುನೀತ್ ರವಿ ಹಿರಿಯಡ್ಕ- ಕವಿತಾ ಚಿದ್ಗಲ್ಲು

ದೇವಚಳ್ಳ ಗ್ರಾಮದ ಹಿರಿಯಡ್ಕ ನಿವೃತ್ತ ಶಿಕ್ಷಕ ಬಾಲಕೃಷ್ಣ ಗೌಡ ಮತ್ತು ಶೀಲಾವತಿ ದಂಪತಿಗಳ ಪುತ್ರ ಪುನೀತ್ ರವಿ ಯವರ ವಿವಾಹವು ಗುತ್ತಿಗಾರು ಗ್ರಾಮದ ಕೊಡಂಗೊಳಿ- ಚಿದ್ಗಲ್ಲು ಧರ್ಮಾವತಿ ಮತ್ತು ನಾರಾಯಣ ಗೌಡರ ಪುತ್ರಿ ಕವಿತಾ ಳೊಂದಿಗೆ ಅ.25 ರಂದು ವಧುವಿನ ಮನೆಯಲ್ಲಿ ನಡೆಯಿತು.
error: Content is protected !!