- Tuesday
- July 28th, 2026
ಮಾಗಣೆ ಕ್ಷೇತ್ರ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವಾರ್ಷಿಕ ಜಾತ್ರೆ ಹಾಗೂ ಬ್ರಹ್ಮರಥೋತ್ಸವದ ಪ್ರಯುಕ್ತ ಜ.16 ರಂದು ಬೆಳ್ಳಾರೆಯಿಂದ ಪೆರುವಾಜೆ ಶ್ರೀ ಕ್ಷೇತ್ರದ ತನಕ ನಡೆಯಲಿರುವ ಹಸುರು ಹೊರೆಕಾಣಿಕೆ ಮೆರವಣಿಗೆಯು ವೈಭವದಿಂದ ನಡೆಯಲಿದ್ದು ಕ್ಷೇತ್ರದ ಭಕ್ತವೃಂದ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪದ್ಮನಾಭ ಶೆಟ್ಟಿ ಪೆರುವಾಜೆ...
ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾದಲ್ಲಿ ಧನು ಪೂಜೆ ಒಂದು ತಿಂಗಳ ಕಾಲ ನಡೆದು ಇಂದು ಸಂಪನ್ನಗೊಂಡಿತು. ನೂರಾರು ಭಕ್ತರು ಆಗಮಿಸಿ ಶ್ರೀ ದೇವರ ಪ್ರಸಾದ ಸ್ವೀಕರಿಸಿದರು. 👉ಶ್ರೀ ಕ್ಷೇತ್ರದಲ್ಲಿ ಮುಂದೆ ನಡೆಯಲಿರುವ ಕಾರ್ಯಕ್ರಮಗಳ ವಿವರ : ಜ.18ನೇ ಗುರುವಾರ ದಂದು ಚಾಕಟೆಡಿಗೆ ಗೊನೆ ಕಡಿಯುವುದು, ಜ. 25ನೇ ಗುರುವಾರದಂದು ಚಾಕಟೆಡಿ ನೇಮ, ಜ. 26ನೇ...
ಭಾರತೀಯ ವಾಯುಪಡೆಗೆ ಅಗ್ನಿವೀರರ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಐಎಎಫ್ ಅಗ್ನಿವೀರ್ ವಾಯು ನೇಮಕಾತಿ 2024 ನೋಂದಣಿಯು ಜನವರಿ 17ರಂದು ಪ್ರಾರಂಭವಾಗುತ್ತದೆ. ಆಸಕ್ತ ಅಭ್ಯರ್ಥಿಗಳು ಅರ್ಹತೆ, ವಯಸ್ಸಿನ ಮಿತಿ, ನೇಮಕಾತಿ ವಿವರಗಳು, ಅರ್ಜಿಶುಲ್ಕ, ಪೋಸ್ಟ್‌ಗಳ ಸಂಖ್ಯೆ ಮತ್ತು ಇತರ ವಿವರಗಳನ್ನು ಅಧಿಕೃತ ವೈಬ್‌ಸೈಟ್‌ನಲ್ಲಿ ಪರಿಶೀಲಿಸಬಹುದು. 2024 ಫೆಬ್ರವರಿ 6ರಂದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅರ್ಜಿಗಳನ್ನು...
ಜ.13 ರಂದು ಅಮರಮುಡ್ನೂರಿನ ಚೊಕ್ಕಾಡಿ ಪ್ರೌಢಶಾಲೆಯ ಸುವರ್ಣ ಮಹೋತ್ಸವದ ಎರಡನೇಯ ದಿನದ ಸಭಾ ಸಮಾರಂಭವು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಮಾಜಿ ಸಚಿವ ಎಸ್.ಅಂಗಾರ ರವರು ವಹಿಸಿದ್ದರು. ವೇದಿಕೆಯ ಮುಖ್ಯ ಅಭ್ಯಾಗತರಾಗಿ ಮಂಗಳೂರು ಲೋಕಸಭಾ ಸಂಸದ ನಳಿನ್ ಕುಮಾರ್ ಕಟೀಲ್ ರವರು ಮಾತನಾಡಿ ” ದೇಶದಲ್ಲಿ ಶಿಕ್ಷಣಕಾಶಿ ಎಂಬ ಬಿರುದು ಪಡೆದ...
ಶ್ರೀ ಉಳ್ಳಾಕುಲು ಮತ್ತು ಮಲೆ ದೈವಗಳ ದೈವಸ್ಥಾನ ದೇವ ಇದರ ವಾರ್ಷಿಕ ಜಾತ್ರೋತ್ಸವ ಜ.20 ರಿಂದ 22 ರವರೆಗೆ ನಡೆಯಲಿದೆ. ಆ ಪ್ರಯುಕ್ತ ದೈವಸ್ಥಾನದ ವಠಾರದಲ್ಲಿ ಶ್ರಮದಾನ ನಡೆಯಿತು. ದೇವ ಗೆಳೆಯರ ಬಳಗದ ಸದಸ್ಯರು ಹಾಗೂ ಊರವರು ಶ್ರಮದಾನದಲ್ಲಿ ಭಾಗವಹಿಸಿದ್ದರು.
ನೀವು ಉದ್ಯೋಗ ಹುಡುಕುತ್ತಿದ್ದೀರಾ, ಪಾರ್ಟ್ ಟೈಮ್ ಹಾಗೂ ಫುಲ್ ಟೈಮ್ ಜಾಬ್ ಮಾಡಲು ನಾವು ನಿಮಗೆ ಸುವರ್ಣಾವಕಾಶ ಒದಗಿಸುತ್ತಿದ್ದೇವೆ.ಅಮರ ಸುಳ್ಯ ಸುದ್ದಿ ವಾರಪತ್ರಿಕೆ, ಅಮರ ಸುದ್ದಿ ವೆಬ್ಸೈಟ್ ಹಾಗೂ ಯೂಟ್ಯೂಬ್ ಲೈವ್ ವಾಹಿನಿಯಲ್ಲಿ ಫೀಲ್ಡ್ ವರ್ಕ್ ಮಾಡಲು ಆಸಕ್ತ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಬೇಕಾಗಿದ್ದಾರೆ. ನಿಮ್ಮೂರಿನಲ್ಲಿಯೇ ಇದ್ದು ಕಾರ್ಯನಿರ್ವಹಿಸಬಹುದು. ಆಸಕ್ತರು ನಿಮ್ಮ ಬಯೋಡೇಟಾ ಕಳುಹಿಸಿ...
ತೆಲಂಗಾಣದಲ್ಲಿ ನಡೆದ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಕರ್ನಾಟಕ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಕರ್ನಾಟಕ ಕಬಡ್ಡಿ ತಂಡವನ್ನು ಪ್ರತಿನಿಧಿಸಿರುವ ಬೆಳ್ಳಾರೆ ಕೆಪಿಎಸ್ ವಿದ್ಯಾರ್ಥಿಗಳಾದ ಕಿಶನ್ ದ್ರಾವಿಡ್ ಹಾಗೂ ಹೇಮಂತ ಕೆ. ವಿ, ದೈಹಿಕ ಶಿಕ್ಷಣ ಶಿಕ್ಷಕಿ ಹಾಗೂ ಕ್ರೀಡಾಧಿಕಾರಿಯಾದ ಶ್ರೀಮತಿ ಪುಷ್ಪಾವತಿ ಇವರನ್ನು ಪಡ್ಡಿನಂಗಡಿ ನಾಗರಿಕರು ಸ್ವಾಗತಿಸಿ ಅಭಿನಂದಿಸಲಾಯಿತು. ಇವರು ಮುಂದೆ ಇವರು ಖೇಲೋ ಇಂಡಿಯಾ...
ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾದಲ್ಲಿ ಧನು ಪೂಜೆಯ ಕೊನೆಯ ದಿನವಾದ ಇಂದು ಮುಂಜಾನೆ ಗಂಟೆ 4 ರಿಂದ 5-30 ರ ವರೆಗೆ ಪಂಬೆತ್ತಾಡಿ ಪಂಚಶ್ರೀ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ಜರಗಿತು. ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.
ಸುಬ್ರಹ್ಮಣ್ಯ ಜ14: ಸುಬ್ರಹ್ಮಣ್ಯದ ಡಾ. ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ವತಿಯಿಂದ ರವಿವಾರದಂದು ಕುಮಾರಧಾರ ದಿಂದ ದೇವಿ ದೇವಸ್ಥಾನದ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛಗೊಳಿಸಿದರು. ಶ್ರೀ ಕ್ಷೇತ್ರಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುತ್ತಿದ್ದು ದೇವರ ದರ್ಶನ ಪಡೆಯುವುದರೊಂದಿಗೆ ಪುನೀತರಾಗುತ್ತಿದ್ದಾರೆ. ಭಕ್ತಾದಿಗಳು ದೂರದ ಊರಿನಿಂದ ಬೇರೆ ಬೇರೆ ಕ್ಷೇತ್ರಗಳಿಂದ ವಾಹನಗಳಲ್ಲಿ ಆಗಮಿಸುವಂತಹ ಸಂದರ್ಭದಲ್ಲಿ ಮಾರ್ಗದ ಇಕ್ಕಲೆಗಳಲ್ಲಿ...
ಅರಂತೋಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚುತ್ತಿದ್ದು, ಇವುಗಳ ಹಾವಳಿ ತಡೆಗಟ್ಟಲು ಕ್ರಮ ಕೈಗೊಳ್ಳಬೇಕೆಂದು ಗ್ರಾ.ಪಂ.ಅಧ್ಯಕ್ಷರಾದ ಹಿಮಕರ ಅಡ್ತಲೆಯವರಿಗೆ ನಾಗರಿಕಾ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಹರಿಪ್ರಸಾದ್ ಅಡ್ತಲೆ ಮನವಿ ನೀಡಿ ಒತ್ತಾಯಿಸಿದ್ದಾರೆ. ಆರಂತೋಡು – ಅಡ್ತಲೆ – ಎಲಿಮಲೆ ಲೋಕೋಪಯೋಗಿ ರಸ್ತೆ ಮತ್ತು ಅಡ್ತಲೆ – ಬೆದ್ರುಪಣೆ ಪಂಚಾಯತ್ ರಸ್ತೆ , ಅರಂತೋಡು...
Loading posts...
All posts loaded
No more posts
