
ದಕ್ಷಿಣ ಕನ್ನಡ ಹಾಗೂ ಮಡಿಕೇರಿ ಘಟಕದ ಬೆಂಗಳೂರು ಗೌಡ ಸಂಘ ಮತ್ತು ಕೆ.ವಿ.ಜಿ ಸುಳ್ಯ ಹಬ್ಬದ ಸಮಿತಿಯಿಂದ ಸುಳ್ಯ ಕೆ.ವಿ.ಜಿ ಕಾನೂನು ಮಹಾವಿದ್ಯಾಲಯ ದಲ್ಲಿ ಸರಕಾರಿ ಪ್ರೌಢಶಾಲೆ ಎಲಿಮಲೆಯ ವಿದ್ಯಾರ್ಥಿನಿ, ದೇವಚಳ್ಳ ಗ್ರಾಮದ ಹರ್ಲಡ್ಕ, ಪಟ್ಟೆಮನೆ ಧನಂಜಯ ಹಾಗೂ ಶ್ರೀಮತಿ ದಮಯಂತಿ ಗಳ ಸುಪುತ್ರಿ ಹಿತಾಶ್ರೀ ಗೆ ಸನ್ಮಾನ ಸಮಾರಂಭ ನಡೆಯಿತು. ತಾಲೂಕಿನ ಸರಕಾರಿ ಪ್ರೌಢಶಾಲೆಗಳಲ್ಲಿ ಅತೀ ಹೆಚ್ಚು ಅಂಕ 625 ರಲ್ಲಿ 605 ಗಳಿಸಿ ಕೀರ್ತಿಗೆ ಭಾಜನಳಾಗಿದ್ದಾಳೆ. ಗ್ರಾಮೀಣ ಪ್ರದೇಶವಾದ ಸೇವಾಜೆ ಕಿರಿಯ ಪ್ರಾಥಮಿಕ ಶಾಲೆ , ದೇವಚಳ್ಳ ಹಿರಿಯ ಪ್ರಾಥಮಿಕ ಶಾಲೆ, ಸರಕಾರಿ ಪ್ರೌಢಶಾಲೆ ಎಲಿಮಲೆಯಲ್ಲಿ ವ್ಯಾಸಂಗ ಮಾಡಿ ಊರಿನ, ಗ್ರಾಮದ, ತಾಲೂಕಿನ ವಿದ್ಯಾಭಿಮಾನಿಗಳ ಪ್ರಶಂಸೆ ಗೆ ಪಾತ್ರಳಾಗಿದ್ದಾಳೆ. ಪಾಠದ ಜೊತೆಗೆ ಕ್ರೀಡೆ, ಪ್ರತಿಭಾ ಕಾರಂಜಿ ,ನಾಟಕ, ನೃತ್ಯ ಮುಂತಾದ ಚಟುವಟಿಕೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗೆ ಸೈ ಎನಿಸಿರುತ್ತಾಳೆ.
ಈ ಸಂದರ್ಭದಲ್ಲಿ ಡಾ. ಕೆ.ವಿ. ಚಿದಾನಂದ, ದ.ಕ ಹಾಗೂ ಮಡಿಕೇರಿ ಘಟಕದ ಬೆಂಗಳೂರು ಗೌಡ ಸಂಘದ ಪದಾದಿಕಾರಿಗಳು, ಸುಳ್ಯ ಕೆ.ವಿ.ಜಿ ಸುಳ್ಯ ಹಬ್ಬ ಸಮಿತಿ ಅಧ್ಯಕ್ಷ ಶೈಲೇಶ್ ಅಂಬೆಕಲ್ಲು ಹಾಗೂ ಸದಸ್ಯರು, ಎಲಿಮಲೆ ಪ್ರೌಢಶಾಲೆಯ ಮುಖ್ಯೋಪಾಧ್ಯಾರು, ಶಿಕ್ಷಕರು ಉಪಸ್ಥಿತರಿದ್ದರು.