- Friday
- November 22nd, 2024
ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರ ಸುಳ್ಯ ಇದರ ವತಿಯಿಂದ ಯಕ್ಷಗಾನದ ಹಿರಿಯ ಅರ್ಥದಾರಿ , ವಾಗ್ಮಿ, ವಿದ್ವಾಂಸ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ ಇವರಿಗೆ ವನಜ ರಂಗಮನೆ ಪ್ರಶಸ್ತಿ -2020 ಪ್ರಧಾನ ಸಮಾರಂಭ ಆ. 28 ಅಪರಾಹ್ನ 3.00 ಗಂಟೆಗೆ ಶಾಸ್ತ್ರಿಗಳ ಮನೆ , ಕನ್ನಡಿಕಟ್ಟೆ , ಪದಂಗಡಿ ಯಲ್ಲಿ ನಡೆಯಲಿದೆ. ಯಕ್ಷಗಾನ ಪೋಷಕರಾದ ಬಿ. ಭುಜಬಲಿ...
ಕ್ಯಾಂಪ್ಕೋ ನಿಯಮಿತ ಮಂಗಳೂರು.ಶಾಖೆ : ಸುಳ್ಯ.(26.08.2020 ಬುಧವಾರ) ಅಡಿಕೆ ಧಾರಣೆಹೊಸ ಅಡಿಕೆ 300 - 360ಹಳೆ ಅಡಿಕೆ 300 - 390ಡಬಲ್ ಚೋಲ್ 300 - 390 ಫಠೋರ 220 - 290ಉಳ್ಳಿಗಡ್ಡೆ 110 - 200ಕರಿಗೋಟು 110 - 190 ಕಾಳುಮೆಣಸುಕಾಳುಮೆಣಸು 250 - 325 ಕೊಕ್ಕೋಒಣ ಕೊಕ್ಕೋ :- 150 - 175ಹಸಿ...
ಗುತ್ತಿಗಾರು ಗ್ರಾಮದ ವಳಲಂಬೆ ಕೋಲ್ಚಾರು ರಾಮಚಂದ್ರ ಗೌಡರ ಪುತ್ರ ದೇವಿಪ್ರಸಾದ್ (ಹೇಮನಾಥ)ರವರ ವಿವಾಹವು ಅಮರಮುಡ್ನೂರು ಗ್ರಾಮದ ಆರ್ನೋಜಿ ಮನೆ ದಿ.ವೆಂಕಟ್ರಮಣ ಗೌಡರ ಪುತ್ರಿ ಭಾಗ್ಯಶ್ರೀ ಯೊಂದಿಗೆ ಆ.24ರಂದು ಶ್ರೀ ಮಹಾವಿಷ್ಣು ಕಲಾಮಂದಿರ ಉದಯಗಿರಿ ಮಾವಿನಕಟ್ಟೆ ಯಲ್ಲಿ ನಡೆಯಿತು.
ಗಣೇಶ ಚತುರ್ಥಿ ಅಂಗವಾಗಿ ಸುಬ್ರಹ್ಮಣ್ಯ ಪಾಲ್ತಾಡು ರವರ ಮನೆಯಲ್ಲಿ ಗಣಹೋಮ,ಸತ್ಯ ಮಾರ್ಗ ಪೂಜೆ, ಹಾಗೂ ಭಜನಾ ಕಾರ್ಯಕ್ರಮ ನೆರವೇರಿತು. ಶ್ರೀ ದುರ್ಗಾ ಭಜನಾ ಮಂಡಳಿ ಮರಕತ ನಾಲ್ಕೂರು ಇವರಿಂದ ಭಜನಾ ಕಾರ್ಯಕ್ರಮ ನೆರವೇರಿತು. ಈ ಸಂದರ್ಭದಲ್ಲಿ ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಲಿಪಿಶ್ರೀ (606)ಶ್ರೀ ಕಟೀಲ್ ಮಾವಿನಕಟ್ಟೆ, ಹಿತಾಶ್ರೀ...
ಅಯ್ಯನಕಟ್ಟೆಯ ಪ್ರಧಾನ ರಸ್ತೆಯಲ್ಲಿರುವ ಕೆ.ಎಸ್ ಕಾಂಪ್ಲೆಕ್ಸ್ ನಲ್ಲಿ ಶ್ರೀ ಲಕ್ಷ್ಮೀ ಜನರಲ್ ಸ್ಟೋರ್ಸ್ ಆಗಸ್ಟ್ 21ರಂದು ಶುಭಾರಂಭಗೊಂಡಿತು. ಅಯ್ಯನಕಟ್ಟೆ, ಕಳಂಜ ಪರಿಸರದ ಜನತೆಗೆ ದಿನನಿತ್ಯದ ಗೃಹಬಳಕೆಗೆ ಅಗತ್ಯವಾದ ದಿನಸಿ ಹಾಗೂ ತರಕಾರಿ ಸಾಮಾಗ್ರಿಗಳು ಉತ್ಕೃಷ್ಟ ಹಾಗೂ ಸ್ವಚ್ಛತೆಯ ವ್ಯವಹಾರದೊಂದಿಗೆ ಇಲ್ಲಿ ದೊರೆಯಲಿದೆ. ಅಲ್ಲದೆ 2 ಕಿ.ಮೀ ಅಂತರದಲ್ಲಿ ಸಾಮಾಗ್ರಿಗಳ 'ಹೋಂ ಡೆಲಿವರಿ' ವ್ಯವಸ್ಥೆ ಮಾಡಲಾಗುವುದೆಂದು ಮಾಲಕ...
ಕೊಲ್ಲಮೊಗ್ರದ ವಿಜಯ ಬ್ಯಾಂಕ್ ಬಳಿಯ ಎಸ್.ಕೆ. ಕಾಂಪ್ಲೆಕ್ಸ್ ನಲ್ಲಿ ಉದಯ ಶಿವಾಲ ಮಾಲಕತ್ವದ ಅರುಣೋದಯ ಚಿಕನ್ ಸೆಂಟರ್ ಶುಭಾರಂಭಗೊಂಡಿದೆ. ಊರಿನಲ್ಲೇ ಸಾಕಿದ ಬಾಯ್ಲರ್ ಕೋಳಿ ಹಾಗೂ ಮಾಂಸ ಮಿತದರದಲ್ಲಿ ಲಭ್ಯ, ಟೈಸನ್,ಗಿರಿರಾಜ, ಊರು ಕೋಳಿ ಹಾಗೂ ಹಂದಿ ಮಾಂಸ ದೊರೆಯುತ್ತದೆ ಎಂದು ಮಾಲಕರು ತಿಳಿಸಿದ್ದಾರೆ.
ರೂ. 55 ಲಕ್ಷ ವೆಚ್ಚದಲ್ಲಿ ಶಾಸಕರ ಮಳೆಹಾನಿ ನಿಧಿಯಲ್ಲಿ ದುರಸ್ತಿಗೊಂಡ ಬೆಳಂದೂರು- ಪೆರುವಾಜೆ ಕಾಂಕ್ರೀಟಿಕೃತ ರಸ್ತೆಯ ಉದ್ಘಾಟನೆಯನ್ನು ಇಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ಶ್ರೀ ನಳಿನ್ ಕುಮಾರ್ ಕಟೀಲ್ ಹಾಗೂ ಶಾಸಕ ಶ್ರೀ ಎಸ್ ಅಂಗಾರ ಇವರು ನೆರವೇರಿಸಿದರು.ಈ ಸಂದರ್ಭದಲ್ಲಿ ಸುಳ್ಯ ಬಿಜೆಪಿ ಮಂಡಲಾಧ್ಯಕ್ಷ ಶ್ರೀ ಹರೀಶ್ ಕಂಜಿಪಿಲಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಶ್ರೀ...
ಪಂಜದ ಮುಖ್ಯರಸ್ತೆಯಲ್ಲಿರುವ ಐಶ್ವರ್ಯ ಕಾಂಪ್ಲೆಕ್ಸ್ ನಲ್ಲಿ ಸತೀಶ್ ಪಲ್ಲೋಡಿ ಮಾಲಕತ್ವದ ಜನತಾ ಚಿಕನ್ ಸೆಂಟರ್ ಶುಭಾರಂಭಗೊಂಡಿತು. ಇಲ್ಲಿ ಬಾಯ್ಲರ್, ಟೈಸನ್, ಗಿರಿರಾಜ, ಉರುಕೋಳಿ, ಹಂದಿಮಾಂಸ, ಮೊಟ್ಟೆ ಹಾಗೂ ಒಣಮೀನು ರಖಂ ಮತ್ತು ಚಿಲ್ಲರೆ ದರದಲ್ಲಿ ಲಭ್ಯವಿದೆ. ಅಲ್ಲದೆ ವಿಶೇಷವಾಗಿ ಶನಿವಾರ ಮಟನ್ ಮಾಂಸ ಲಭ್ಯವಿರಲಿದೆ ಎಂದು ಮಾಲಕರು ತಿಳಿಸಿದ್ದಾರೆ.
ರೂ. 6.54 ಕೋಟಿ ವೆಚ್ಚದಲ್ಲಿ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿಯಲ್ಲಿ ನಿರ್ಮಾಣವಾಗಲಿರುವ ಸುಳ್ಯ ತಾಲೂಕಿನ ನಾರ್ಕೊಡು- ಅಜ್ಜಾವರ- ಪೇರಾಲು ರಸ್ತೆ ಕಾಮಗಾರಿಗೆ ಇಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ಶ್ರೀ ನಳಿನ್ ಕುಮಾರ್ ಕಟೀಲ್ ಇವರು ಶಂಕುಸ್ಥಾಪನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಸುಳ್ಯ ಶಾಸಕ ಶ್ರೀ ಎಸ್ ಅಂಗಾರ, ಸುಳ್ಯ ಬಿಜೆಪಿ ಮಂಡಲಾಧ್ಯಕ್ಷ...
Loading posts...
All posts loaded
No more posts