- Saturday
- April 5th, 2025

ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ (ರಿ) ಎಸ್ಸೆಸ್ಸೆಫ್ ಬೆಳ್ಳಾರೆ ಇದರ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ
ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ (ರಿ) ಎಸ್ಸೆಸ್ಸೆಫ್ ಬೆಳ್ಳಾರೆ ಶಾಖೆಯ ವತಿಯಿಂದ ದೇಶದ 74ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ದಾರುಲ್ ಹಿಕ್ಮ ವಠಾರದಲ್ಲಿ ಆಚರಿಸಲಾಯಿತು.ದಾರುಲ್ ಹಿಕ್ಮ ಅಧ್ಯಕ್ಷರಾದ ಹಸನ್ ಸಖಾಫಿ ಬೆಳ್ಳಾರೆ ಧ್ವಜಾರೋಹಣಗೈದು ದುಆ ನೆರೆವೇರಿಸಿದರು. ಮುಹಮ್ಮದ್ ಶಮೀರ್ ನಈಮಿ ಪೆರುವಾಜೆ ಈ ಮಣ್ಣು ನಮ್ಮದು ಪ್ರಮೇಯ ಭಾಷಣಗೈದರು. ಯೂಸುಫ್ ಮುಸ್ಲಿಯಾರ್ ಬೆಳ್ಳಾರೆ ಆಶಂಸಗೈದರು, ಇರ್ಷಾದ್...

ಬೆಳ್ಳಾರೆ ಝಖರಿಯ್ಯಾ ಜುಮಾ ಮಸ್ಜಿದ್ ಹಿದಾಯತುಲ್ ಇಸ್ಲಾಂ ಮದರಸದ ವತಿಯಿಂದ 74 ನೇ ಸ್ವಾತಂತ್ರೋತ್ಸವ ದ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ಉಪಾಧ್ಯಕ್ಷ ಯು.ಎಚ್.ಅಬೂಬಕ್ಕರ್ ಧ್ವಜಾರೋಹಣ ನೆರವೇರಿಸಿದರು , ಖತೀಬರಾದ ಯೂನುಸ್ ಸಖಾಫಿ ವಯನಾಡ್ ಸ್ವಾತಂತ್ರೋತ್ಸವ ದ ಸಂದೇಶ ನೀಡಿದರು. ಕಾರ್ಯಕ್ರಮದಲ್ಲಿ ಜಮಾಅತರು ಉಪಸ್ಥಿತರಿದ್ದರು. ಸಭೆಗೆ ಸದರ್ ಮುಹಮ್ಮದ್ ಮುಸ್ಲಿಯಾರ್ ಸ್ವಾಗತಿಸಿ ಬಶೀರ್ ಕೆ.ಎ ವಂದಿಸಿದರು.

ಸುಳ್ಯದ ಪ್ರತಿಷ್ಠಿತ ಶಾರದ ಸಮೂಹ ವಿದ್ಯಾ ಸಂಸ್ಥೆ ಯಿಂದ 74 ನೇ ಸ್ವಾತಂತ್ರೋತ್ಸವ ಆಚರಣೆ ಇಂದು ನಡೆಯಿತು. ಸಮೂಹ ವಿದ್ಯಾ ಸಂಸ್ಥೆ ಯ ಅಧ್ಯಕ್ಷ ರಾದ ಶ್ರೀ ಧನಂಜಯ ಅಡ್ಪಂಗಾಯ ಧ್ವಜಾರೋಹಣ ನೆರವೇರಿಸಿದರು. ಕೊರೋನ ಕಾರಣದಿಂದಾಗಿ ಸರಳವಾಗಿ ಕಾರ್ಯಕ್ರಮ ನಡೆಯಿತು.

ಗುತ್ತಿಗಾರು ಪದವಿ- ಪೂರ್ವ ಕಾಲೇಜಿನಲ್ಲಿ 74 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಕಾಲೇಜು ಸಿಬಿಸಿ ಕಾರ್ಯದ್ಯಕ್ಷರಾದ ಶ್ರೀ ಮಂಜುನಾಥ ಯು ಧ್ವಜಾರೋಹಣ ನೆರವೇರಿಸಿದರು. ಎಸ್ ಡಿ ಎಂ ಸಿ ಕಾರ್ಯಧ್ಯಕ್ಷರಾದ ಶ್ರೀ ಲೋಕೇಶ್ವರ ಡಿ ಆರ್, ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ನೆಲ್ಸನ್ ಕ್ಯಾಸ್ಟಲಿನೊ ಸ್ವಾತಂತ್ರ್ಯ ದಿನಾಚರಣೆಯ ಕುರಿತು ಮಾತನಾಡಿದರು. ಪ್ರಾಂಶುಪಾಲರಾದ ಚೆನ್ನಮ್ಮ ಪಿ, ಎಸ್...

ಮಾನ್ಯ ಉಪ ತಹಶೀಲ್ದಾರರವರ ಅಧ್ಯಕ್ಷತೆಯಲ್ಲಿ ಪಂಜ ನಾಡಕಚೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು . ಸ್ಥಳದಲ್ಲಿ ಪಂಜ ಹೋಬಳಿ ಕಂದಾಯ ನಿರೀಕ್ಷಕರು ಮತ್ತು ಐವತ್ತೊಕ್ಲು ಗ್ರಾಮದ ಗ್ರಾಮ ಲೆಕ್ಕಾಧಿಕಾರಿ ಹಾಗೂ ಪಂಜ ನಾಡ ಕಛೇರಿ ಯ ಗ್ರಾಮ ಸಹಾಯಕರು ಮತ್ತು ಐವತ್ತೊಕ್ಲು ಗ್ರಾಮ ಸಹಾಯಕರು ಮತ್ತು ದೇವಚಳ್ಳ ಗ್ರಾಮ ಸಹಾಯಕರು ಮತ್ತು ಪಂಜ ನಾಡಕಛೇರಿಯ ಡಾಟಾ ಎಂಟ್ರಿ...

ಗುತ್ತಿಗಾರು ಪ್ರಾ.ಕೃ.ಪ.ಸ.ಸಂಘದಲ್ಲಿ ಇಂದು 74 ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ನಡೆಯಿತು. ಧ್ವಜಾರೋಹಣ ಕಾರ್ಯಕ್ರಮವನ್ನು ಸಂಘದ ಅಧ್ಯಕ್ಷ ವೆಂಕಟ್ ದಂಬೆಕೋಡಿ ನೆರವೇರಿಸಿದರು. ನೂತನವಾಗಿ ನಿರ್ಮಾಣಗೊಂಡ ಧ್ವಜಸ್ತಂಭ ವನ್ನು ಮೊಗ್ರದ ಹಿರಿಯ ಭೂತರಾಧಕ ದುಗ್ಗಣ್ಣ ಅಜಿಲ ಉದ್ಘಾಟಿಸಿದರು. ಎಸ್ ಎಸ್ ಎಲ್ ಸಿ ಯಲ್ಲಿ 615 ಅಂಕ ಪಡೆದಿರುವ ಸಾಗರಿಕ ಪೂಜಾರಿಕೋಡಿಗೆ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸಂಘದ...

ಎಸ್ ಕೆ ಎಸ್ ಎಸ್ ಎಫ್ ಸುಳ್ಯ ಟೌನ್ ಶಾಖೆ ವತಿಯಿಂದ 74 ನೇ ಸ್ವತಂತ್ರೊತ್ಸವದ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮವು ನಡೆಯಿತು. ರೋಟರಿ ಮಾಜಿ ಅಧ್ಯಕ್ಷರಾದ ಬಾಪು ಸಾಹಿಬ್ ಧ್ವಜಾರೋಹಣ ನೆರವೇರಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಕೆ ಎಸ್ ಎಸ್ ಎಫ್ ಸುಳ್ಯ ಕ್ಲಸ್ಟರ್ ಅಧ್ಯಕ್ಷ ಅಬ್ದುಲ್ ರಜಾಕ್ ಕರಾವಳಿ ವಹಿಸಿದರು. ಉನೈಸ್ ಮುಸ್ಲಿಯಾರ್ ದುವಾದೊಂದಿಗೆ ಧನ್ಯಗೊಳಿಸಿದರು.ಮುಖ್ಯ...

ಗಾಂಧಿನಗರ ಅಂಗನವಾಡಿ ಕೇಂದ್ರದಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.ದ್ವಾಜಾರೋಹಣವನ್ನು ಅಬ್ದುಲ್ ಮಜೀದ್ ಕೆಬಿ ಮತ್ತು ನಿವೃತ್ತ ಫಾರೆಸ್ಟರ್ ಕುಶಾಲಪ್ಪ ಗೌಡರವರು ನೆರವೇರಿಸಿ ಮಾತನಾಡಿದರು. ಅಂಗನವಾಡಿ ಶಿಕ್ಷಕಿ ಶೋಭಾರವರು ಎಲ್ಲರನ್ನು ಸ್ವಾಗತಿಸಿದರು .ಗಾಂಧಿನಗರ ಶಾಲಾ ವಿದ್ಯಾರ್ಥಿನಿಗಳು ರಾಷ್ಟ್ರಗೀತೆ ಹಾಡಿದರು.

ಬೆಳ್ಳಾರೆ : ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬೆಳ್ಳಾರೆ ವಿಭಾಗ ಸಮಿತಿ ವತಿಯಿಂದ ಸ್ವಾತಂತ್ರ್ಯೋತ್ಸವ ದಿನಾಚರಣೆ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು ಬೆಳ್ಳಾರೆ ವಿಭಾಗ ಅಧ್ಯಕ್ಷ ಶಹೀದ್ ಎಂ ಧ್ವಜಾರೋಹಣ ನೆರವೇರಿಸಿದರು. ಪಾಪ್ಯುಲರ್ ಫ್ರಂಟ್ ರಾಜ್ಯ ನಾಯಕರಾದ ಶಾಫಿ ಬೆಳ್ಳಾರೆ ಸಂದೇಶ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಎಸ್.ಡಿ.ಪಿ.ಐ ಬೆಳ್ಳಾರೆ ವಲಯ ಅಧ್ಯಕ್ಷ ಸಿದ್ದೀಖ್ , ಉಪಾಧ್ಯಕ್ಷ...

All posts loaded
No more posts