- Thursday
- November 21st, 2024
ವಿಶ್ವ ಹಿಂದೂ ಪರಿಷತ್ ಭಜರಂಗದಳ ವಾಲ್ಮೀಕಿ ಶಾಖೆ ಬೆಳ್ಳಾರೆ ವತಿಯಿಂದ ಇಂದು ಬೆಳ್ಳಾರೆಯ ಶ್ರೀಲಕ್ಷ್ಮೀವೆಂಕಟರಮಣ ದೇವಾಲಯದ ಸಭಾಂಗಣದಲ್ಲಿ ಅಖಂಡ ಭಾರತ ಸಂಕಲ್ಪ ದಿನಾಚರಣೆ ಆಚರಿಸಲಾಯಿತು. ಕೊರೋನಾ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮದೊಂದಿಗೆ ಸಾಂಕೇತಿಕವಾಗಿ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಯಾಗಿ ದೇವಾಲಯದ ಆಡಳಿತ ಮೋಕ್ತೇಸರರಾದ ಗೋಪಾಲಕೃಷ್ಣ ಶಾನ್ ಬೋಗ್ ಮಣಿಕ್ಕಾರ ದೀಪ ಬೆಳಗಿಸಿದರು. ಕಾರ್ಯಕ್ರಮದಲ್ಲಿ ಸುಳ್ಯ ಪ್ರಖಂಡದ ಭಜರಂಗದಳ...
ಹರಿಹರ,ಕೊಲ್ಲಮೊಗ್ರ ಮತ್ತು ಕಲ್ಮಕಾರು ಊರಿನ ಮುಖಂಡರು ಮತ್ತು ರಾಜಕೀಯ ನಾಯಕರ ಸಭೆ ಆ.14 ರಂದು ಅಪರಾಹ್ನ 2 ಗಂಟೆಗೆ ಕೊಲ್ಲಮೊಗ್ರದಲ್ಲಿ ನಡೆಯಲಿದೆ ಎಂದು ಹೋರಾಟದ ಸಂಚಾಲಕ ಉದಯ ಶಿವಾಲ ತಿಳಿಸಿದ್ದಾರೆ.ಸುಬ್ರಹ್ಮಣ್ಯದಲ್ಲಿ 300 ಮೀಟರ್ ನಷ್ಟು ಕೇಬಲ್ ಅಳವಡಿಕೆ ಪ್ರಕ್ರಿಯೆ ಮಾತ್ರ ಬಾಕಿ ಇದ್ಡು ಇದಕ್ಕೆ ಒಂದು ತಿಂಗಳಿಂದ ಕೆಲವೊಂದು ತೊಡಕುಗಳು ಉಂಟಾಗಿದೆ. ನಮ್ಮ ಐದು ಗ್ರಾಮಗಳು...
ವಿಶ್ವ ಹಿಂದೂ ಪರಿಷದ್ ಭಜರಂಗದಳ ಸುಳ್ಯ ಪ್ರ ಖಂಡದ ವತಿಯಿಂದ ಬೆಂಗಳೂರಿನ ಡಿ. ಜೆ ಹಳ್ಳಿಯಲ್ಲಿ ನಡೆದ ಘಟನೆಯನ್ನು ಖಂಡಿಸಿ ಎಸ್ ಡಿ ಪಿ ಐ, ಪಿ ಎಫ್ ಐ, ಕೆ ಎಫ್ ಡಿ ಸಂಘಟನೆ ಗಳನ್ನು ನಿಷೇಧ ಮಾಡಲು ತಹಶೀಲ್ದಾರ ರ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ವಿ ಹೆಚ್...
ಐವರ್ನಾಡು ಪ್ರಾ.ಕೃ.ಪ.ಸಹಕಾರಿ ಸಂಘದ ವತಿಯಿಂದ ಅಡಿಕೆ ಮರವೇರುವ ಯಂತ್ರದ ಪ್ರಾತ್ಯಕ್ಷಿಕೆ ಇಂದು ನಡೆಯಿತು. ಪ್ರಾತ್ಯಕ್ಷಿಕೆಯ ನಿರ್ದೇಶಕರಾಗಿ ರವಿಪ್ರಸಾದ್ ಸಿ ಕೆ ಯಂತ್ರ ಬಳಸುವ ವಿಧಾನ ಹಾಗೂ ಉಪಯುಕ್ತ ಮಾಹಿತಿಗಳನ್ನು ತಿಳಿಸಿದರು. ಈ ಸಂದರ್ಭದಲ್ಲಿ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥ, ಐವರ್ನಾಡು ಗ್ರಾ. ಪಂ.ಅಭಿವೃದ್ಧಿ ಅಧಿಕಾರಿ ಯು.ಡಿ.ಶೇಖರ್, ಗ್ರಾಮಲೆಕ್ಕಾಧಿಕಾರಿ ಕಾರ್ತಿಕ್, ಐವರ್ನಾಡು ಗ್ರಾ.ಪಂ.ಉಪಾಧ್ಯಕ್ಷ ಬಾಲಕೃಷ್ಣ ಕೀಲಾಡಿ, ಸಂಘದ ಉಪಾಧ್ಯಕ್ಷ...
ಅರಂತೋಡು ವಿಶ್ವ ಹಿಂದೂ ಪರಿಷತ್, ಬಜರಂಗದಳ ಹನುಮಾನ್ ಶಾಖೆಯಲ್ಲಿ ಅಖಂಡ ಭಾರತ ಸಂಕಲ್ಪ ಕಾರ್ಯಕ್ರಮ ಇಂದು ನಡೆಯಿತುವಿಶ್ವ ಹಿಂದೂ ಪರಿಷದ್ ಭಜರಂಗದಳ ಸುಳ್ಯ ಪ್ರಖಂಡದ ಅಧ್ಯಕ್ಷರಾದ ಸೋಮಶೇಖರ ಪೈಕ, ಸುಳ್ಯ ಪ್ರ ಖಂಡ ಗೋ ರಕ್ಷಖ್ ನವೀನ ಎಲಿಮಲೆ, ಸುಳ್ಯ ನಗರ ಸುರಕ್ಷಾ ಪ್ರಮುಖ್ ಪ್ರಶಾಂತ ಆಚಾರ್ಯ, ಸುಳ್ಯ ಸುರಕ್ಷಾ ಪ್ರಮುಖ್ ಸನತ್ ಚೊಕ್ಜಾಡಿ, ಕಲ್ಲುಗುಂಡಿ...
ಈ ಸಲದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪ್ರಗತಿ ವಿದ್ಯಾಸಂಸ್ಥೆ ಕಾಣಿಯೂರು ಇಲ್ಲಿನ ವಿದ್ಯಾರ್ಥಿ ದಿವೀಶ್ ಕಜೆಮೂಲೆ 582 ಅಂಕ ಗಳಿಸಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಇವರು ಬಳ್ಪ ಗ್ರಾ. ಪಂ.ಅಭಿವೃದ್ಧಿ ಅಧಿಕಾರಿ ಶ್ರೀ ಚೆನ್ನಪ್ಪ ಗೌಡ ಕಜೆಮೂಲೆ ಹಾಗೂ ಕೋಟೆಮುಂಡುಗಾರು ಹಿ.ಪ್ರಾ. ಶಾಲೆಯ ಮುಖ್ಯಶಿಕ್ಷಕಿ ಶ್ರೀಮತಿ ಮೋಹಿನಿ ದಂಪತಿಗಳ ಪುತ್ರ.
ಕಡಬ ತಾಲೂಕು ಪಂಚಾಯತ್ ಅಧ್ಯಕ್ಷ , ಉಪಾಧ್ಯಕ್ಷ ಚುನಾವಣೆ ಆ.14 ರಂದು ದಿನ ನಿಗದಿಯಾಗಿತ್ತು . ಆದರೇ ಕಡಬ ತಾ.ಪಂ. ವ್ಯಾಪ್ತಿಗೆ ಇತ್ತೀಚಿಗೆ ಸೇರ್ಪಡೆಗೊಂಡ ಸುಬ್ರಹ್ಮಣ್ಯ ತಾ.ಪಂ.ಕ್ಷೇತ್ರದ ಸದಸ್ಯ ಅಶೋಕ್ ನೆಕ್ರಾಜೆಯವರ ಪತ್ನಿಗೆ ಕೋವಿಡ್ 19 ಪಾಸಿಟಿವ್ ಧೃಡಪಟ್ಟ ಹಿನ್ನೆಲೆಯಲ್ಲಿ ಕಾರಂಟೈನ್ ಗೊಳಗಾಗಿದ್ದರು. ಅದ್ದರಿಂದ ತನಗೆ ಚುನಾವಣೆ ಯಲ್ಲಿ ಭಾಗವಹಿಸಲು ಅನಾನುಕೂಲವಾಗಿರುವುದರಿಂದ ಚುನಾವಣೆ ಮುಂದೂಡುವಂತೆ ಸಹಾಯಕ...
ಬೆಳ್ಳಾರೆಯಲ್ಲಿ ಇಂದು ನಡೆದ ರಾಂಡಮ್ ಟೆಸ್ಟ್ ವೇಳೆ ಬೆಳ್ಳಾರೆ ಪಿಡಿಓ ಗೆ ಪಾಸಿಟಿವ್ ಧೃಡಪಟ್ಟಿದೆ. ಸ್ಯಾನಿಟೈಸ್ ಮಾಡಲಿರುವ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ ದಿಂದ ಪಂಚಾಯತ್ ಸೀಲ್ ಮಾಡಲಾಗಿದೆ ಎಂದು ನೋಡೆಲ್ ಅಧಿಕಾರಿಗಳು ಪತ್ರಿಕೆ ಸ್ಪಷ್ಟಪಡಿಸಿದ್ದಾರೆ.
ಮಂಗಳೂರು ಒಕ್ಕಲಿಗರ ಯಾನೆ ಗೌಡರ ಸಂಘದ ಕಛೇರಿ ಯಲ್ಲಿ ಆ.13ರಂದು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ದೊಂದಿಗೆ 625/625 ಅಂಕ ಗಳಿಸಿದ ಅನುಷ್ ಎ ಯಲ್ ರವರಿಗೆ ಅಭಿನಂದನಾ ಕಾರ್ಯಕ್ರಮ ಸಂಘದ ಅಧ್ಯಕ್ಷ ರಾದ ಡಾ. ದಾಮೋದರ ನಾರಾಲ್ ರವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಸಂಘದ ಕಾರ್ಯದರ್ಶಿ ಕೆ ರಾಮಣ್ಣ ಗೌಡ...
ಗುತ್ತಿಗಾರು ಪ್ರಾ.ಕೃ.ಪ.ಸ.ಸಂಘದಲ್ಲಿ ನಡೆಯಲಿರುವ ಸ್ವಾತಂತ್ರ್ಯ ದಿನಾಚರಣೆಗೆ ಪೂರ್ವಭಾವಿ ಸಿದ್ಧತೆ ನಡೆಯುತ್ತಿದ್ದು , ಧ್ವಜಸ್ತಂಭ ಹಾಗೂ ಸುತ್ತಲಿನ ಆವರಣ ಸ್ವಚ್ಛತಾ ಕಾರ್ಯ ಇಂದು ನಡೆಯಿತು. ಈ ವೇಳೆ ಸಂಘದ ಅಧ್ಯಕ್ಷರಾದ ವೆಂಕಟ್ ದಂಬೆಕೋಡಿ ಯವರು ಮುಖ್ಯಕಾರ್ಯನಿರ್ವಹಣಾಧಿಕಾರಿ ಹಾಗೂ ಸಿಬ್ಬಂದಿಗಳ ಜೊತೆ ಸೇರಿ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾಗಿ ಮೆಚ್ಚುಗೆಗೆ ಪಾತ್ರರಾದರು. ಮಾಜಿ ಅಧ್ಯಕ್ಷರು, ನಿರ್ದೇಶಕರು ಉಪಸ್ಥಿತರಿದ್ದರು.
Loading posts...
All posts loaded
No more posts