- Tuesday
- December 3rd, 2024
ಮಂಗಳೂರು ಮೆಸ್ಕಾಂ ಕಛೇರಿಯಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625 ಅಂಕಗಳಿಸಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿದ ಗುತ್ತಿಗಾರು ಮೆಸ್ಕಾಂ ಶಾಖಾ ಪ್ರಭಾರ ಜೆಇ ಲೋಕೇಶ್ ಎಣ್ಣೆಮಜಲು ರವರ ಪುತ್ರ ಅನುಷ್ ಗೆ ಸನ್ಮಾನ ಕಾರ್ಯಕ್ರಮ ಇಂದು ಮಂಗಳೂರಿನ ಮೆಸ್ಕಾಂ ಕಛೇರಿಯಲ್ಲಿ ನಡೆಯಿತು.
ಶ್ರೀ ಕ್ಷೇ.ಧ.ಗ್ರಾ.ಯೋಜನೆ, ಬಿ.ಸಿ.ಟ್ರಸ್ಟ್ ನಾಲ್ಕೂರು ಇದರ ಆಶ್ರಯದಲ್ಲಿ ಚಾರ್ಮಾತ ನೆಲ್ಲಿಪುಣಿಯಲ್ಲಿ ಶ್ರೀ ಚಾಮುಂಡಿ ಪ್ರಗತಿಬಂಧು ಸಂಘ ರಚಿಸಲಾಯಿತು. ನಾಲ್ಕೂರು ಒಕ್ಕೂಟದ ನಿಕಟಪೂರ್ವ ಅಧ್ಯಕ್ಷೆ ಶ್ರೀಮತಿ ರಾಜೀವಿ ಕುಚ್ಚಾಲ ದೀಪ ಬೆಳಗಿಸಿ ಉದ್ಘಾಟಿಸಿದರು. ವಲಯ ಮೇಲ್ವಿಚಾರಕ ಸುಧೀರ್ ಯೋಜನೆಯ ಕಾರ್ಯಕ್ರಮಗಳ ಮಾಹಿತಿ ನೀಡಿ ದಾಖಲಾತಿ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷ ಶಾಂತಪ್ಪ ಉತ್ರಂಬೆ, ಪದಾಧಿಕಾರಿಗಳಾದ ಕರುಣಾಕರ...
ಶ್ರೀ ಕ್ಷೇ.ಧ.ಗ್ರಾ.ಯೋಜನೆ,ಬಿ.ಸಿ. ಟ್ರಸ್ಟ್ ನಾಲ್ಕೂರು ಇದರ ಆಶ್ರಯದಲ್ಲಿ ಹಾಲೆಮಜಲು ಶ್ರೀ ವೆಂಕಟೇಶ್ವರ ಸಭಾಭವನದಲ್ಲಿ ಶ್ರೀ ಮುತ್ತಪ್ಪನ್ ಪ್ರಗತಿ ಬಂಧು ಸಂಘ ರಚಿಸಲಾಯಿತು. ನಾಲ್ಕೂರು ಒಕ್ಕೂಟದ ನಿಕಟಪೂರ್ವ ಅಧ್ಯಕ್ಷರಾದ ಮೋಹನ್ ಎರ್ದಡ್ಕ ದೀಪ ಬೆಳಗಿಸಿ ಉದ್ಘಾಟಿಸಿದರು. ಗುತ್ತಿಗಾರು ವಲಯ ಮೇಲ್ವಿಚಾರಕ ಸುಧೀರ್ ಯೋಜನೆಯ ಕಾರ್ಯಕ್ರಮ ಗಳ ಮಾಹಿತಿ ನೀಡಿ ದಾಖಲಾತಿ ಹಸ್ತಾಂತರಿಸಿದರು. ಒಕ್ಕೂಟದ ಉಪಾಧ್ಯಕ್ಷ ವಿಶ್ವನಾಥ್ ಛತ್ರಪ್ಪಾಡಿ...
ಆ. 8 ರಂದು ಪಾಸಿಟಿವ್ ಬಂದ ಮೂವರು ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಪ್ರಾಥಮಿಕ ಸಂಪರ್ಕಿತರನ್ನು ಕಾರಂಟೈನ್ ಗೊಳಪಡಿಸಲಾಗಿತ್ತು. ಈ ಪೈಕಿ ಇಬ್ಬರಿಗೆ ನಿನ್ನೆ ದೇವಚಳ್ಳ ಗ್ರಾಮ ಪಂಚಾಯತ್ ವತಿಯಿಂದ ನಡೆದ ರಾಂಡಮ್ ಟೆಸ್ಟ್ ನಲ್ಲಿ ಪಾಸಿಟಿವ್ ಬಂದಿದ್ದು ತಳೂರಿನ ಮನೆಯಲ್ಲೇ ಕಾರಂಟೈನ್ ಮಾಡಲಾಗಿದೆ.ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಇಂದು ಕಾಣಿಯೂರಿನ ವ್ಯಕ್ತಿಯೊಬ್ಬರಿಗೆ ಪಾಸಿಟಿವ್...
ಸುಳ್ಯ ಹಳೆಗೇಟು ಬೆಟ್ಟಂಪಾಡಿ ನಿವಾಸಿ ಬಶೀರ್ ಕುತ್ತಮೊಟ್ಟೆ ಹಾಗೂ ನಿಶಾಬಿ ದಂಪತಿಗಳ ಪುತ್ರಿ ಫಾತಿಮತ್ ಬಶಾಹಿರ ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 577 ಅಂಕವನ್ನು ಪಡೆದು ತೇರ್ಗಡೆ ಹೊಂದಿದ್ದಾರೆ. ಇವರು ಸುಳ್ಯ ಸೈಂಟ್ ಜೋಸೆಫ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿಯಾಗಿದ್ದಾರೆ.
ಬುಧವಾರ ಆಸ್ಪತ್ರೆಯ ವೈದ್ಯಾಧಿಕಾರಿಗಳು ಪ್ರಣಬ್ ಆರೋಗ್ಯ ತುಂಬಾನೇ ಗಂಭೀರವಾಗಿದೆ ಎಂದು ಹೇಳಿದ್ದರು. ಈ ಬೆನ್ನಲ್ಲೇ ಅಭಿಜಿತ್ ತಂದೆಯ ಆರೋಗ್ಯ ಸ್ಥಿರವಾಗಿರುವ ಬಗ್ಗೆ ಮಾಹಿತಿ ಅವರ ಪುತ್ರ ಟ್ವೀಟರ್ ನಲ್ಲಿ ಸಂದೇಶ ನೀಡಿದ್ದಾರೆ.
ದೇಶದ 13 ನೇ ರಾಷ್ಟ್ರಪತಿಯಾಗಿದ್ದ ಪ್ರಣಬ್ ಮುಖರ್ಜಿ ಇಂದು ದೆಹಲಿಯ ಮಿಲಿಟರಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ ಕೋವಿಡ್ 19 ಭಾದಿಸಿದ್ದು ಚಿಕಿತ್ಸೆ ಪಡೆಯುತ್ತಿದ್ದರು.ಅವರಿಗೆ 76 ವರ್ಷ ವಯಸ್ಸಾಗಿತ್ತು. 1935 ಡಿಸೆಂಬರ್ 11 ರಂದು ಪಶ್ಚಿಮ ಬಂಗಾಳದ ಬೀರ್ ಬೂಂ ನಲ್ಲಿ ಜನಿಸಿದ್ದರು. ಇವರ ತಂದೆ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಬಾಂಗ್ಲಾ ಕಾಂಗ್ರೆಸ್ ನಿಂದ ರಾಜಕೀಯಕ್ಕೆ ಬಂದ ಇವರು...