ಸವಣೂರು ಗ್ರಾಮದ ಇಡ್ಯಾಡಿ ನಿವಾಸಿಯಾದ ಯುಮುನಾ ಇಡ್ಯಾಡಿ ಇವರ ಮನೆಯು ಮಳೆಗಾಲದಲ್ಲಿ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಸಂಪೂರ್ಣವಾಗಿ ಕುಸಿದಿದ್ದು ಸುಮಾರು 2 ವರ್ಷಗಳಿಂದ ಪ್ಲಾಸ್ಟಿಕ್ ಹೊದಿಕೆಯಲ್ಲಿ ಅದೇ ಮನೆಯ ಅಳಿದುಳಿದ ಗೋಡೆಗಳ ಮಧ್ಯೆ ಜೀವನ ನಡೆಸುತ್ತಿದ್ದರು. ಇವರ ನೆರವಿಗೆ ಧಾವಿಸಿದ ಗ್ರಾಮದ ಧಾರ್ಮಿಕ,ರಾಜಕೀಯ ಮುಖಂಡರು ಹಾಗೂ ಸಂಘ ಸಂಸ್ಥೆಗಳ ಮಾರ್ಗದರ್ಶನದಲ್ಲಿ, ಊರಿನ ಉತ್ಸಾಯಿ ಯುವಕರ ಜೊತೆಗೂಡಿ,ಸಹೃದಯಿ ದಾನಿಗಳ ನೆರವಿನಿಂದ ಬಡಪಾಯಿಯ ಬದುಕಿಗೊಂದು ಮನೆಯ ಆಸರೆ ನೀಡಿದ್ದಾರೆ.
ಮನೆ ನಿರ್ಮಾಣಕ್ಕೆ ಹತ್ತಾರು ಜನ ಧನಸಹಾಯ, ಮನೆ ನಿರ್ಮಿಸಲು ಬೇಕಾದ ವಸ್ತುಗಳನ್ನು ದಾನ ಮಾಡಿರುತ್ತಾರೆ. ಶ್ರೀ ಕ್ಷೇತ್ರ ದೈಪಿಳ ಕ್ರೀಡಾ ಸೇವಾ ಸಂಘ ಇವರು ಮನೆಯ ಮುಂಭಾಗದ ಸಿಮೆಂಟ್ ಮಾಡಿನ ನಿರ್ಮಾಣದ ಖರ್ಚಿನ ರೂ. 15 ಸಾವಿರ ರೂಪಾಯಿಗಳನ್ನು ಯಮುನಾ ಇಡ್ಯಾಡಿ ಇವರಿಗೆ ಹಸ್ತಾಂತರಿಸಿದರು.
ಇಷ್ಟೇಲ್ಲಾ ದಾನಿಗಳ ಸಹಾಯ ಹರಿದು ಬರಲು, ಸುಂದರವಾದ ಮನೆ ಕೆಲಸ ಪೂರ್ಣಗೊಳ್ಳಲು ಹಗಲಿರುಳು ಶ್ರಮಿಸಿದ “ಕಟ್ಟೋಣ ಬದುಕಿಗೊಂದು ಆಸರೆ” ತಂಡದ ಕಾರ್ಯಕರ್ತರಿಗೆ ಚಪ್ಪಾಳೆ ತಟ್ಟಲೇಬೇಕು.