Ad Widget

ಶಾಂತಿನಗರ ನೂರುಲ್ ಇಸ್ಲಾಂ ಮದರಸ ಹಾಗೂ‌ಜಯನಗರ ಜನ್ನತುಲ್ ಉಲೂಮ್‌ ಮಸ್ಚಿದ್ ನಲ್ಲಿ ಈದ್ ನಮಾಝ್ ನಿರ್ವಹಿಸಿದ ಸ್ಥಳೀಯ ಮುಸಲ್ಮಾನ ಬಾಂಧವರು


ಕೊರೋನ ವೈರಸ್ ಹಿನ್ನೆಲೆಯಲ್ಲಿ ಸರಕಾರ ಮಸೀದಿಗಳಲ್ಲಿ ಈದ್ ನಮಾಝ್ ಕುರಿತು ನಿಯಮಾವಳಿಗಳನ್ನು ಆದೇಶಿಸಿರುವ ಹಿನ್ನೆಲೆಯಲ್ಲಿ ಸುಳ್ಯ ಮೊಗರ್ಪಣೆ ಜುಮಾ ಮಸ್ಜಿದ್ ಆಡಳಿತ ಕಮಿಟಿಯ ಕೇಂದ್ರ ಮಸೀದಿಗೆ ಬರುವವರ ಸಂಖ್ಯೆ ಕಡಿಮೆಗೊಳಿಸಲು ತಮ್ಮ ಬ್ರಾಂಚ್ ಸಂಸ್ಥೆಗಳಾದ ಶಾಂತಿನಗರ ಹಾಗೂ ಜಯನಗರ ಮದ್ರಸಾಗಳಲ್ಲಿ ಪ್ರಥಮ ಬಾರಿಗೆ ನಮಾಝ್ ನಿರ್ವಹಿಸಲು ಅನುಮತಿ ನೀಡಲಾಗಿತ್ತು.

. . . . . . .

ಈ ನಿಟ್ಟಿನಲ್ಲಿ ಶಾಂತಿನಗರ ನೂರುಲ್ ಇಸ್ಲಾಂ ಮದ್ರಸದಲ್ಲಿ ಸ್ಥಳೀಯ ಮುಸಲ್ಮಾನರು ಈದ್ ಆಚರಿಸಿ ನಮಾಝ್ ನೆರವೇರಿಸಿದರು. ಶಾಂತಿನಗರ ಮದ್ರಸದಲ್ಲಿ ಸ್ಥಳೀಯ ಸದರ್ ಮುಅಲ್ಲಿಂಅಬ್ದುಲ್ ಝೈನಿ ನೇತೃತ್ವ ವಹಿಸಿಕೊಂಡರೆ ಜಯನಗರ ಮದ್ರಸದಲ್ಲಿ ಸದರ್ ಮುಅಲ್ಲಿಂ ಅಬ್ದುಲ್ ಕರೀಂ ಸಖಾಫಿ, ಹಾಗೂ ಮಸ್ಜಿದ್ ಮದ್ರಸ ಸಮಿತಿ ಪ್ರಧಾನ ಕಾರ್ಯದರ್ಶಿ ಬಶೀರ್ ಸಖಾಫಿ ನೇತೃತ್ವ ವಹಿಸಿದ್ದರು.
ಈ ಸಂದರ್ಭದಲ್ಲಿ ಇಡೀ ವಿಶ್ವ ದಿಂದಲೇ ಕೊರೋನವೈರಸ್ ನಿರ್ಮೂಲನೆ ಗೊಂಡು ವಿಶ್ವ ಶಾಂತಿ ನೆಲೆಸಲಿ ಎಂದು ಸೈಯದ್ ಜೈನುಲ್ ಆಬಿಧ್ಧೀನ್ ತಂಙಳ್ ಜಯನಗರ ದುವಾ ನೆರವೇರಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!