Ad Widget

ಜಾಲ್ಸೂರು ಎಸ್ ಎಸ್ ಎಫ್ ಸೆಕ್ಟರ್ ವತಿಯಿಂದ ರಕ್ತದಾನ ಶಿಬಿರ

ಜಾಲ್ಸೂರು ಎಸ್ಎಸ್ಎಫ್ ಸೆಕ್ಟರ್ ವತಿಯಿಂದ ರಕ್ತದಾನ ಶಿಬಿರ ಆ.9ರಂದು ಸುಣ್ಣ ಮೂಲೆ ಮದ್ರಸ ವಠಾರದಲ್ಲಿ ನಡೆಯಿತು.ಶಿಬಿರದಲ್ಲಿ ಹಸ್ಸನ್ ಸುಣ್ಣಮೂಲೆ, ಹುಸೇನ್ ಸುಣ್ಣಮೂಲೆ, ಸ್ಥಳೀಯ ಗ್ರಾಪಂ ಮಾಜಿ ಸದಸ್ಯ ಮಹಮ್ಮದ್ ಫವಾಝ್, ಸೆಕ್ಟರ್ ಸಮಿತಿಯ ಎಲ್ಲಾ ಪದಾಧಿಕಾರಿಗಳು ಸದಸ್ಯರುಗಳು ಉಪಸ್ಥಿತರಿದ್ದರು. ಶಿಬಿರದಲ್ಲಿ ವಿಶೇಷವಾಗಿ ಮುಸ್ಲಿಂ ಮಹಿಳೆಯರು ರಕ್ತದಾನ ಮಾಡಿ ಸಹಕರಿಸಿದರು.

ಬೂಡು : ಪ್ರಥಮ ಬಾರಿಗೆ ನೀಲಿ ಭೀಮ್ ರಾಖಿ ಕಟ್ಟುವ ಮೂಲಕ ರಕ್ಷಾಬಂಧನ

ಪ್ರಕೃತಿ ಯುವ ಸೇವಾ ಸಂಘ(ರಿ) ಬೂಡು ಸುಳ್ಯ ಹಾಗೂ ಪ್ರಕೃತಿ ಮಹಿಳಾ ಘಟಕ ಬೂಡು, ಸುಳ್ಯ ಇದರ ವತಿಯಿಂದ ಪ್ರಥಮ ಬಾರಿಗೆ ನೀಲಿ ಭೀಮ್ ರಾಖಿ ಕಟ್ಟುವ ಮೂಲಕ ರಕ್ಷಬಂಧನ ಕಾರ್ಯಕ್ರಮ ಆಯೋಜಿಸಲಾಯಿತು.ಈ ಕಾರ್ಯಕ್ರಮದಲ್ಲಿ ಡಾ.ಬಿಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ದೀಪ ಬೆಳಗಿಸುವುದರ ಮೂಲಕ ಪ್ರಾರಂಭಿಸಲಾಯಿತು, ಸಂಘದ ಅಧ್ಯಕ್ಷರಾದ ಉದಯ್ ಜಿಕೆ,ಮಹಿಳಾ ಘಟಕದ ಅಧ್ಯಕ್ಷರಾದ ಲಕ್ಷ್ಮಿ...
Ad Widget

ಭಗವತಿ ಯುವ ಸೇವಾ ಸಂಘದಿಂದ ಬೂಡು ಅಂಗನವಾಡಿ ಕೇಂದ್ರದ ಧ್ವಜಸ್ತಂಭ ನವೀಕರಣ

ಆ. 9 ರಂದು ಬೂಡು ಅಂಗನವಾಡಿ ಕೇಂದ್ರದ ಧ್ವಜಸ್ತಂಭದ ನವೀಕರಣದ ಕರಸೇವೆಯು ಶ್ರೀ ಭಗವತಿ ಯುವ ಸೇವಾ ಸಂಘದ ವತಿಯಿಂದ ನಡೆಯಿತು. 2004 ರಲ್ಲಿ ಶ್ರೀ ಭಗವತಿ ಯುವ ಸೇವಾ ಸಂಘದ ವತಿಯಿಂದ ಬೂಡು ಅಂಗನವಾಡಿ ಕೇಂದ್ರಕ್ಕೆ ಕೊಡುಗೆಯಾಗಿ ನೀಡಲಾಗಿತ್ತು. 2004 ರಿಂದಲೂ ಶ್ರೀ ಭಗವತಿ ಯುವ ಸೇವಾ ಸಂಘದ ವತಿಯಿಂದ ಸ್ವಾತಂತ್ರ್ಯ ಉತ್ಸವವನ್ನು ಸಂಭ್ರಮದಿಂದ...

ಪಲ್ಲೋಡಿ ಬಸ್ ತಂಗುದಾಣ ದುರಸ್ತಿಗೊಳಿಸಿದ ಕಲಾರಂಗದ ಸದಸ್ಯರು

ಶ್ರೀ ಉಳ್ಳಾಕುಲು ಕಲಾರಂಗ ಸಂಸ್ಥೆಯ ಮೂಲಕ ಪಂಜದ ಪಲ್ಲೋಡಿ ಎಂಬಲ್ಲಿರುವ ಬಸ್ ತಂಗುದಾಣದ ದುರಸ್ಥಿ ಹಾಗೂ ಸ್ವಚ್ಛತಾ ಕಾರ್ಯ ನಡೆಯಿತು.ಈ ಸಂದರ್ಭದಲ್ಲಿ ಪಂಜ ಗ್ರಾಮ ಪಂಚಾಯತ್ ನ ಆಡಳಿತ ಅಧಿಕಾರಿ ದೇವಿಪ್ರಸಾದ್ ಕಾನಾತ್ತೂರ್ , ಅಧ್ಯಕ್ಷರಾದ ಸಂದೀಪ್ ಪಲ್ಲೋಡಿ , ಕಾರ್ಯದರ್ಶಿ ಕುಸುಮ್ ಪಲ್ಲೋಡಿಗೌರವಾಧ್ಯಕ್ಷರಾದ ನೇಮಿರಾಜ್ ಪಲ್ಲೋಡಿ, ಸದಸ್ಯರಾದ ಲಿಖಿತ್ ಪಲ್ಲೋಡಿ, ಪದ್ಮನಾಭ ಪಲ್ಲೋಡಿ, ಗಿರೀಶ್...

ಬಳ್ಪ ವರ್ತಕರ ಸಂಘದಿಂದ ನೆರವಿನ ಹಸ್ತ

ಬಳ್ಪ ವರ್ತಕರ ಸಂಘದಿಂದ ನೆರವಿನ ಹಸ್ತಬಳ್ಪದ ಹಿರಿಯ ವರ್ತಕ ವಾಸು ಮಣಿಯಾಣಿ ಯವರು ಅನಾರೋಗ್ಯ ದಿಂದ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಅವರಿಗೆ ನೆರವಿನ ಹಸ್ತ ಚಾಚಿದ ಬಳ್ಪದ ವರ್ತಕರೆಲ್ಲಾ ಸೇರಿ ಸಂಗ್ರಹಿಸಿದ ಸುಮಾರು ರೂ 23 ಸಾವಿರ ಧನ ಸಹಾಯನ್ನು ವಾಸು ಮಣಿಯಾಣಿ ಅವರಿಗೆ ನೀಡಿ ಮಾನವೀಯತೆ ಮೆರೆದಿದ್ದಾರೆ. ಅಧ್ಯಕ್ಷರಾದ ಹಸೈನಾರು ಬಳ್ಪ, ಕಾರ್ಯದರ್ಶಿ ಪ್ರಸನ್ನ...

ಐವರ್ನಾಡು, ಪಾಲೆಪ್ಪಾಡಿ, ಅಮಲ ರಸ್ತೆ ಶ್ರಮದಾನ

ಐವರ್ನಾಡಿನ ಪಾಲೆಪ್ಪಾಡಿ ಅಮಲ ರಸ್ತೆಯನ್ನು ಪಾಲೆಪ್ಪಾಡಿ ಮಂಜುಶ್ರೀ ಗೆಳೆಯರ ಬಳಗದ ಸದಸ್ಯರು ಶ್ರಮದಾನದ ಮೂಲಕ ಆ.9 ರಂದು ದುರಸ್ಥಿಗೊಳಿಸಿದರು.ರಸ್ತೆಯ ಹೊಂಡಗುಂಡಿಗಳನ್ನು ಮುಚ್ಚಿ,ರಸ್ತೆ ಬದಿ ಇರುವ ಕಾಡು,ಪೊದೆಗಳನ್ನು ಕಡಿಯಲಾಯಿತು.ಗೆಳೆಯರ ಬಳಗದ ಎಲ್ಲಾ ಸದಸ್ಯರು ಶ್ರಮದಾನದಲ್ಲಿ ಪಾಲ್ಗೊಂಡಿದ್ದರು.

ಹಿಂದೂ ಜಾಗರಣ ವೇದಿಕೆ-ಕಣ್ಕಲ್ ಇದರ ವತಿಯಿಂದ “ನಮ್ಮ ರಸ್ತೆ ನಮ್ಮ ಶ್ರಮ”

ಹಿಂದೂ ಜಾಗರಣ ವೇದಿಕೆ-ಕಣ್ಕಲ್ ಇದರ ವತಿಯಿಂದ ಕೇನ್ಯ ಗ್ರಾಮದ ಪ್ರಮುಖ ರಸ್ತೆ ಗಳಲ್ಲಿ ಶ್ರಮದಾನ ನಡೆಯಿತು. ಕೇನ್ಯ, ಕಣ್ಕಲ್, ಐನಡ್ಕ, ಬರಮೇಲು,ಪೆಲತ್ತಗಂಡಿ, ಕೆರೆಕ್ಕೋಡಿ, ನೆಲ್ಯಡ್ಕ, ಕಣ್ಕಲ್, ಪೇರ್ಬುಡ, ಗೆಜ್ಜೆ, ಕಾರ್ಯತಡ್ಕ, ಕೇನ್ಯ, ಚಾಲ್ಯಾರು, ಅಡ್ಡಬೈಲುವರೆಗೆ ರಸ್ತೆಯ ಇಕ್ಕೆಲಗಳಲ್ಲಿ ಇದ್ದ ಪೊದೆಗಳನ್ನು ಕಡಿಯುವ ಮುಖಾಂತರ ಶ್ರಮದಾನ ಮಾಡಲಾಯಿತು ಮತ್ತು ರಸ್ತೆಯಲ್ಲಿರುವ ಹೊಂಡಕ್ಕೆ ಕಲ್ಲು ಮಿಶ್ರಿತ ಮರಳು ಹಾಕಿ...

ಎಲಿಮಲೆ ಗಟ್ಟಿಗಾರು ರಸ್ತೆ ಬದಿ ಸ್ವಚ್ಛತಾ ಕಾರ್ಯ

ನೆಲ್ಲೂರು ಕೆಮ್ರಾಜೆ ಗ್ರಾಮದ ಎಲಿಮಲೆ ಗಟ್ಟಿಗಾರು ಪಂಚಾಯತ್ ರಸ್ತೆ ಬದಿಯಲ್ಲಿ ಚರಂಡಿ ನಿರ್ಮಾಣ, ರಸ್ತೆ ಬದಿಯ ಸ್ವಚ್ಛತೆ ಕೆಲಸವನ್ನು ಸ್ಥಳೀಯ ನಾಗರಿಕರ ತಂಡವು ಶ್ರಮದಾನದ ಮೂಲಕ ನೆರವೇರಿಸಿತು. ಈ ಶ್ರಮದಾನದಲ್ಲಿ ಸ್ಥಳೀಯರಾದ ಪುರುಷೋತ್ತಮ ಕಜೆ, ಶಿವಕರ ಕಜೆ, ದೀಕ್ಷಿತ್ ಚಿತ್ತಡ್ಕ, ಕಿರಣ್ ಗುಡ್ಡೆಮನೆ, ಸುಮಿತ್ ಗಟ್ಟಿಗಾರು, ಲಕ್ಷ್ಮೀನಾರಾಯಣ ಕಜೆ, ಓಂ ಪ್ರಸಾದ್ ಕಜೆ, ಮನೋಜ್ ಚಿತ್ತಡ್ಕ,...

ಗಾಂಧಿನಗರ ಅಂಗನವಾಡಿಯಲ್ಲಿ ಶ್ರಮದಾನ

ಸುಳ್ಯ ಗಾಂಧಿನಗರದ ಅಂಗನವಾಡಿ ಕೇಂದ್ರದ ಸುತ್ತ ಮುತ್ತಲಿನ ಪರಿಸರವನ್ನು ಮಹಾಮಾಯಿ ದೇವಸ್ಥಾನ ಸಮಿತಿ ಹಾಗು ಕೃಷ್ಣ ಜನ್ಮಾಷ್ಟಮಿ ಸಮಿತಿಯ ತಂಡದವರಿಂದ ಶ್ರಮದಾನ ಮೂಲಕ ಸ್ವಚ್ಛಗೊಳಿಸಲಾಯಿತು.ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ ಶ್ರಮದಾನ ಮಾಡುತ್ತಿರುವ ಸ್ಥಳಕ್ಕೆ ಆಗಮಿಸಿ ಸ್ಥಳೀಯರ ಸೇವೆಯನ್ನು ಅಭಿನಂದಿಸಿದರು . ಈ ಸಂದರ್ಭದಲ್ಲಿ ಎಂ ಬಿ ಚೋಮ, ನಾರಾಯಣ, ರವಿ ನಾವೂರು, ಐತಪ್ಪ, ಗುರು,...

ಕೊಯನಾಡು ಬರೆ ಕುಸಿದು ಶಾಲಾ ಕಟ್ಟಡಕ್ಕೆ ಹಾನಿ

ಕೊಡಗು ಸಂಪಾಜೆ ಗ್ರಾಮದ ಕೊಯನಾಡು ಸರಕಾರಿ ಶಾಲೆಯ ಹಿಂಭಾಗದ ಬರೆ ಕುಸಿತ ಗೊಂಡಿದ್ದು ಹೊಸದಾಗಿ ನಿರ್ಮಾಣವಾದ ಕಟ್ಟಡಕ್ಕೆ ಹಾನಿಗೊಂಡಿದ್ದು ಪಂಚಾಯತ್ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು, ಶಾಲಾ ಅಭಿವೃದ್ದಿ ಸಮಿತಿ ಸದಸ್ಯರು ಪರಿಶೀಲನೆ ನಡೆಸಿದರು.
Loading posts...

All posts loaded

No more posts

error: Content is protected !!