Ad Widget

ಸುಳ್ಯ ತಾಲೂಕು ಟೂರಿಸ್ಟ್ ಕಾರು, ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್, ಟೆಂಪೋ ಚಾಲಕ ಮಾಲಕ ಸಂಘದ ವತಿಯಿಂದ ವೃತ ನಿರೀಕ್ಷಕರಿಗೆ ಮನವಿ


ಸುಳ್ಯ ತಾಲೂಕು ಟೂರಿಸ್ಟ್ ಕಾರು, ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್, ಟೆಂಪೋ ಚಾಲಕ ಮಾಲಕರ ಸಂಘವು ಕಾಲದ ಅವಶ್ಯಕತೆಗೆ ಸ್ಪಂದಿಸಲು ಉದಯಿಸಿದ ಸಂಸ್ಥೆಯಾಗಿದ್ದು,‌ 1980ರಲ್ಲಿ ನೋಂದಾಯಿಸಲ್ಪಟಿರುತ್ತದೆ. ತನ್ನದೇ ಆದ ಸ್ವಂತ ಕಟ್ಟಡವನ್ನು ಹಾಗೂ ಕಚೇರಿಯನ್ನೂ ಹೊಂದಿರುವ ಈ ಸಂಸ್ಥೆ ಜಿಲ್ಲಾ ಮಟ್ಟದಲ್ಲಿ ಹಾಗೂ ರಾಜ್ಯಮಟ್ಟದಲ್ಲೂ ವಿವಿಧ ಸಂಘಟನೆಗಳೊಂದಿಗೆ ಸಂಯೋಜನೆಗೊಂಡಿರುತ್ತದೆ.

. . . . . . .

ಬಹಳ ಸಂಖ್ಯೆಯಲ್ಲಿ ಕಾರುಗಳು, ಟೆಂಪೋಗಳು ಓಡಾಡುತ್ತಿದ್ದಾಗ ಪರಸ್ಪರ ಪೈಪೋಟಿ ಉಂಟಾಗಿ ಆ ಮೂಲಕ ಗೊಂದಲ ವೈಷಮ್ಯಗಳುಂಟಾಗಿ ಆಗಾಗ ಗಲಭೆಗಳುಂಟಾಗುತ್ತಿತ್ತು. ಅದನ್ನು ಹೋಗಲಾಡಿಸಲು ಶಿಸ್ತುಬದ್ಧವಾಗಿ ಒಬ್ಬಗೊಬ್ಬರು ಸಹಕರಿಸಿ ಪ್ರಯಾಣಿಕರಿಗೆ ಸೇವೆ ಸಲ್ಲಿಸಲು ಕ್ಯೂ ಪದ್ಧತಿಯನ್ನು ಆಳವಡಿಸಲಾಯಿತು. ಇದರಿಂದಾಗಿ ಸುಳ್ಯದಲ್ಲಿ ಕಾನೂನು ಸುವ್ಯವಸ್ಥೆ ಸುಲಲಿತಾಗಿ ಮೂರು ದಶಕಗಳಿಂದ ಯಾವುದೇ ಗಲಭೆ ಪೈಪೋಟಿಗಳಲ್ಲದೆ ಎಲ್ಲರೂ ದುಡಿಯಲು ಸಾಧ್ಯವಾಗಿದೆ. ಆದರೆ ವ್ಯಕ್ತಿಯೊಬ್ಬರು ಸಂಘದ ಯಾವುದೇ ರೀತಿನಿಯಮವನ್ನು ಪಾಲಿಸದೇ ಕಾನೂನುಬಾಹಿರವಾಗಿ ಸಂಘದ ವಿರುದ್ಧವಾಗಿ ವರ್ತಿಸುತ್ತಿದ್ದು, ಇದರಿಂದ ಸಂಘದ ಮುಜುಗರ ಅದೇ ರೀತಿ ಸಂಘದ ಇತರ ಸದಸ್ಯರಿಗೆ ತೊಂದರೆಯುಂಟಾಗಿರುತ್ತದೆ. ಆದುರಿಂದ ತಾವುಗಳು ಆ ವ್ಯಕ್ತಿಯನ್ನು ಠಾಣೆಗೆ ಕರೆಸಿ ಸಂಘದ ನೀತಿನಿಯಮಗಳಿಗೆ ಅನುಸರವಾಗಿ ಅನುಸರಿಸಿಕೊಂಡು ಇತರ ಸಂಘದ ಸದಸ್ಯರೊಂದಿಗೆ ಸಹಕರಿಯುತ್ತವಾಗಿ ಜೀವನ ಸಾಗಿಸಿ ಎಲ್ಲರೊಂದಿಗೆ ಸೌಹಾರ್ದತೆಯೊಂದಿಗೆ ಬೆರೆಯತ್ತಕ್ಕದ್ದು, ಒಬ್ಬ ವ್ಯಕ್ತಿಯಿಂದ ಸಂಘದ ಇತರ ಸದಸ್ಯರಿಗೆ ತೊಂದರೆಯುಂಟಾಗುವ ರೀತಿಯಲ್ಲಿ ವರ್ತಿಸಬಾರದು ಎಂದು ಅವರಿಗೆ ತಿಳಿ ಹೇಳಬೇಕಾಗಿ ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುತ್ತಿವೆ ಎಂಬ ಮನವಿಯನ್ನು ಸಂಘದ ಎಲ್ಲ ಅಧ್ಯಕ್ಷ ಪದಾಧಿಕಾರಿಗಳು ಕಾನೂನು ಸಲಹೆಗಾರರೊಂದಿಗೆ ಈ ಮನವಿ ಸಲ್ಲಿಸಲಾಯಿತು. ವೃತ್ತ ನಿರೀಕ್ಷಕರು ಆತನನ್ನು ಠಾಣೆಗೆ ಕರೆಸಿ ಸಂಘದ ಎಲ್ಲಾ ರೀತಿ ನಿಯಮಗಳಿಗೆ ಅನುಸಾರವಾಗಿ ಪರಸ್ಪರ ಹೊಂದಾಣಿಕೆಯೊಂದಿಗೆ ತಮ್ಮ ವಾಹನವನ್ನು ಚಲಿಸುವಂತೆ ತಿಳಿ ಹೇಳಿ ಕಳುಹಿಸಿಕೊಡಲಾಗಿದೆ. ಈ ಸಂದರ್ಭದಲ್ಲಿ ಕಾನೂನು ಸಲಹೆಗಾರರಾದ ಎಂ. ವೆಂಕಪ್ಪ, ಗೌರವಾಧ್ಯಕ್ಷ ಎಂ.ಬಿ ಸದಾಶಿವ, ಧರ್ಮಪಾಲ ಕೊಯಿಂಗಾಜೆ, ಹಾಗೂ ಸಂಘದ ೩೦ಕ್ಕೂ ಹೆಚ್ಚು ಸದಸ್ಯರುಗಳು ಭಾಗವಹಿಸಿದ್ದರು.  

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!