Ad Widget

ಸುಳ್ಯ ನಗರ‌ ಪರಿಸರದ ಜನತೆಗೆ ಆ.5,‌ 6ರಂದು ಕೋವಿಡ್_19‌ ಆ್ಯಂಟಿಜನ್ ರ್ಯಾಪಿಡ್ ಪರೀಕ್ಷೆ. ತಾಲೂಕು ಕಚೇರಿಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನ


ಕೋವಿಡ್ 19 ರ ಹಿನ್ನೆಲೆಯಲ್ಲಿ ಸುಳ್ಯ ತಾಲೂಕು ಆಡಳಿತ, ನಗರ ಪಂಚಾಯತ್ ಸುಳ್ಯ, ಆರೋಗ್ಯ ಇಲಾಖೆ ಸುಳ್ಯ, ವರ್ತಕ ಸಂಘ ಸುಳ್ಯ, ಲಯನ್ಸ್ ಮತ್ತು ರೋಟರಿ ಕ್ಲಬ್ ಸುಳ್ಯ ಇದರ ಸಹಭಾಗಿತ್ವದಲ್ಲಿ ಇಂದು ಸುಳ್ಯ ತಾಲೂಕು ಕಚೇರಿಯಲ್ಲಿ ಸಭೆ ನಡೆಯಿತು. ತಹಶೀಲ್ದಾರ್ ಅನಂತ ಶಂಕರ್ ರವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಆಗಸ್ಟ್ 5 ಮತ್ತು 6ರಂದು ನಗರ ಪ್ರದೇಶದ ಜನರನ್ನು ಕೋವಿಡ್_19 ಆ್ಯಂಟಿಜನ್ ರ್ಯಾಪಿಡ್ ಉಚಿತ ಪರೀಕ್ಷೆ ನಡೆಸಲು ತೀರ್ಮಾನಿಸಲಾಯಿತು. ಈಗಾಗಲೇ ಕಳೆದ ಕೆಲವು ದಿನಗಳ ಹಿಂದೆ ಗ್ರಾಮಾಂತರ ಗಳಲ್ಲಿ ಈ ಪರೀಕ್ಷೆಗೆ ಜನರನ್ನು ಒಳಪಡಿಸಲಾಗಿದ್ದು ಅತ್ಯಂತ ಯಶಸ್ವಿಯಾಗಿ ನಡೆದಿದೆ ಎಂದು ತಹಸೀಲ್ದಾರ್ ಅನಂತ ಶಂಕರ್ ಅವರು ಸಭೆಯಲ್ಲಿ ತಿಳಿಸಿದರು. ಪರೀಕ್ಷೆಯನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದ್ದು ಆ.5ರಂದು ಗಾಂಧಿನಗರದಿಂದ ಶ್ರೀರಾಮ್ ಪೇಟೆ ವರೆಗೆ ಇರುವವರನ್ನು ಸುಳ್ಯ ರೋಟರಿ ಶಾಲೆಯಲ್ಲಿ ಪರೀಕ್ಷೆ ನಡೆಸಲಾಗುವುದು ಮತ್ತು ಶ್ರೀರಾಮ್ ಪೇಟೆಯಿಂದ ಪೈಚಾರು ವರೆಗೆ ಇರುವವರನ್ನು ಜ್ಯೋತಿ ಸರ್ಕಲ್ ಬಳಿಯಿರುವ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆಸಲಾಗುವುದು. ಬೆಳಗ್ಗೆ 10 ರಿಂದ ಆರಂಭಗೊಂಡು 2:30 ರವರೆಗೆ ಪರೀಕ್ಷೆ ನಡೆಯಲಿದ್ದು, ಎಲ್ಲಾ ವ್ಯಾಪಾರ ಕೇಂದ್ರಗಳ ಮಾಲಕರು ಹಾಗೂ ಸಿಬ್ಬಂದಿ ವರ್ಗದವರು ಕಡ್ಡಾಯವಾಗಿ ಪರೀಕ್ಷೆ ಮಾಡಿಸಿಕೊಳ್ಳತ್ತಕ್ಕದ್ದು ಎಂದು ಸಭೆಯಲ್ಲಿ ತಹಶೀಲ್ದಾರ್ ತಿಳಿಸಿದ್ದಾರೆ.

. . . . .

ಕೈಗಾರಿಕಾ ಕೇಂದ್ರದ ಕಾರ್ಮಿಕರನ್ನು ಆಯಾ ಕೈಗಾರಿಕಾ ಕೇಂದ್ರಗಳಲ್ಲಿ ಹಾಗೂ ನಗರದಲ್ಲಿ‌ ಜನಸಂಖ್ಯೆ ಹೆಚ್ಚಿರುವ ಕಾಲೋನಿಗಳ ಜನರ ಪರೀಕ್ಷೆಯನ್ನು ಸ್ಥಳೀಯ ಸರಕಾರಿ ಶಾಲೆಗಳಲ್ಲಿ ದಿನಾಂಕವನ್ನು ನಿಗದಿಪಡಿಸಿ ಪರೀಕ್ಷೆ ನಡೆಸಲಾಗುವುದು ಎಂದು ವೈದ್ಯಾಧಿಕಾರಿ ತಿಳಿಸಿದ್ದಾರೆ. ಇಂದಿನಿಂದಲೇ ನಗರ ಪಂಚಾಯತ್ ವತಿಯಿಂದ ಅರ್ಜಿ ಫಾರಂಗಳನ್ನು ನೀಡಲಾಗುತ್ತಿದ್ದು ಆಸಕ್ತರು ಕೂಡಲೇ ಅರ್ಜಿ ಫಾರಂಗಳನ್ನು ಪಡೆದುಕೊಳ್ಳುವಂತೆ ನಗರ ಪಂಚಾಯತ್ ಮುಖ್ಯಾಧಿಕಾರಿ ಮತ್ತಡಿ ಅವರು ತಿಳಿಸಿದ್ದಾರೆ. ಸಭೆಯಲ್ಲಿ ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ ಬಿ ಸುಧಾಕರ ರೈ ಮಾತನಾಡುತ್ತಾ ಈ ಪರೀಕ್ಷೆಯಲ್ಲಿ ರೋಗ ಲಕ್ಷಣಗಳು ಕಂಡುಬಂದಲ್ಲಿ ಆ ವ್ಯಕ್ತಿ ಬಡವನಾಗಿದ್ದರೆ ಅವನ ಚಿಕಿತ್ಸಾ ವೆಚ್ಚದ ಬಗ್ಗೆ ಯಾರು ಖರ್ಚು ವಹಿಸಬೇಕೆಂದು ಅಭಿಪ್ರಾಯಪಟ್ಟರು. ಇದಕ್ಕೆ ಉತ್ತರಿಸಿದ
ತಹಸಿಲ್ದಾರ್ ಈ ಪರೀಕ್ಷೆ ಸಂಪೂರ್ಣ ಉಚಿತವಾಗಿದ್ದು, ರೋಗ ಲಕ್ಷಣಗಳು ಕಂಡುಬಂದಲ್ಲಿ ವೈದ್ಯಕೀಯ ವೆಚ್ಚ ಸರಕಾರದಿಂದ ಭರಿಸಲಾಗುತ್ತದೆ ಎಂದು ತಿಳಿಸಿದರು. ಸಭೆಯ ಅಧ್ಯಕ್ಷತೆಯನ್ನು ತಹಶೀಲ್ದಾರ್ ಅನಂತಶಂಕರ ವಹಿಸಿದ್ದು, ಸಭೆಯಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ| ಸುಬ್ರಹ್ಮಣ್ಯ, ನಗರ ಪಂಚಾಯತ್ ಮುಖ್ಯಾಧಿಕಾರಿ ಮತ್ತಡಿ, ವರ್ತಕರ ಸಂಘದ ಅಧ್ಯಕ್ಷ ಸಂಘ ಅಧ್ಯಕ್ಷ ಪಿ.ಬಿ ಸುಧಾಕರ ರೈ, ಲಯನ್ಸ್ ಕ್ಲಬ್ ಅಧ್ಯಕ್ಷ ರಾಮಚಂದ್ರ ಗೌಡ ಪೆಲ್ತಡ್ಕ, ರೋಟರಿ ಸಿಟಿ ಕ್ಲಬ್ ಅಧ್ಯಕ್ಷ ಗುರುವಿಕ್ರಂ ಮೊದಲಾದವರು ಉಪಸ್ಥಿತರಿದ್ದರು. ನಮ್ಮ ರಕ್ಷಣೆ ನಮ್ಮ ಕೈಯಲ್ಲಿ ಎಂಬ ಧ್ಯೇಯದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿದ್ದು, ಸುಳ್ಯ ನಗರದ ಜನತೆ ಇದರ ಲಾಭವನ್ನು ಪಡೆದುಕೊಳ್ಳಬೇಕೆಂದು ಸಭೆಯಲ್ಲಿ ತಿಳಿಸಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!