- Thursday
- November 28th, 2024
ಹರಿಹರವ ಪಲ್ಲತ್ತಡ್ಕ ಕೊಲ್ಲಮೊಗ್ರ ಪ್ರಾ.ಕೃ.ಪ.ಸ.ಸಂಘದ ಕಛೇರಿಯಲ್ಲಿ 74 ನೇ ಸ್ವಾತಂತ್ರ್ಯ ದಿನಾಚರಣೆ ನಡೆಯಿತು. ನಿವೃತ್ತ ಉಪನ್ಯಾಸಕರಾದ ರಾಮಚಂದ್ರ ಪಳಂಗಾಯ ಧ್ವಜರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ವಿನೂಪ್ ಮಲ್ಲಾರ ಮತ್ತು ಉಪಾಧ್ಯಕ್ಷರಾದ ಮಣಿಕಂಠ ಕೊಳಗೆ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಷಪ್ಪ ಗೌಡ ಕಿರಿಭಾಗ, ಸಿಬ್ಬಂದಿ ವರ್ಗ ಮತ್ತು ಸಂಸ್ಥೆಯ ನಿರ್ದೇಶಕರು ಮತ್ತು ಸದಸ್ಯರು ಹಾಜರಿದ್ದರು.
ಮಡಪ್ಪಾಡಿ ಹಿ.ಪ್ರಾ.ಶಾಲೆಯಲ್ಲಿ 74ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ನಾಗೇಶ್ ಕುಚ್ಚಾಲ ಧ್ವಜಾರೋಹಣ ಗೈದರು. ಈ ಸಂದರ್ಭದಲ್ಲಿ ಗ್ರಾ.ಪಂ.ಮಾಜಿ ಅಧ್ಯಕ್ಷೆ ಶಕುಂತಲಾ ಕೇವಳ,ಶಿಕ್ಷಕರು, ಗ್ರಾ.ಪಂ.ಸಿಬ್ಬಂದಿಗಳು,ಶಿಕ್ಷಕರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಚಂದ್ರಶೇಖರ ಪಾರೆಪ್ಪಾಡಿ ಸ್ವಾಗತಿಸಿ, ವಂದಿಸಿದರು.
ಗುತ್ತಿಗಾರು ಬ್ಲೆಸ್ಡ್ ಕುರಿಯಾಕೋಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 74ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಶಾಲೆಯ ಮುಖ್ಯ ಶಿಕ್ಷಕಿ ಸಿ.ಜಿಜಿ ರೋಸ್ ರವರು ಧ್ವಜಾರೋಹಣವನ್ನು ನೆರವೇರಿಸಿದರು. ನಂತರ ಮಾತನಾಡಿದ ಅವರು "ಸ್ವಾತಂತ್ರ್ಯ ದಿನಾಚರಣೆ ಎಲ್ಲಾ ಭಾರತೀಯರ ಹಬ್ಬವಾಗಿದೆ. ಸ್ವಾತಂತ್ರಕ್ಕಾಗಿ ಅನೇಕ ವ್ಯಕ್ತಿಗಳ ಹೋರಾಟದ ಫಲವಾಗಿ ನಾವು ಇಂದು ಸ್ವಚಂದವಾಗಿ, ಸ್ವತಂತ್ರವಾಗಿ ಬದುಕುತ್ತಿದ್ದೇವೆ.ಇಂತಹ ಮಹಾನ್ ಹೋರಾಟಗಾರರನ್ನು ಸದಾ...
ಸ.ಹಿ.ಪ್ರಾ.ಶಾಲೆ ದರ್ಖಾಸ್ತು ಇಲ್ಲಿ 74ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಧ್ವಜಾರೋಹಣ ಕಾರ್ಯಕ್ರಮವನ್ನು ಎಸ್.ಡಿ.ಎಂ.ಸಿ ಅಧ್ಯಕ್ಷೆ ಶ್ರೀಮತಿ ಸುಜಾತಾ ನೆರವೇರಿಸಿದರು. ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಶ್ರೀ ನಟರಾಜ್ ಸ್ವತಂತ್ರ ದಿನೋತ್ಸವ ಭಾಷಣಗೈದರು. ಪ್ರಭಾರ ಮುಖ್ಯಶಿಕ್ಷಕಿ ಶ್ರೀಮತಿ ಪಲ್ಲವಿ ಪಿ ಸ್ವಾಗತಿಸಿ, ಸಹಶಿಕ್ಷಕಿ ಪ್ರೇಮಾ ವಂದಿಸಿದರು. ಈ ಸಂದರ್ಭದಲ್ಲಿ ಶಾಲೆಯ ಹಳೆ ವಿದ್ಯಾರ್ಥಿಗಳು ಹಾಗೂ ಸಹಶಿಕ್ಷಕರು...
ಸಂಪಾಜೆ ಬದ್ರಿಯಾ ಜುಮಾ ಮಸೀದಿಯಲ್ಲಿ 74 ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಬದರುಲ್ ಹುದಾ ಸ್ವಲಾತ್ ಕಮಿಟಿ ಅಧ್ಯಕ್ಷರಾದ ಬೊಂಬಾಯಿ ಖಾದರ್ ದ್ವಜಾ ರೋಹಣ ನೆರವೇರಿಸಿದರು. ಖತೀಬ್ ಉಸ್ತಾದ್ ಜಮಾಲ್ ಅಮಾನಿ , ಜಮಾಯತ್ ಕಮಿಟಿ, ಸ್ವಲಾತ್ ಕಮಿಟಿ ಸದಸ್ಯರು ಉಪಸ್ಥಿತರಿದ್ದರು.
ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದ ಕೆಲವು ತಿಂಗಳುಗಳಿಂದ ಹಲವಾರು ಕೊರೋನಾ ಸೋಂಕಿತ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು ಇದರಲ್ಲಿ ಹಲವಾರು ಮಂದಿ ಗುಣಮುಖರಾಗಿ ತೆರಳಿದ್ದಾರೆ. ಬಡವರು ಅಧಿಕ ಹಣವನ್ನು ಚಿಕಿತ್ಸೆಗಾಗಿ ವೆಚ್ಚ ಭರಿಸಲು ಸಾಧ್ಯವಾಗದೆ ಇರುವವರು ಸರ್ಕಾರಿ ಆಸ್ಪತ್ರೆಯನ್ನೇ ನಂಬಿರುತ್ತಾರೆ.ಆದರೆ ನಮ್ಮ ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ವಿದ್ಯುಚ್ಛಕ್ತಿ ಉತ್ಪಾದನೆಯ ಸೋಲಾರ್ ನೀರಿನ ಟ್ಯಾಂಕ್ ಗಳು ಲಕ್ಷಾಂತರ ರೂಪಾಯಿಯ...
ಸುಳ್ಯದ ನ್ಯಾಯಲಯದಲ್ಲಿ ಸ್ವಾತಂತ್ರ ದಿನಾಚರಣೆಯನ್ನು ಆಚರಿಸಲಾಯಿತು. ಸುಳ್ಯದ ಹಿರಿಯ ನ್ಯಾಯಾಲಯದ ನ್ಯಾಯಾಧೀಶರಾದ ಪುರುಷೋತ್ತಮ, ಕಿರಿಯ ನ್ಯಾಯಧೀಶರಾದ ಯಶವಂತ ಕುಮಾರ್, ವಕೀಲರ ಸಂಘದ ಅಧ್ಯಕ್ಷ ಯಂ ವೆಂಕಪ್ಪ ಗೌಡ, ಸಂಘದ ಪದಾದಿಕಾರಿಗಳು, ಹಿರಿಯ ಕಿರಿಯ ಸದಸ್ಯರು, ನ್ಯಾಯಾಲಯದ ಸಿಬ್ಬಂದಿಗಳು ಮತ್ತಿತರರು ಉಪಸ್ಥಿತರಿದ್ದರು .
ಸರಕಾರಿ ಪ್ರೌಢ ಶಾಲೆ ಎಲಿಮಲೆ ಇಲ್ಲಿ 74 ನೆ ಸ್ವಾತಂತ್ರ್ಯ ಉತ್ಸವವನ್ನು ಆಚರಿಸಲಾಯಿತು. ಶಾಲಾಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ವಿಶ್ವನಾಥ್ ನಂದಗೋಕುಲ ಇವರು ದ್ವಜಾರೋಹಣ ನೆರವೇರಿಸಿ ಶುಭ ಹಾರೈಸಿದರು.ಈ ಸಂದರ್ಭ 2019-20 ರ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯ ಕನ್ನಡ ಮಾಧ್ಯಮದಲ್ಲಿ ತಾಲೂಕಿಗೆ ದ್ವೀತಿಯ ಸ್ಥಾನ ಹಾಗೂ ಸರಕಾರಿ ಪ್ರೌಢ ಶಾಲೆಗಳಲ್ಲಿ ತಾಲೂಕಿಗೆ ಪ್ರಥಮ...
ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ತಂಟೆಪ್ಪಾಡಿಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ ನಡೆಯಿತು. ಎಸ್.ಡಿ.ಎಂ.ಸಿ ಅಧ್ಯಕ್ಷ ಶೇಷಪ್ಪ ಕೆ ಧ್ವಜಾರೋಹಣಗೈದರು. ಈ ಸಂದರ್ಭದಲ್ಲಿ ಮುಖ್ಯಶಿಕ್ಷಕಿ ಗೀತಾ, ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ಪಾರ್ವತಿ ಜಿ ಕೆ ಹಾಗೂ ಪೋಷಕರು ಉಪಸ್ಥಿತರಿದ್ದರು.
Loading posts...
All posts loaded
No more posts