ಸರಕಾರಗಳು ಸಮಾಜದ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ರೂಪಿಸುತ್ತಿದೆ. ಅದರಲ್ಲಿ ಕೆಲವು ಯೋಜನೆಗಳು ಅದಕ್ಕೆ ಸಂಬಂಧಪಟ್ಟ ಸಚಿವರುಗಳು ಶಾಸಕರು ಚಾಲನೆ ನೀಡಿ ಹೋದನಂತರ ಆ ಯೋಜನೆಗಳು ಕೇವಲ ಯೋಜನೆಯಾಗಿಯೇ ಉಳಿಯುತ್ತದೆ. ಫಲಾರ್ತಿಗಳು ಪರಿಶ್ರಮಪಟ್ಟು ಆ ಯೋಜನೆಯ ಲಾಭವನ್ನು ಪಡೆದುಕೊಳ್ಳಬೇಕಾಗುತ್ತದೆ. ಪರವಾಲಂಬಿ ಬದುಕು ಸ್ವಾಲಂಬಿ ಬದುಕುಗಳ ಮಧ್ಯ ಇವರ ವ್ಯತ್ಯಾಸವನ್ನು ದೇಶದ ಪ್ರಧಾನಿ ಮೋದಿಯವರು ಆತ್ಮನಿರ್ಭರ ಭಾರತ ಯೋಜನೆಯನ್ನು ಜಾರಿಗೊಳಿಸುವುದರ ಮೂಲಕ ಈ ಇಡೀ ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ. 20 ಲಕ್ಷ ಕೋಟಿ ಅನುದಾನವನ್ನು ಒದಗಿಸಿ ಪ್ರಧಾನಮಂತ್ರಿ ನರೇಂದ್ರಮೋದಿಯವರು ಈ ಯೋಜನೆಯನ್ನು ಜಾರಿಗೆ ತರಲು ಮುಂದಾದರು. ಇದರಿಂದ ದೇಶದ ಪ್ರತಿಯೊಬ್ಬ ಪ್ರಜೆಯೂ ಸ್ವಉದ್ಯೋಗದಿಂದ ತನ್ನ ಕಾಲ ಮೇಲೆ ತಾನು ನಿಂತು ತನಗೂ ಮತ್ತು ಸಮಾಜಕ್ಕೂ ಉದ್ಯೋಗಗಳನ್ನು ಸ್ಪಷ್ಠಿಸಬೇಕು. ಇದರೊಂದಿಗೆ ತನ್ನ ಜೊತೆಜೊತೆ ಸಮಾಜವು ಕೂಡಾ ಬೆಳೆಯಬೇಕು ಎಂಬುಂದೇ ಮೂಲ ಉದ್ದೇಶವಾಗಿದೆ ಎಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸುಳ್ಯ ದುರ್ಗಾಪರಮೇಶ್ವರಿ ಕಲಾಮಂದಿರದಲ್ಲಿ ಆ.1ರಂದು ನಡೆದ ಆತ್ಮನಿರ್ಭರ ಭಾರತಕ್ಕಾಗಿ ಉದ್ಯೋಗ ತರಬೇತಿ ಇದರ ಮೊದಲ ಸುತ್ತಿನ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತ ಹೇಳಿದರು.
ಈ ಕಾರ್ಯಕ್ರಮವನ್ನು ಗ್ರಾಮವಿಕಾಸ ಸಮತಿ ಮಂಗಳೂರು ವಿಭಾಗ, ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು (ರಿ.) ಸಹಕಾರಿ ಭಾರತಿ ದ.ಕ ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸುಳ್ಯ ಇದರ ಆಶ್ರಯದಲ್ಲಿ ಆಯೋಜಿಸಲಾಗಿತ್ತು. ಈ ತರಬೇತಿ ಶಿಬಿರವನ್ನು ಕಳೆದ ೧ ವಾರದಿಂದ ಸುಳ್ಯ ಎ.ಪಿ.ಎಂ.ಸಿ ಸಭಾಂಗಣದಲ್ಲಿ ಸುಮಾರು 77ಮಂದಿ ಸಮಾಜದಲ್ಲಿ ಜೀವನವನ್ನು ರೂಪಿಸಿಕೊಳ್ಳುವ ಉದ್ಯೋಗಗಳಾದ ಸಿಸಿಟಿವಿ ಆಳವಡಿಕೆ, ಗ್ರಾಹಕ ಮಾಹಿತಿ ಸಂಗ್ರಹ, ಪ್ಯಾಶನ್ ಡಿಸೈನಿಂಗ್, ವಿದ್ಯುತ್ ಉಪಕರಣಗಳ ಆಳವಡಿಕೆ, ಪ್ಲಬಿಂಗ್ ಮತ್ತು ಎಲೆಕ್ಟ್ರಿಕಲ್ಸ್ ಇವುಗಳ ಬಗ್ಗೆ ತರಬೇತಿಯನ್ನು ಪಡೆದುಕೊಂಡರು. ಈ ಕಾರ್ಯಕ್ರಮವು ನಿರಂತರವಾಗಿ ನಡೆಯಲಿದ್ದು ಇದರ ಪ್ರಥಮ ಹಂತದ ಸಮಾರೋಪ ಸಮಾರಂಭವನ್ನು ನಡೆಸಲಾಯಿತು.