ಸುಮಾರು ಎರಡು ತಿಂಗಳಿಂದ ಬಂದ್ ಆಗಿರುವ ದೇಶೀಯ ವಿಮಾನಯಾನ ಸೇವೆ ಮೇ 25 ಸೋಮವಾರದಿಂದ ಆರಂಭವಾಗಲಿದೆ. ವಿಮಾನ ರೈಲು ಮತ್ತು ಅಂತರಾಜ್ಯ ಬಸ್ ಪ್ರಯಾಣಕ್ಕೆ ಆರೋಗ್ಯ ಸಚಿವಾಲಯ ಮಾರ್ಗಸೂಚಿಗಳನ್ನು ಹೊರಡಿಸಿದೆ.
ವಿಮಾನ ಪ್ರಯಾಣಕ್ಕೆ ಪ್ರಯಾಣಿಕರು ವಿಮಾನ ನಿಲ್ದಾಣವನ್ನು ಎರಡು ಗಂಟೆ ಮೊದಲು ತಲುಪಿ ತಪಾಸಣೆಗೆ ಒಳಪಡಬೇಕು. ಕಡ್ಡಾಯ ಮಾಸ್ಕ್ ಧರಿಸಬೇಕು. ಕಡಿಮೆ ಲಗೇಜ್ ತೆಗೆದುಕೊಂಡು ಹೋಗಬೇಕು. ಆರೋಗ್ಯ ಸೇತು ಆ್ಯಪ್ ಡೌನ್ ಲೋಡ್ ಮಾಡಿರಬೇಕು. ಪ್ರಯಾಣಿಕರನ್ನು ತಪಾಸಣೆಗೊಳಪಡಿಸಿ ಸೋಂಕು ಲಕ್ಷಣ ಇಲ್ಲದ ಪ್ರಯಾಣಿಕರನ್ನು ಮಾತ್ರ ಪ್ರಯಾಣಕ್ಕೆ ಅನುಮತಿಸಬೇಕು.ಸೋಂಕು ಲಕ್ಷಣ ಇರುವವರನ್ನು ಆರೋಗ್ಯ ಕೇಂದ್ರಗಳಿಗೆ, ಸೋಂಕು ತೀವ್ರತೆ ಇರುವವರನ್ನು ಕೋವಿಡ್ 19 ಆಸ್ಪತ್ರೆಗಳಿಗೆ ದಾಖಲಿಸಬೇಕು. ವಿಮಾನ ನಿಲ್ದಾಣದಿಂದ ಹೊರ ಬರುವಾಗಲೂ ಥರ್ಮಲ್ ಸ್ಕ್ರೀನಿಂಗ್ ಮಾಡಬೇಕು ಎಂದು ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಖಡಕ್ ಸೂಚನೆ ರವಾನಿಸಿದೆ. ಮಹಾರಾಷ್ಟ್ರ ಮತ್ತು ತಮಿಳುನಾಡು ಸರ್ಕಾರಗಳು ವಿಮಾನ ಹಾರಾಟಕ್ಕೆ ಅನುಮತಿ ನೀಡಿಲ್ಲ. ಅಂತರ್ರಾಜ್ಯ ಬಸ್ಸು ಪ್ರಯಾಣ ಮತ್ತು ರೈಲು ಪ್ರಯಾಣಕ್ಕೆ ಇದೇ ಮಾರ್ಗಸೂಚಿಗಳು ಅನ್ವಯಿಸುತ್ತವೆ ಎಂದು ಸರ್ಕಾರ ಹೇಳಿದೆ. ವಿದೇಶಗಳಿಂದ ಆಗಮಿಸುವ ಪ್ರಯಾಣಿಕರಿಗೆ ಕೂಡ ಸಚಿವಾಲಯ ಮಾರ್ಗಸೂಚಿ ನೀಡಿದೆ. ವಿದೇಶಗಳಿಂದ ಆಗಮಿಸುವವರಿಗೆ 14ದಿನಗಳ ಕಡ್ಡಾಯ ಮಾಡಬೇಕು. ಏಳು ದಿನ ಹೋಟೆಲ್ ಕಾರಂಟೈನ್, ಏಳು ದಿನ ಹೋಮ್ ಕಾರಂಟೈನ್ ಮಾಡಬೇಕು. ಈ ವೆಚ್ಚವನ್ನು ಪ್ರಯಾಣಿಕರೇ ಭರಿಸಬೇಕು ಎಂದು ಸೂಚಿಸಿದೆ.
ಅಂತರಾಷ್ಟ್ರೀಯ ವಿಮಾನ ಸೇವೆಯನ್ನು ಜೂನ್ ಮಧ್ಯಭಾಗದಿಂದ ಆರಂಭಿಸಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ. ಈಗಾಗಲೇ ಹಲವು ರಾಜ್ಯಗಳಲ್ಲಿ ಬಸ್ ಸಂಚಾರ ಆರಂಭ ವಾಗಿದೆ ಜೂನ್ ಒಂದರಿಂದ ರೈಲುಗಳು ಸಂಚರಿಸಲಿವೆ ಎಂದು ತಿಳಿದುಬಂದಿದೆ.