Ad Widget

ಎಲಿಮಲೆ ಸರಕಾರಿ ಪ್ರೌಢಶಾಲೆಗೆ 76.6 %

ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಎಲಿಮಲೆ ಸರಕಾರಿ ಪ್ರೌಢಶಾಲೆಗೆ ಶೇ 76.6 ಫಲಿತಾಂಶ ಬಂದಿದೆ. ಒಟ್ಟು 60 ವಿದ್ಯಾರ್ಥಿಗಳಲ್ಲಿ 46 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಅತಿ ಹೆಚ್ಚು ಅಂಕ ಪಡೆದವರು ಹಿತಾಶ್ರೀ ಪಿ. 605, ಮೇಘನಾ ಎಂ. 576, ಜಯಶ್ರೀ ಎ. ಆರ್. 576, ಕುಲಶ್ರೀ ಎಚ್. 566, ಮಮತಾ ಕೆಪಿ 560 ಅಂಕ...

ಸೈಂಟ್ ಜೋಸೆಫ್ ಸ್ಕೂಲ್ ವಿದ್ಯಾರ್ಥಿನಿ ಮುಬಿನ 620 ಅಂಕ

ಸುಳ್ಯ ಸೈಂಟ್ ಜೋಸೆಫ್ ಸ್ಕೂಲ್ ವಿದ್ಯಾರ್ಥಿನಿ ಮುಬಿನ 620 ಅಂಕ ಪಡೆದಿರುತ್ತಾರೆ. ಇವರು ಸುಳ್ಯ ಕಲ್ಲುಮುಟ್ಲು ನಿವಾಸಿ ಅಬೂಬಕರ್ ರಾಬಿಯ ದಂಪತಿಗಳ ಪುತ್ರಿಯಾಗಿದ್ದಾರೆ. ಈಕೆ ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಜಿ ಕೆ ಹಮೀದ್ ಅವರ ಸಹೋದರಿಯ ಪುತ್ರಿಯ ಪುತ್ರಿ.
Ad Widget

ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕ: 67.74% ಫಲಿತಾಂಶ

ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕ ಇಲ್ಲಿನ ಎಸ್.ಎಸ್.ಎಲ್ ಸಿ ಫಲಿತಾಂಶ ಲಭ್ಯವಾಗಿದ್ದು, 31 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 7 ವಿಶೇಷ ಶ್ರೇಣಿ, 5 ಪ್ರಥಮ ಶ್ರೇಣಿ, 7 ದ್ವಿತೀಯ ಶ್ರೇಣಿ ಹಾಗೂ 2 ತೃತೀಯಶ್ರೇಣಿಗಳನ್ನು ಪಡೆದುಕೊಳ್ಳುವ ಮೂಲಕ 21 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಸಂಸ್ಥೆಯು ಈ ಬಾರಿ ಶೇಕಡಾ 67.74 ಫಲಿತಾಂಶ ದಾಖಲಿಸಿದ್ದು, ಸುಮಿತ್ರಾ ಕೆ 556 (88.96%),...

ವಿದ್ಯಾಬೋಧಿನೀ ಬಾಳಿಲ : 77.52% ಫಲಿತಾಂಶ

ಈ ಬಾರಿಯ ಎಸ್. ಎಸ್.ಎಲ್.ಸಿ ಫಲಿತಾಂಶ ಪ್ರಕಟಗೊಂಡಿದ್ದು, ವಿದ್ಯಾಬೋಧಿನೀ ಪ್ರೌಢಶಾಲೆ ಬಾಳಿಲ ಶೇಕಡಾ 77.52 ಫಲಿತಾಂಶ ದಾಖಲಿಸಿದೆ. ಸಂಸ್ಥೆಯ 129 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 100 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 17 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ ಹಾಗೂ 69 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಸಂಸ್ಥೆಯ ಚರೀಷ್ಮಾ ಎ 603(96.48%) ಹಾಗೂ ಆಶಿತಾ ಬಿ 600 (96%...

ಎಸ್ ಎಸ್ ಎಲ್ ಸಿ : ಕೆ.ಎಸ್.ಗೌಡ ವಿದ್ಯಾಸಂಸ್ಥೆಗೆ 87.5% ಫಲಿತಾಂಶ

ಕೆ. ಎಸ್. ಗೌಡ ಆಂಗ್ಲಮಾಧ್ಯಮ ವಿದ್ಯಾಸಂಸ್ಥೆ ನಿಂತಿಕಲ್ಲು ಇಲ್ಲಿನ 16 ಮಕ್ಕಳು ಪರೀಕ್ಷೆಗೆ ಹಾಜರಾಗಿದ್ದು 14 ಮಕ್ಕಳು ತೇರ್ಗಡೆಯಾಗಿದ್ದಾರೆ.ಸಂಜನಾ ಬಿ ಎಲ್ 574, ತನ್ಮಯ್ ಕೆ ಕೆ 572, ಸುಭದಾ ಪಿ 550 ಅಂಕಣಗಳನ್ನು ಗಳಿಸಿದ್ದಾರೆ. ವಿಶೇಷವಾಗಿ ತುಳು ಪರೀಕ್ಷೆಯಲ್ಲಿ 4 ವಿದ್ಯಾರ್ಥಿಗಳು 100 ಕ್ಕೆ 100 ಅಂಕಗಳನ್ನು ಗಳಿಸಿ ತೇರ್ಗಡೆಯಾಗಿದ್ದಾರೆ.

ಹಳೆಗೇಟು ನಿವಾಸಿಯೊಬ್ಬರಿಗೆ ಕೊರೊನಾ ಪಾಸಿಟಿವ್ – ಇಂದು ಒಟ್ಟು 3 ಸೋಂಕಿತರ ಪತ್ತೆ

ಹಳೆಗೇಟು ನಿವಾಸಿಯೊಬ್ಬರಿಗೆ ಇಂದು ಕೊರೊನಾ ಪಾಸಿಟಿವ್ ಧೃಡವಾಗಿದ್ದು ,ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಕಾರಂಟೈನ್ ಗೊಳಪಡಿಸಿದ್ದಾರೆ.

ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿಧ್ಯಾರ್ಥಿ ಅನುಷ್ ಎ.ಎಲ್. ಗೆ 625 ಅಂಕ – ರಾಜ್ಯಕ್ಕೆ ಪ್ರಥಮ

ಕಡಬ ತಾಲೂಕಿನ ಸುಬ್ರಹ್ಮಣ್ಯದ ಕುಮಾರಸ್ವಾಮಿ ಪ್ರೌಢಶಾಲಾ ವಿದ್ಯಾರ್ಥಿ ಅನುಷ್ ಎ.ಎಲ್. 625 ರಲ್ಲಿ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುತ್ತಾರೆ. ಈತ ಗುತ್ತಿಗಾರು ಮೆಸ್ಕಾಂ ಪ್ರಭಾರ ಜೆಇ ಆಗಿರುವ ಬಳ್ಪ ಗ್ರಾಮದ ಲೋಕೇಶ್ ಎಣ್ಣೆಮಜಲು ಹಾಗೂ ಉಷಾ ದಂಪತಿಗಳ ಪುತ್ರ.

ಪೆರಾಜೆ ತಿರುವಿನಲ್ಲಿ ಝೂಮ್ ಮಿರರ್ ಅಳವಡಿಕೆ

ಕನ್ನಡ ಪೆರಾಜೆ ರಸ್ತೆಯಿಂದ ಮಡಿಕೇರಿ ಮಾಣಿ ರಸ್ತೆ ಗೆ ಬರುವಾಗ ತಿರುವು ಇರುವುದರಿಂದ ಅಪಘಾತಗಳು ಸಂಭವಿಸುತ್ತಿರುತ್ತದೆ, ಇದನ್ನು ಮನಗಂಡು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಕೊಡಗು ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧ್ಯಕ್ಷ ಉನೈಸ್ ಪೆರಾಜೆ ಝೂಮ್ ಮಿರರ್ ಅನ್ನು ಕೊಡುಗೆ ಯಾಗಿ ನೀಡಿದರು ಈ ಸಂದರ್ಭದಲ್ಲಿ ಪೆರಾಜೆ ಯ ಕರವೇ ಸ್ವಾಭಿಮಾನಿ ಬಣದ ಕಾರ್ಯಕರ್ತರು...

ಸುಳ್ಯದಲ್ಲಿ ಮೂರನೇ ಹಂತದ ಉದ್ಯೋಗ ನೈಪುಣ್ಯ ತರಬೇತಿಗೆ ಚಾಲನೆ

ಗ್ರಾಮ ವಿಕಾಸ ಮಂಗಳೂರು ವಿಭಾಗ, ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು(ರಿ.), ಸಹಕಾರ ಭಾರತಿ ದ.ಕ., ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸುಳ್ಯ ಇದರ ಆಶ್ರಯದಲ್ಲಿ ಸುಳ್ಯದ ಎ.ಪಿ.ಯಂ.ಸಿ ಸಭಾಂಗಣದಲ್ಲಿ ನಡೆದ ಆತ್ಮ ನಿರ್ಭರ ಭಾರತಕ್ಕಾಗಿ ಉದ್ಯೋಗ ನೈಪುಣ್ಯ ತರಬೇತಿ ಇದರ ಉದ್ಘಾಟನಾ ಕಾರ್ಯಕ್ರಮವು ಆ. 10ರಂದು ನಡೆಯಿತು. ಕ್ಯಾಂಪ್ಕೊ ಪುತ್ತೂರು ಇದರ ಸಿ.ಇ.ಓ ಕೃಷ್ಣ...

ಪದ್ಮಯ್ಯ ಗೌಡ ಕಮಿಲ ನಿಧನ

ಗುತ್ತಿಗಾರು ಗ್ರಾಮದ ಕಮಿಲ ಆಜಡ್ಕ ದಿ. ಶೇಷಪ್ಪ ಗೌಡರ ಪುತ್ರ ಪದ್ಮಯ್ಯ ಗೌಡ ಆ.7 ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ ಪದ್ಮಾವತಿ,ಮೂವರು ಪುತ್ರಿಯರು, ಅಳಿಯಂದಿರು, ಹಾಗೂ ಸಹೋದರ ಸಹೋದರಿಯರನ್ನು ಅಗಲಿದ್ದಾರೆ.
Loading posts...

All posts loaded

No more posts

error: Content is protected !!