- Thursday
- November 28th, 2024
ಈ ವರ್ಷದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ವಿದ್ಯಾಬೋಧಿನಿ ಪ್ರೌಢಶಾಲೆ ಬಾಳಿಲದ ವಿದ್ಯಾರ್ಥಿನಿ ಆಶಿತಾ ಬಿ ಕಡುಬಡತನ ಹಾಗೂ ತನ್ನ ತಾಯಿಯ ಅನಾರೋಗ್ಯದ ನಡುವೆಯೂ 625 ಕ್ಕೆ 600 ಅಂಕ ಗಳಿಸಿರುತ್ತಾರೆ. ಬಳ್ಪ ಗ್ರಾಮದ ವಿಷ್ಣುಮಂಗಿಲ ಹೊನ್ನಪ್ಪ ಗೌಡ ಹಾಗೂ ವಾರಿಜಾ ದಂಪತಿಗಳ ಮಗಳಾದ ಇವರನ್ನು ಸಂಸದ ಮತ್ತು ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ನಳಿನ್ ಕುಮಾರ್ ಕಟೀಲ್, ಶಾಸಕ ಎಸ್...
ಗುತ್ತಿಗಾರು ಗ್ರಾಮದ ಮೊಗ್ರದಲ್ಲಿ ಇಂದು ಸಂಜೆ ರಕ್ಷಾಬಂಧನ ಕಾರ್ಯಕ್ರಮ ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಆಚರಿಸಲಾಯಿಗು ಪ್ರಜ್ವಲ್ ನೆಕ್ಲಾಜೆ ಇವರು ರಕ್ಷಾಬಂಧನದ ಸಂದೇಶ ವಾಚಿಸಿದರು. ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ಜಯಪ್ರಕಾಶ್ ಮೊಗ್ರ, ಜಗದೀಶ ಚಿಕ್ಮುಳಿ ರಾಧಾಕೃಷ ತುಪ್ಪದ ಮನೆ ಹಾಗೂ ಊರವರು ಬಾಗವಹಿಸಿದರು.
ಲಯನ್ಸ್ ಕ್ಲಬ್ ಸಂಪಾಜೆ ಇದರ ವತಿಯಿಂದ ಮೈಸೂರು ಮಾಣಿ ಹೆದ್ದಾರಿಯ ಕಡೆಪಾಲ ಬಳಿ ಹಲವು ಅಪಘಾತ ಗಳಿಗೆ ಕಾರಣ ವಾಗಿರುವ ರಸ್ತೆ ಉಬ್ಬು ( ಹಂಪ್) ಗಳಿಗೆ ಬಿಳಿ ಬಣ್ಣ ವನ್ನು ಹಚ್ಚಲಾಯಿತು. ಈ ಸಂದರ್ಭದಲ್ಲಿ ಕ್ಲಬ್ ನ ಅಧ್ಯಕ್ಷ ಲ.ವಾಸುದೇವ ಕಟ್ಟೆಮನೆ ಕಾರ್ಯದರ್ಶಿ ಲ.ಶುಭಾ, ಕೋಶಾಧಿಕಾರಿ ಲ. ವೆಂಕಪ್ಪ ಬೊಳ್ಳೂರು,ಸದಸ್ಯರಾದ ಲ. ಪ್ರಶಾಂತ್, ಲ.ಕಿಶೋರ,ಲ....
ಸಂಪಾಜೆ ಜೂನಿಯರ್ ಕಾಲೇಜಿನಲ್ಲಿ ಲಯನ್ಸ್ ಕ್ಲಬ್ ಸಂಪಾಜೆ ಸಹಯೋಗ ದೊಂದಿಗೆ ಸ್ವಾತಂತ್ರ ದಿನಾಚರಣೆ ಆಚರಿಸಲಾಯಿತು. ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ರಾಜಾರಾಮ ಕೀಲಾರು ಮತ್ತು ಕ್ಲಬ್ ನ ಅಧ್ಯಕ್ಷರಾದ ಲ. ವಾಸುದೇವ ಕಟ್ಟೆಮನೆ ಧ್ವಜರೋಹಣವನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಗಿಡ ನೆಡುವ ಮೂಲಕ ವನಮಹೋತ್ಸವ ಕಾರ್ಯಕ್ರಮ ನಡೆಸಲಾಯಿತು. ಶಾಲಾ ಪ್ರಾಂಶುಪಾಲ ರಾದ ಶ್ರೀಮತಿ ವೈಕೆ ಮಾಲತಿ,...
ಮಂಡೆಕೋಲು ಗ್ರಾಮದ ಕಾಡುಸೊರಂಜ ಅಮೈ ರಸ್ತೆಯನ್ನು ಗ್ರಾಮಸ್ಥರು ದುರಸ್ತಿಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಮಿಥೇಶ್, ಕಿಶನ್, ದಯಾನಂದ,ಪ್ರದೀಪ್ ಶ್ರಮದಾನ ನಡೆಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ,ಸಂಸದ ನಳಿನ್ ಕುಮಾರ್ ಕಟೀಲ್ ಇಂದು ಸಂಜೆ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 625 ಅಂಕ ಪಡೆದು ರಾಜ್ಯಮಟ್ಟದಲ್ಲಿ ಮಿಂಚಿದ, ಗ್ರಾಮೀಣ ಪ್ರತಿಭೆ ಅನುಷ್ ಎ.ಎಲ್ ಮನೆಗೆ ಭೇಟಿ ನೀಡಿ ಸನ್ಮಾನಿಸಿದರು.ಈ ವೇಳೆ ಕಟೀಲ್ ರೊಂದಿಗೆ ಶಾಸಕ ಎಸ್.ಅಂಗಾರ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವೆಂಕಟ್ ವಳಲಂಬೆ, ಬಿಜೆಪಿ ತಾಲೂಕು ಅಧ್ಯಕ್ಷ ಹರೀಶ್ ಕಂಜಿಪಿಲಿ, ಗುತ್ತಿಗಾರು ಸಹಕಾರಿ...
ಮೊರಾರ್ಜಿ ದೇಸಾಯಿ ರೆಸಿಡೆನ್ಸಿ ಸ್ಕೂಲ್ ನೆಲ್ಲಿತೀರ್ಥ ಮಂಗಳೂರು ಇಲ್ಲಿನ ವಿದ್ಯಾರ್ಥಿ ಚೈತನ್ಯ ಎಸ್ ಕೆ. ಈ ಬಾರಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 583 ಅಂಕ ಪಡೆದು, (93.28%) ತೇರ್ಗಡೆ ಹೊಂದಿರುತ್ತಾಳೆ. ಇವಳು ಹಾಲೆಮಜಲು ಸಂಪ್ಯಾಡಿ ಕವಿತಾ ಕರುಣಾಕರ ಇವರ ಪುತ್ರಿ.
ಸುಳ್ಯ ಸರಕಾರಿ ಆಸ್ಪತ್ರೆಯ ಕೋವಿಡ್ ವಾರ್ಡ್ನಲ್ಲಿರುವ ಪೇಷೆಂಟ್ಗಳಿಗೆ ಸ್ನಾನಕ್ಕೆ ಬಿಸಿನೀರು ಸಿಗದಿರುವ ಬಗ್ಗೆ ಅಮರ ಸುದ್ದಿ ವರದಿ ಪ್ರಕಟಿಸಿದ ಬೆನ್ನಲ್ಲೇ ಸಚಿವರು ಆರೋಗ್ಯಾಧಿಕಾರಿಗಳಿಗೆ ನಾಳೆಯೇ ಗೀಸರ್ ಅಳವಡಿಸಲು ಸೂಚಿಸಿದ್ದಾರೆ. ಇಂದು ಕಾರ್ಯನಿಮಿತ್ತ ಸುಳ್ಯಕ್ಕೆ ಬಂದಾಗ ಪತ್ರಕರ್ತರು ಪ್ರಶ್ನಿಸಿದಾಗ ಉತ್ತರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ನಾಳೆಯೇ ಸಮಸ್ಯೆ ನಿವಾರಿಸುವುದಾಗಿ ಹೇಳಿದರಲ್ಲದೆ ತಾಲೂಕು ವೈದ್ಯಾಧಿಕಾರಿಯವರನ್ನು...
ಸಾಮಾಜಿಕ ವ್ಯವಸ್ಥೆಯು ಹಳಿ ತಪ್ಪದಿರಲು ಯುವಜನತೆ ರಾಮನ ಆದರ್ಶ ಕೃಷ್ಣನ ಸಂದೇಶಗಳನ್ನು ಪಾಲಿಸುವಲ್ಲಿ ಯುವಕರು ಮುಂದಡಿಯಿಡಬೇಕು. ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಸದ್ಗುಣಗಳನ್ನು ಮೈಗೂಡಿಸಿಕೊಂಡ ಯುವಕರ ದಂಡು ಕಾರ್ಯಪ್ರವೃತ್ತರಾಗಬೇಕಿದೆ. ಆ ನಿಟ್ಟಿನಲ್ಲಿ ಭಾವೈಕ್ಯ ಯುವಕ ಮಂಡಲವು ಒಂದು ಹೆಜ್ಜೆ ಮುಂದೆ ಇಟ್ಟಿರುವುದು ಯುವ ಸಮುದಾಯಕ್ಕೆ ಮಾದರಿಯಾಗಿದೆ ಎಂದು ಬೆಳ್ಳಾರೆ ಪೋಲೀಸ್ ಠಾಣೆಯ ಉಪನಿರೀಕ್ಷಕರಾದ ಶ್ರೀ ಆಂಜನೇಯ ರೆಡ್ಡಿಯವರು...
ಅರಂತೋಡು ವಲಯ ಕಾಂಗ್ರೆಸ್ ಸಭೆಯು ವಲಯ ಕಾಂಗ್ರೆಸ್ ಅಧ್ಯಕ್ಷ ಜನಾರ್ಧನ ಅಡ್ಕಬಳೆ ಅಧ್ಯಕ್ಷತೆಯಲ್ಲಿ ಆ.16 ರಂದು ತೆಕ್ಕಿಲ್ ಸಮುದಾಯ ಭವನದಲ್ಲಿ ನಡೆಯಿತು. ಸಭೆಯಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜಯಪ್ರಕಾಶ್ ರೈ, ಸುಳ್ಯ ಬ್ಲಾಕ್ ಕಾಂಗ್ರೆಸ್ ವಕ್ತಾರ ನಂದರಾಜ್ ಸಂಕೇಶ್, ದಿನೇಶ್ ಗುತ್ತಿಗಾರ್, ಅರಂತೋಡು ಗ್ರಾಮ ಪಂಚಾಯಿತ್ ಮಾಜಿ ಸದಸ್ಯ ಇದ್ದೀನ್ ಕುಂಞ,ಸುಳ್ಯ ವಿಧಾನ ಸಭಾ...
Loading posts...
All posts loaded
No more posts