- Thursday
- November 21st, 2024
ಸುಳ್ಯ ಗಾಂಧಿನಗರದ ಅಂಗನವಾಡಿ ಕೇಂದ್ರದ ಸುತ್ತ ಮುತ್ತಲಿನ ಪರಿಸರವನ್ನು ಮಹಾಮಾಯಿ ದೇವಸ್ಥಾನ ಸಮಿತಿ ಹಾಗು ಕೃಷ್ಣ ಜನ್ಮಾಷ್ಟಮಿ ಸಮಿತಿಯ ತಂಡದವರಿಂದ ಶ್ರಮದಾನ ಮೂಲಕ ಸ್ವಚ್ಛಗೊಳಿಸಲಾಯಿತು.ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ ಶ್ರಮದಾನ ಮಾಡುತ್ತಿರುವ ಸ್ಥಳಕ್ಕೆ ಆಗಮಿಸಿ ಸ್ಥಳೀಯರ ಸೇವೆಯನ್ನು ಅಭಿನಂದಿಸಿದರು . ಈ ಸಂದರ್ಭದಲ್ಲಿ ಎಂ ಬಿ ಚೋಮ, ನಾರಾಯಣ, ರವಿ ನಾವೂರು, ಐತಪ್ಪ, ಗುರು,...
ಕೊಡಗು ಸಂಪಾಜೆ ಗ್ರಾಮದ ಕೊಯನಾಡು ಸರಕಾರಿ ಶಾಲೆಯ ಹಿಂಭಾಗದ ಬರೆ ಕುಸಿತ ಗೊಂಡಿದ್ದು ಹೊಸದಾಗಿ ನಿರ್ಮಾಣವಾದ ಕಟ್ಟಡಕ್ಕೆ ಹಾನಿಗೊಂಡಿದ್ದು ಪಂಚಾಯತ್ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು, ಶಾಲಾ ಅಭಿವೃದ್ದಿ ಸಮಿತಿ ಸದಸ್ಯರು ಪರಿಶೀಲನೆ ನಡೆಸಿದರು.
ಮಳೆಗಾಲದ ಅದ್ಭುತ ಸವಿಯೇ ಹಾಗೆ, ಮನಕೆ ಮುದ ನೀಡುವ ಚೆಲುವಿಕೆ. ವರ್ಷದಾರೆ ಭುವಿಗೆ ತಂಪನ್ನು ನೀಡುವ ಜೊತೆಗೆ ಕಂಗಳಿಗೂ ನಯನಮನೋಹರ ದೃಶ್ಯಾವಳಿ ನೀಡುವುದು. ಭೋರ್ಗರೆದು ಧುಮ್ಮುಕ್ಕುವ ಸ್ಥಳೀಯ ಜಲಪಾತವಾಗಿ ಪ್ರಕೃತಿಯ ಚೆಲುವನ್ನು ಇಮ್ಮಡಿಗೊಳಿಸುವುದು.ಇಂತಹ ನಯನಮನೋಹರ ಜಲಪಾತ ಸುಳ್ಯ ತಾಲೂಕಿನ ಸೋಣಂಗೇರಿಯಲ್ಲಿದೆ. ಸದ್ಯ ಮಳೆಯ ಪ್ರಮಾಣ ಅಧಿಕವಾಗಿದ್ದು ಜಲಪಾತದ ಅಂದ ಹೆಚ್ಚಾಗಿದೆ.ಬೆಳ್ಳಾರೆ - ಸುಳ್ಯ ಹೆದ್ದಾರಿ ಬದಿಯಲ್ಲಿ...
ವಿಶ್ವಹಿಂದೂ ಪರಿಷತ್ ಬಜರಂಗದಳ ವಾಲ್ಮೀಕಿ ಶಾಖೆ ಬೆಳ್ಳಾರೆ ಇದರ ಉಪಾಧ್ಯಕ್ಷರಾಗಿ ರೋಹಿತ್ ಕೊಳಂಬಳ, ಜೊತೆ ಕಾರ್ಯದರ್ಶಿಯಾಗಿ ಚೇತನ್ ದೇವರಕಾನ, ಗೋರಕ್ಷಾ ಪ್ರಮುಖ್ ಆಗಿ ರಂಜಿತ್ ಬಾಳಿಲ ಸುಳ್ಯ ಪ್ರಖಂಡ ವತಿಯಿಂದ ಸುಳ್ಯ ಕೇರ್ಪಳ ದೇವಸ್ಥಾನ ದಲ್ಲಿ ಆಯ್ಕೆ ಮಾಡಲಾಯಿತು. ರೋಹಿತ್ ಕೊಳಂಬಳ ಚೇತನ್ ದೇವರಕಾನ ರಂಜಿತ್ ಬಾಳಿಲ
ಸುಳ್ಯದಲ್ಲಿ ಎರಡನೇ ಹಂತದ ಆತ್ಮ ನಿರ್ಭರ ಭಾರತಕ್ಕಾಗಿ ಉದ್ಯೋಗ ನೈಪುಣ್ಯ ತರಬೇತಿಯ ಸಮಾರೋಪ ಸಮಾರಂಭ ಕೇರ್ಪಳದ ದುರ್ಗಾಪರಮೇಶ್ವರಿ ಕಲಾಮಂದಿರದಲ್ಲಿ ಆ 8ರಂದು ನಡೆಯಿತು. ಸಮಾರೋಪ ಸಮಾರಂಭದ ಉದ್ಘಾಟನೆಯನ್ನು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಗಿರೀಶ್ ಭಾರಧ್ವಾಜ್ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಪ್ರಾಂತ ಸಹಾ ಕಾರ್ಯವಾಹಕು ಹಾಗೂ ಹೊಸದಿಗಂತ ಪತ್ರಿಕೆಯ ಸಿ.ಓ....
ಸುರಿಯುತ್ತಿರುವ ಭಾರಿ ಮಳೆಗೆ ಅಡ್ಡಬೈಲು- ಬಸ್ತಿಕಾಡು ಹೊಳೆಯಲ್ಲಿ ಪ್ರವಾಹದ ಜತೆಗೆ ಬಂದು ಕಿರುಸೇತುವೆಯಲ್ಲಿ ಸಿಲುಕಿಕೊಂಡಿದ್ದ ಬೃಹತ್ ಮರದ ತುಂಡುಗಳು, ಕಸಕಡ್ಡಿ ತೆರವುಗೊಳಿಸುವ ಕಾರ್ಯ ಇಂದು ನಡೆಯಿತು. ಪಂಜ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಡ್ಡಬೈಲ್ ಸಮೀಪದ ಬೊಳ್ಮಲೆಯಿಂದ ಕೂತ್ಕುಂಜ ಗ್ರಾಮದ ಬಸ್ತಿಕಾಡುವಿಗೆ ಹೋಗುವ ಕಿರುಸೇತುವೆಯಲ್ಲಿ ಕಸಕಡ್ಡಿಗಳು, ಮರದ ದಿಮ್ಮಿಗಳು ನಿಂತು, ನೀರು ಸೇತುವೆ ಮೇಲೆ ಹರಿದು ಸಂಚಾರಕ್ಕೆ...
ತೆಂಗಿನಮರ, ಅಡಿಕೆಮರ ಸಹಿತ ವಿದ್ಯುತ್ ಕಂಬಗಳನ್ನು ಏರಲು ಸಹಕಾರಿಯಾಗುವ ಫೈಬರ್ ಏಣಿಯನ್ನು ಕಡಬ ತಾಲೂಕಿನ ಸವಣೂರಿನ ದಯಾನಂದ ಎಂಬವರು ತಯಾರಿಸಿದ್ದಾರೆ. ಕೃಷಿ ಚಟುವಟಿಕೆ ಮತ್ತು ವಿದ್ಯುತ್ ಕಂಬಗಳನ್ನು ಏರಲು ಬಳಸಬಹುದಾದ ಸಾಧನ ಇದಾಗಿದ್ದು, ಕೇವಲ 10-12 ಕೆಜಿ ಭಾರವಿದೆ. ಅಕಸ್ಮಾತ್ ಈ ಏಣಿ ವಿದ್ಯುತ್ ತಂತಿಯನ್ನು ಸ್ಪರ್ಶಿಸಿದರೂ ವಿದ್ಯುತ್ ಪ್ರವಹಿಸುವುದಿಲ್ಲ. ಹಾಗಾಗಿ ಮೆಸ್ಕಾಂನಲ್ಲಿ ಕೆಲಸಮಾಡುವ ಪವರ್...