Ad Widget

ಅಸ್ತ್ರ ಸ್ಪೋರ್ಟ್ಸ್ ಕ್ಲಬ್ ಪೈಚಾರ್ ಇದರ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

ಅಸ್ತ್ರ ಸ್ಪೋರ್ಟ್ಸ್ ಕ್ಲಬ್ ರಿ ಪೈಚಾರ್ ಇದರ ವತಿಯಿಂದ 74 ನೇ ಸ್ವಾತಂತ್ರ್ಯ ದಿನಾಚರಣೆ ಹಾಗೂ ಸ್ವಚ್ಚತಾ ಕಾರ್ಯಕ್ರಮವು ಪಿಎಮ್ ಕಾಂಪ್ಲೆಕ್ಸ್ ಮುಂಭಾಗದಲ್ಲಿ ನಡೆಯಿತು. ಧ್ವಜಾರೋಹಣವನ್ನು ಅಸ್ತ್ರ ಸ್ಪೋರ್ಟ್ಸ್ ಕ್ಲಬ್ ಇದರ ಗೌರವಧ್ಯಕ್ಷ ಶಾಫೀ ಪ್ರಗತಿಯವರು ನೇರವೆರಿಸಿ ಶುಭ ಸಂದೇಶ ವನ್ನು ನೀಡಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಅಸ್ತ್ರ ಸ್ಪೋರ್ಟ್ಸ್ ಕಾರ್ಯದರ್ಶಿ ಮುಜೀಬ್ ಪೈಚಾರ್ ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಲಬ್ ಅಧ್ಯಕ್ಷ ರಿಫಾಯಿ ಎಸ್ ಎ.ರವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಅಮೆಚೂರ್ ಕಬಡ್ಡಿ ಜಿಲ್ಲಾ ಉಪಾಧ್ಯಕ್ಷ ಶರತ್ ಅಡ್ಕಾರ್ ಮಾತನಾಡಿ  ಹುತಾತ್ಮರಿಗೆ ಒಂದು ನಿಮಿಷದ ಮೌನ ಪ್ರಾರ್ಥನೆಯನ್ನು ಸಲ್ಲಿಸಲಾಯಿತು ಹಾಗೂ ಪಿಎಮ್ ಕಾಂಪ್ಲೆಕ್ಸ್ ಮಾಲಕರಾದ ಮಧುಸೂದನ್ ಪೈಚಾರ್ ಬಿಜೆಎಮ್ ಅಧ್ಯಕ್ಷ ಇಬ್ರಾಹಿಂ ಪಿ.ಕೆ, ಎವೈಸಿ ಅಧ್ಯಕ್ಷ ಕರೀಮ್ ಕೆಎಮ್. ಹಾಗೂ ಅಸ್ತ್ರ ಸ್ಪೋರ್ಟ್ಸ್ ಕ್ಲಬ್ ಎಲ್ಲಾ ಸದಸ್ಯರುಗಳು ಹಾಗೂ ಸ್ಥಳೀಯರು ಭಾಗವಹಿಸಿದ್ದರು. ಕಾರಣ್ಯ ಚಾರಿಟೇಬಲ್ ಅದ್ಯಕ್ಷ ಬಶೀರ್ ಆರ್ ಬಿ.ಸ್ವಾಗತಿ., ಪ್ರಧಾನ.ಕಾರ್ಯದರ್ಶಿ ಅಬೂಸಾಲಿ ಕೆಪಿ ವಂದಿಸಿದರು. ಸ್ವಾತಂತ್ರ್ಯದ ಒಂದು  ಭಾಗವಾಗಿ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ಪೈಚಾರ್ ಸೇತುವೆಗೆ ಬಣ್ಣ ಹಾಗೂ ಪೈಚಾರ್ ಪರಿಸರದಲ್ಲಿ ಸ್ವಚ್ಚತೆಯನ್ನು ಮಾಡಲಾಯಿತು. 

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading