
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಬೆಳ್ಳಾರೆ ವಲಯದ ಚೊಕ್ಕಾಡಿ ಒಕ್ಕೂಟದ ಪಾಡಾಜೆ ಎಂಬಲ್ಲಿ ನೂತನವಾಗಿ ಶ್ರೀ ಮಹಾಮಾಯಿ ಪ್ರಗತಿ ಬಂದು ಸಂಘ ರಚನೆಯಾಯಿತು. ಸಂಘದ ಉದ್ಘಾಟನೆಯನ್ನು ಚೊಕ್ಕಾಡಿ ಒಕ್ಕೂಟದ ಅಧ್ಯಕ್ಷ ಪ್ರಸಾದ್ ಕೋಟೆಬನ ನೆರವೇರಿಸಿದರು. ವಲಯ ಮೇಲ್ವಿಚಾರಕ ಮುರಳೀಧರ ದಾಖಲಾತಿ ಹಸ್ತಾಂತರಿಸಿ, ಸಂಘದ ನಿಯಮಾವಳಿಗಳನ್ನು ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾಮದ ಸೇವಾ ಪ್ರತಿನಿಧಿ ಶ್ರೀಮತಿ ಹರ್ಷಿತಾ, ವೆಂಕಟ್ರಮಣ ಪಾಡಾಜೆ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.