Ad Widget

ಅಣ್ಣ ತಂಗಿಯರ ಈ ಬಂಧ… ಜನುಮ ಜನುಮಗಳ ಅನುಬಂಧ…

ನಮ್ಮಲ್ಲಿ ಪರಸ್ಪರ ಭಾವಾನಾತ್ಮಕ ಸಂಬಂಧ ಗಳಿಗೆ ಹಣ , ಒಡವೆಗಳಿಗಿಂತಲೂ ಹೆಚ್ಚಿನ ಮಾನ್ಯತೆ ನೀಡಲಾಗುತ್ತದೆ. ರಕ್ತ ಸಂಬಂಧಗಳನ್ನು ಮೀರಿಸಿದ ಕೆಲವು ಸಂಬಂಧಗಳು ಪ್ರತಿಯೊಬ್ಬರ ಜೀವನದಲ್ಲಿ ಮಹತ್ವ ವಹಿಸುತ್ತದೆ . ಒಂದು ಹಂತದಲ್ಲಿ ಸಂಭಂದಗಳನ್ನು ಬೆಸೆಯುವ ಈ ನಂಬಿಕೆ ಎನ್ನುವ ಕೊಂಡಿಯನ್ನು ಆಚರಣೆಗಳ ಮೂಲಕ ನಮ್ಮ ಎದುರಿಗೆ ಇಡಲಾಗುತ್ತದೆ . ರಕ್ಷಾಬಂಧನವು ಒಡಹುಟ್ಟಿದವರಲ್ಲದೆ ಹೊರಗಿನವರನ್ನು ಸಹೋದರರಂತೆ ಭಾವಿಸಿ ನಡೆದುಕೊಳ್ಳಬೇಕೆಂಬ ಸಂದೇಶವನ್ನು ಸಾರುವ ಹಬ್ಬ. ಪ್ರತಿಯೊಬ್ಬ ಪುರುಷರು ಶ್ರೀ ಕೃಷ್ಣನಂತೆ ದ್ರೌಪದಿಯನ್ನು ರಕ್ಷಿಸುವಂತ
ಅಣ್ಣಂದಿರಾಗೋಣ . ಒಳ್ಳೆಯ ಸಹೋದರನೊಬ್ಬ ರಕ್ತ ಹಂಚಿಕೊಂಡು ಹುಟ್ಟಬೇಕೆಂದಿಲ್ಲ ಪ್ರಾಮಾಣಿಕವಾಗಿ ತನ್ನವರೆಂದುಕೊಳ್ಳುವ ಆತ್ಮೀಯ ಭಾವವನ್ನು ತೋರಿಸುವ ಪ್ರತಿಯೊಬ್ಬರೂ
ಅಣ್ಣ – ತಮ್ಮಂದಿರೆ ಅಲ್ಲವೇ? ಅದಕ್ಕಾಗಿ ರಾಖಿ ಕಟ್ಟಿಸಿಕೊಳ್ಳುವ ಮೂಲಕ ಸಂಬಂಧಗಳನ್ನು ಬೆಸೆಯುವ ,ಭರವಸೆಯ ಆಶಾಕಿರಣವನ್ನು ಮೂಡಿಸಿ ಹೆಣ್ಣಿನ ರಕ್ಷಣೆಗೆ ನಮ್ಮ ಹಿರಿಯರು ನಮಗೆ ರೂಢಿಸಿಕೊಟ್ಟ ಒಂದು ಜವಾಬ್ದಾರಿ ಕೆಲಸ. ಅಣ್ಣನಾದವನು ತಂಗಿಗೆ ತಾನು ಬದುಕಿರುವವರೆಗೂ ರಕ್ಷಣೆ ನೀಡುತ್ತೇನೆಂದು , ತಂಗಿಯ ಶ್ರೇಯಸ್ಸಲ್ಲೆ ತನ್ನ ಜೀವನವಿದೆ ಎಂದು ರಕ್ಷೆಯನ್ನು ಕಟ್ಟಿಸಿಕೊಳ್ಳೋಣ.
॥ರಕ್ಷೆ ಎಲ್ಲರಿಗೂ ಶುಭ ತರಲಿ॥

. . . . . . .
  • ರೂಪಾನಂದ ಗುಂಡ್ಯ -ಅಲೇಟ್ಟಿ

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!