
ಕಳಂಜದ ಬುಖಾರಿಯಾ ಜುಮಾ ಮಸ್ಜಿದ್ ನಲ್ಲಿ 74ನೇ ಸ್ವಾತಂತ್ರ್ಯೋತ್ಸವವನ್ನು ಖತೀಬ್ ಉಸ್ತಾದರ ನೇತೃತ್ವದಲ್ಲಿ ಆಚರಿಸಲಾಯಿತು. ಮಸ್ಜಿದ್ ನ ಅಧ್ಯಕ್ಷ ಲತೀಫ್ ಕಳಂಜ ಧ್ವಜಾರೋಹಣಗೈದರು. ಈ ಸಂದರ್ಭದಲ್ಲಿ ಮಸ್ಜಿದ್ ಮುಖ್ಯಸ್ಥರಾದ ಖತೀಬ್ ಸಂಶುದ್ದೀನ್ ಪೈಝಿ, ಇಬ್ರಾಹಿಂ ಕೆ, ಮಹಮ್ಮದ್, ಇಸ್ಮಾಯಿಲ್ ಎನ್, ಮಹಮ್ಮದ್ ಎನ್, ಸಿದ್ದೀಕ್ ಕೆ, ನಾಸಿರ್ ಕೆ, ಇಶ್ಫಾಕ್ ಕೆ, ಜುನೈದ್ ಕೆ, ಸಮದ್ ಪಿ ಎಸ್, ಸಫ್ವಾನ್ ಕೆ ಮೊದಲಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಅಲ್ ಫಲಾಹ್ ಯೂತ್ ಕ್ಲಬ್ ವತಿಯಿಂದ ಸಿಹಿತಿಂಡಿ ವಿತರಿಸಲಾಯಿತು.