Ad Widget

ಶಿಥಿಲಗೊಂಡು ಸೋರುತ್ತಿದ್ದ ಕಂದ್ರಪ್ಪಾಡಿ ಅಂಚೆ ಕಛೇರಿಗೆ ಯುವಕ ಮಂಡಲದಿಂದ ಟರ್ಪಾಲ್ ಅಳವಡಿಕೆ

ಸುಮಾರು 60 ವರ್ಷಗಳ ಹಿಂದೆ ನಿರ್ಮಾಣಗೊಂಡ ಕಂದ್ರಪ್ಪಾಡಿ ಅಂಚೆ ಕಛೇರಿ ಸಂಪೂರ್ಣ ಶಿಥಿಲಗೊಂಡಿದ್ದು ಕುಸಿದ ಬೀಳುವ ಹಂತ ತಲುಪಿತ್ತು. ಈ ಬಗ್ಗೆ ಗ್ರಾಮಸ್ಥರ ಮನವಿಯಂತೆ ಆ.29 ರಂದು ಅಮರ ಸುದ್ದಿ ವರದಿ ಪ್ರಕಟಿಸಿತ್ತು.ಆ.30 ರಂದು ಶಿಥಿಲ ಸ್ಥಿತಿಯಲ್ಲಿದ್ದ ಕಂದ್ರಪ್ಪಾಡಿಯ ಅಂಚೆ ಕಚೇರಿ ಇರುವ ಕಟ್ಟಡವನ್ನು ದೇವಚಳ್ಳ ಯುವಕ ಮಂಡಲ ಕಂದ್ರಪ್ಪಾಡಿಯ ವತಿಯಿಂದ ಟರ್ಪಾಲು ಹಾಸಿ ತಾತ್ಕಾಲಿಕ...

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ನಿಧನಕ್ಕೆ ಧರ್ಮಪಾಲ ಕೊಯಿಂಗಾಜೆ ಸಂತಾಪ

ಮಾಜಿ ರಾಷ್ಟ್ರಪತಿ, ಕೇಂದ್ರದ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಪ್ರಣಬ್ ಮುಖರ್ಜಿ ಅವರ ನಿಧನಕ್ಕೆ ಸುಳ್ಯ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಧರ್ಮಪಾಲ ಕೊಯಿಂಗಾಜೆ ಸಂತಾಪ ಸೂಚಿಸಿದ್ದಾರೆ.ಪ್ರಣಬ್ ಮುಖರ್ಜಿ ಅವರು ಭಾರತ ಕಂಡ ಶ್ರೇಷ್ಠ ರಾಜಕಾರಣಿಗಳಲ್ಲಿ ಒಬ್ಬರು. ಅತ್ಯುತ್ತಮ ವ್ಯಕ್ತಿತ್ವ ಹೊಂದಿದ್ದ ಅವರು ಸುಮಾರು 5 ದಶಕಗಳ ಕಾಲ ರಾಜಕೀಯದಲ್ಲಿ ಸಕ್ರಿಯವಾಗಿ ಭಾಗಿಯಾಗಿ...
Ad Widget

ಸುಳ್ಯದ ಗಾಂಧಿನಗರದಲ್ಲಿ ಅಯೋಧ್ಯ ಮೆನ್ಸ್ ಡ್ರೆಸ್ ಶಾಪ್ ಶುಭಾರಂಭ

ಸುಳ್ಯದ ಗಾಂಧಿನಗರದ ಶಶಿ ಕಾಂಪ್ಲೆಕ್ಸ್ ನಲ್ಲಿ ಪುರುಷರ ಡ್ರೆಸ್ ಮಳಿಗೆ "ಅಯೋಧ್ಯಾ" ಇಂದು ಶುಭಾರಂಭಗೊಂಡಿತು. ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಪ್ರಾಂತ ಸಹ ಸೇವಾ ಪ್ರಮುಖ್ ನ.ಸೀತಾರಾಮ ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕೆ.ವಿ.ಜಿ.ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ.ಲೀಲಾಧರ್ ಕೆ.ವಿ., ಗಣೇಶ್ ಪ್ರಿಂಟರ್ಸ್ ಮಾಲಕ ಪಿ.ಕೆ.ಉಮೇಶ್, ಗೌಡ ಯುವಸೇವಾ ಸಂಘದ ತರುಣ ಘಟಕದ ಅಧ್ಯಕ್ಷ...

ನಿಂತಿಕಲ್ಲು ಅರೇಬಿಕ್ ಶಾಲಾ ಕಟ್ಟಡ ಲೋಕಾರ್ಪಣೆ

ನಿಂತಿಕಲ್ಲು ಬದ್ರಿಯಾ ಜುಮ್ಮಾ ಮಸೀದಿಯ ಅದೀನದಲ್ಲಿ ಕಾರ್ಯಾಚರಿಸುತ್ತಿರುವ ಸಿರಾಜುಲ್ ಉಲುಂ ಮದರಸ ಇದರ ನೂತನ ಕಟ್ಟಡದ ಉದ್ಘಾಟನಾ ಸಮಾರಂಭವು ಆಗಷ್ಟ್ 31 ರಂದು ನಡೆಯಿತು. ಜಮಾಅತ್ ಸಮಿತಿ ಅಧ್ಯಕ್ಷ ಎ ಎಂ ಮಹಮ್ಮದ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಖತೀಬ್ ಮಹಮ್ಮದಲಿ ಸಖಾಪಿ ದುವಾ ನೆರವೆರಿಸಿದರು. ನಂತರ ಹದೀಸ್ ಪಾರಾಯಾಣ ನಡೆಯಿತು. ಕಾರ್ಯಕ್ರಮದಲ್ಲಿ ಮುಹದ್ಸಿನ್ ಮುಸ್ತಪಾ ಝುಹುರಿ, ನಾಸಿರ್...

ಹರ್ಷಿತಾ ಡಿ.ಜೆ. ಯವರಿಗೆ ತೃತೀಯ ರ್‍ಯಾಂಕ್

ಪಾಂಡೇಶ್ವರ ಶ್ರೀನಿವಾಸ ವಿವಿ ಕಾಲೇಜ್ ಆಫ್ ಕಂಪ್ಯೂಟರ್ ಆಂಡ್ ಇನ್ಫಾರ್ಮೇಶನ್ ಸೈನ್ಸ್ ಎಂಸಿಎ ಸ್ನಾತಕೋತ್ತರ ಪದವಿಯ ಫಲಿತಾಂಶ ಪ್ರಕಟಗೊಂಡಿದ್ದು ಹರ್ಷಿತಾ ಡಿಜೆ . ( 8.92 ಸಿಜಿಪಿಎ ) ತೃತೀಯ ರ್‍ಯಾಂಕ್ ಪಡೆದಿದ್ದಾರೆ . ಅವರು ಮಾಜಿ ಸೈನಿಕ ಪಂಜದ ಅಳ್ಪೆಬನ ಜಯಂತ ಡಿ.ಎಸ್. ಮತ್ತು ಜಯಂತಿ ಎಸ್ ದಂಪತಿಗಳ ಪುತ್ರಿ .

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಜಮೀನನ್ನು ಖಾಸಗಿ ವ್ಯಕ್ತಿಗಳಿಗೆ ಲೀಸ್ ಗೆ ಕೊಡಬಾರದೆಂದೂ ಹಿತರಕ್ಷಣಾ ವೇದಿಕೆ ವತಿಯಿಂದ ಮನವಿ ಸಲ್ಲಿಕೆ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಯಾವುದೇ ಜಮೀನುಗಳನ್ನು ಯಾವುದೇ ಖಾಸಗಿ ಸಂಸ್ಥೆ ಅಥವಾ ವ್ಯಕ್ತಿಗಳಿಗೆ ಲೀಸ್‌ಗೆ ಕೊಡುವ ಪ್ರಸ್ತಾವನೆಗೆ ಆಕ್ಷೇಪ ವ್ಯಕ್ತಪಡಿಸಿ ದೇವಸ್ಥಾನದ ಹಿತರಕ್ಷಣಾ ವೇದಿಕೆ ವತಿಯಿಂದ ಇಂದು ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ರವೀಂದ್ರ ಎಂ.ಹೆಚ್. ಅವರಿಗೆ ಮನವಿ ಸಲ್ಲಿಸಿದ್ದಾರೆ.ಇತಿಹಾಸ ಪ್ರಸಿದ್ಧ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಸಾರ್ವಜನಿಕ ಸರಕಾರಿ ದೇವಸ್ಥಾನವಾಗಿದ್ದು, ಸದ್ರಿ ದೇವಸ್ಥಾನದ ಅಧೀನದ...

ಪಂಜ ಸಹಕಾರಿ ಸಂಘದ ವತಿಯಿಂದ ಸೆ.1 ರಂದು ಆಯುಷ್ಮಾನ್ ಭಾರತ್ ಕಾರ್ಡ್ ನೋಂದಣಿ ಶಿಬಿರ

ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಸೆ.1 ರಂದು ಆಯುಷ್ಮಾನ್ ಭಾರತ್ ಕಾರ್ಡ್ ನೋಂದಣಿ ಶಿಬಿರ ಬೆಳಿಗ್ಗೆ ಗಂಟೆ 9.30 ರಿಂದ ಸಂಜೆ 5 ರ ವರೆಗೆ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಕುಳ ತಿಳಿಸಿದ್ದಾರೆ.

ಮನವೇ….

ಮನವೇ ಯೋಚಿಸದಿರು ಈಗ ನಿನ್ನ ಸಮಯ ಕೆಟ್ಟಿದೆ ಎಂದು…ಮನವೇ ಚಿಂತಿಸದಿರು ನಿನ್ನ ಮುಂದೆ ಹಲವಾರು ನೋವುಗಳಿದೆ ಎಂದು… ಮನವೇ ಹೆದರದಿರು ನಿನ್ನ ಮುಂದೆ ವಿಭಿನ್ನ ಸಮಸ್ಯೆಗಳಿದೆ ಎಂದು…ಮನವೇ ಕಿವಿಗೊಡದಿರು ಸಮಾಜದ ನಕಾರಾತ್ಮಕ ಮಾತುಗಳಿಗೆ ಎಂದೆಂದು… ಮನವೇ ಮರುಗದಿರು ಮೋಸದ ಮಾತುಗಳಿಗೆ ಎಂದೆಂದು…ಮನವೇ ಕುಗ್ಗದಿರು ನಿನ್ನಲ್ಲಿ ಶಕ್ತಿ ಸಾಮರ್ಥ್ಯ ಇಲ್ಲ ಎಂದು… ಮನವೇ ಆತ್ಮಸ್ಥೈರ್ಯ ಕಳೆದುಕೊಳ್ಳದಿರು ನಿನಗಾದ...

ಮುಕ್ಕೂರು : ಆಯುಷ್ಮಾನ್ ಕಾರ್ಡ್ ನೋಂದಣಿ – ಸಾಮಾಜಿಕ ಬದ್ದತೆ ಸಂಘಟನೆಯ ಶಕ್ತಿ: ತಿರುಮಲೇಶ್ವರ ಭಟ್ ಕಾನಾವು

ಸಂಘಟನೆಗಳು ಸಮಾಜಮುಖಿ ಚಿಂತನೆಯೊಂದಿಗೆ ಸಾಮಾಜಿಕ ಬದ್ಧತೆಗೆ ಪೂರಕ ಚಟುವಟಿಕೆಯಲ್ಲಿ ತೊಡಗಿದಾಗ ಅದರಿಂದ ಯಶಸ್ಸು ಸಾಧ್ಯ ಎಂದು ಪ್ರಗತಿಪರ ಕೃಷಿಕ ತಿರುಮಲೇಶ್ವರ ಭಟ್ ಕಾನಾವು ಹೇಳಿದರು.ಕುಂಡಡ್ಕ- ಮುಕ್ಕೂರು ನೇಸರ ಯುವಕ ಮಂಡಲ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಹಾಗೂ ಸವಣೂರು ತನುಷ್ ಎಂಟರ್ಪ್ರೈಸ್ ಇದರ ಆಶ್ರಯದಲ್ಲಿ ಆ.30 ರಂದು ನಡೆದ ಆಯುಷ್ಮಾನ್ ಕಾರ್ಡ್ ನೋಂದಣಿ ಕಾರ್ಯಕ್ರಮ ಉದ್ಘಾಟಿಸಿ...

ಧರ್ಮಸ್ಥಳದ ಲಕ್ಷ್ಮೀ ಆನೆಯ ಮರಿಗೆ “ಶಿವಾನಿ” ಎಂದು ನಾಮಕರಣ

ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷ್ಮೀ ಆನೆಯು ಜು.1 ರಂದು ಹೆಣ್ಣು ಮರಿಗೆ ಜನ್ಮ ನೀಡಿದ್ದು , ಈ ಆನೆಯ ಮರಿಯ ನಾಮಕರಣ ಕಾರ್ಯಕ್ರಮ ಇಂದು ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ತುಲಾ ಲಗ್ನ ಸುಮೂರ್ತದಲ್ಲಿ ನಡೆಯಿತು . ಆನೆ ಮರಿಗೆ ' ಶಿವಾನಿ ” ಎಂಬ ಹೆಸರಿಡಲಾಯಿತು . ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಮತ್ತು...
Loading posts...

All posts loaded

No more posts

error: Content is protected !!