ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ – ನೂತನ ಬ್ರಹ್ಮರಥ ಮತ್ತು ಪಲ್ಲಕ್ಕಿ ಸಮರ್ಪಣೆ

ಮಾಗಣೆ ಕ್ಷೇತ್ರವಾದ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ಆರಂಭಗೊಂಡಿದ್ದು, ಇಂದು ಪೂರ್ವಾಹ್ನ ಗಂಟೆ 9-45 ರಿಂದ 10-10ರ ಕುಂಭ ಲಗ್ನದ ಸುಮುಹೂರ್ತದಲ್ಲಿ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಶ್ರೀ ದೇವಿಗೆ ನೂತನ ಬ್ರಹ್ಮರಥ ಮತ್ತು ಪಲ್ಲಕ್ಕಿ ಸಮರ್ಪಣೆಗೊಂಡಿತು. ಈ ಸಂದರ್ಭ ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರ ಶ್ರೀಧಾಮ ಮಾಣಿಲದ...

ಜ.21: ಅಯ್ಯನಕಟ್ಟೆಯಲ್ಲಿ “ನಮ್ಮ ಆರೋಗ್ಯಧಾಮ” ಮಲ್ಟಿಸ್ಪೆಷಾಲಿಟಿ ಮೆಡಿಕಲ್ ಸೆಂಟರ್ ಶುಭಾರಂಭ

ಅಯ್ಯನಕಟ್ಟೆಯಲ್ಲಿ ನೂತನವಾಗಿ ನಿರ್ಮಿಸಿದ 'ಗೋಕುಲ' ಸಂಕೀರ್ಣದಲ್ಲಿ ಡಾ.ಎನ್.ಗೋಪಾಲಕೃಷ್ಣಯ್ಯ (N.G.K.) ಸ್ಮಾರಕ "ನಮ್ಮ ಆರೋಗ್ಯಧಾಮ" ಮಲ್ಟಿಸ್ಪೆಷಾಲಿಟಿ ಮೆಡಿಕಲ್ ಸೆಂಟರ್ ಜ.21ರಂದು ಶುಭಾರಂಭಗೊಳ್ಳಲಿದೆ. ಇಲ್ಲಿ ತಜ್ಞ ವೈದ್ಯಕೀಯ ಸಲಹೆ, ವೈಯಕ್ತಿಕ ಸಮಾಲೋಚನೆ, ಡೇ-ಕೇರ್ ಚಿಕಿತ್ಸೆ, ತುರ್ತು ಚಿಕಿತ್ಸೆ, ಪ್ರಾಥಮಿಕ ಚಿಕಿತ್ಸೆ, ಶಸ್ತ್ರಚಿಕಿತ್ಸಾ ಕೊಠಡಿ, ಕ್ಲಿನಿಕಲ್ ಲ್ಯಾಬೋರೇಟರಿ, ಇ.ಸಿ.ಜಿ., ಔಷಧಿಗಳು, ಫಿಸಿಯೋಥೆರಪಿ ಹಾಗೂ ಅಂಬ್ಯುಲೆನ್ಸ್ ಸರ್ವೀಸ್ ಸೌಲಭ್ಯಗಳು ಲಭ್ಯವಿರಲಿದೆ ಎಂದು...
Ad Widget

ಹೃದಯಾಫಾತ ಹೇಗೆ ಸಂಭವಿಸುತ್ತದೆ ? – ಹೃದಯಾಘಾತ ಸೂಚಕ ಕಿಣ್ವಗಳು ಅಂದರೇನು ?

ಹೃದಯ ಎನ್ನುವುದು ನಮ್ಮ ದೇಹದ ಅತೀ ಪ್ರಾಮುಖ್ಯವಾದ ಅಂಗವಾಗಿದ್ದು, ದಿನದ 24 ಗಂಟೆಯೂ ನಿರಂತರವಾಗಿ ಕೆಲಸ ಮಾಡುತ್ತಲೇ ಇರುತ್ತದೆ. ಇಂತಹಾ ಹೃದಯಕ್ಕೆ ಆಫಾತವಾಗಿ ಹೃದಯದ ಸ್ನಾಯುಗಳಿಗೆ ರಕ್ತದ ಪೂರೈಕೆ ನಿಂತು ಹಾನಿಯಾದಾಗ, ರಕ್ತದಲ್ಲಿ ಕೆಲವೊಂದು ಕಿಣ್ವಗಳು ಏರಿಕೆಯಾಗುತ್ತದೆ. ಹೃದಯದ ಘಾಸಿಗೊಂಡ ಸ್ನಾಯುಗಳಿಂದ ಬಿಡುಗಡೆಯಿಂದ ಈ ಕಿಣ್ವಗಳನ್ನು ಕಾರ್ಡಿಯಾಕ್ ಮಾರ್ಕರ್ ಅಥವಾ ಹೃದಯಾಘಾತ ಸೂಚಕ ಕಿಣ್ವಗಳು ಎಂದೂ...

ಪೆರುವಾಜೆ : ಶಿಲ್ಪಿಗಳಿಂದ ದೇವಾಲಯಕ್ಕೆ ನೂತನ ರಥ ಹಸ್ತಾಂತರ

https://youtu.be/mZnI-f0keyc?si=ywpFwxC-aFxy-lHd ಪೆರುವಾಜೆ : ಇತಿಹಾಸ ಪ್ರಸಿದ್ದ ಮಾಗಣೆ ಕ್ಷೇತ್ರ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆ ಹಾಗೂ ಬ್ರಹ್ಮರಥೋತ್ಸವಕ್ಕೆ ಜ.15 ರಂದು ಚಾಲನೆ ದೊರೆಯಿತು. ಬೆಳಗ್ಗೆ ನೂತನ ಬ್ರಹ್ಮರಥವನ್ನು ರಥ ಶಿಲ್ಪಿಗಳು ಶ್ರೀ ಕ್ಷೇತ್ರಕ್ಕೆ ಹಸ್ತಾಂತರಿಸಿದರು.ರಥ ಶಿಲ್ಪಿಗಳ ಪರವಾಗಿ ಶಿವಕುಮಾರ್ ಶರ್ಮ ಅವರು ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು. ರಥ ಶಿಲ್ಪಿ ಹರೀಶ್ ಆಚಾರ್ಯ...

ಮಡಪ್ಪಾಡಿ ಹಾಡಿಕಲ್ಲು ಕೊಲ್ಲಮೊಗ್ರ ನೂಜಾಲು ಕಾಂಕ್ರೀಟ್ ರಸ್ತೆ ಉದ್ಘಾಟನೆ

ಮಡಪ್ಪಾಡಿ ಹಾಡಿಕಲ್ಲು ಕೊಲ್ಲಮೊಗ್ರ ರಸ್ತೆಯ ನೂಜಾಲು ಎಂಬಲ್ಲಿ 2ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಕಾಂಕ್ರೀಟ್ ರಸ್ತೆ ಉದ್ಘಾಟನೆ ಮಾನ್ಯ ಶಾಸಕರಾದ ಭಾಗೀರಥಿ ಮುರುಳ್ಯ ಇವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅತೀ ಹೆಚ್ಚಿನ ಅಂತರದಿಂದ ಗೆಲುವು ಸಾಧಿಸಲು ಕಾರಣಕರ್ತರಾದ ಮಡಪ್ಪಾಡಿಯ ಜನತೆಗೆ ಅಭಿನಂದಿಸುವುದರ ಜೊತೆಗೆ ವಿರೋಧ ಪಕ್ಷದಲ್ಲಿದ್ದರೂ ಕೂಡ ಹೆಚ್ಚಿನ ಅನುಧಾನಗಳನ್ನು ಒದಗಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇನೆ...

ಸುಬ್ರಹ್ಮಣ್ಯ ಮಹಿಳಾ ಸೊಸೈಟಿ ಚುನಾವಣೆ ಕಾಂಗ್ರೆಸ್ ಬಿಜೆಪಿ ಹೊಂದಾಣಿಕೆ 13 – 4 ಸ್ಥಾನಗಳ ಹಂಚಿಕೆ

17 ಸ್ಥಾನಕ್ಕೂ ನಿರ್ದೇಶಕರ ಅವಿರೋಧ ಆಯ್ಕೆ 25 ರಂದು ಅಧ್ಯಕ್ಷ ಚುನಾವಣೆ ರಾಜೀವಿ ಆರ್ ರೈ ಆಯ್ಕೆ ಬಹುತೇಕ ಖಚಿತ. ಸುಳ್ಯ ತಾಲೂಕು ಮಹಿಳೆಯರ ವಿವಿಧೋದ್ದೇಶ ಸಹಕಾರ ಸಂಘದ ಆಡಳಿತ ಮಂಡಳಿಯ 17 ಸ್ಥಾನಗಳಿಗೂ ನಿರ್ದೇಶಕರ ಆಯ್ಕೆಯು ಕಾಂಗ್ರೆಸ್ ಬಿಜೆಪಿ ನಾಯಕರ ಹೊಂದಾಣಿಕೆಯಿಂದ ಅವಿರೋಧ ಆಯ್ಕೆ ನಡೆದಿದೆ. ಆಡಳಿತ ಮಂಡಳಿಗೆ ಜ. 21ರಂದು‌ ಚುನಾವಣೆ ನಡೆಯಬೇಕಿತ್ತು....

ಜ.21 ರಿಂದ 27ರ ತನಕ ಬೆಳ್ಳಾರೆ ಮಖಾಂ ಉರೂಸ್7ದಿನಗಳ ಧಾರ್ಮಿಕ ಮತಪ್ರಭಾಷಣ ಕಾರ್ಯಕ್ರಮ 27 ರಂದು ರಾಜ್ಯ ಮಟ್ಟದ ಧಫ್ ಸ್ಪರ್ಧೆ.

ಇತಿಹಾಸ ಪ್ರಸಿದ್ಧ ಹಝ್ರತ್ ವಲಿಯುಲ್ಲಾಹಿ ಬೆಳ್ಳಾರೆ ಮಖಾಂ ಉರೂಸ್ ಸಮಾರಂಭ ಜ.21ರಿಂದ 27ರ ತನಕ ನಡೆಯಲಿದೆ. ಉರೂಸ್ ಸಮಾರಂಭದಲ್ಲಿ ಸುಪ್ರಸಿದ್ಧ ವಿದ್ವಾಂಸರು, ಸಾದಾತುಗಳು, ಸೂಫಿವರ್ಯರು ಭಾಗವಹಿಸಲಿದ್ದಾರೆ ಎಂದು ಬೆಳ್ಳಾರೆ ಝಕರಿಯಾ ಜುಮಾ ಮಸೀದಿಯ ಆಡಳಿತ ಸಮಿತಿ ಹಾಗೂ ಉರೂಸ್ ಸ್ವಾಗತ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ನಡೆಸ ಸುದ್ದಿಗೋಷ್ಠಿಯಲ್ಲಿ ಉರೂಸ್ ಸ್ವಾಗತ ಸಮಿತಿ...

ತಡ ರಾತ್ರಿ ಮನೆಯ ಗೇಟು ಹಾರಿ ಪ್ರೇಯಸಿಯ ಭೇಟಿಯಾಗ ಬಂದೆ ಎಂದ ಪ್ರಿಯಕರ ಗ್ರಾಮಸ್ಥರ ವಶ, ಪೋಲಿಸ್ ಆಗಮನ‌, ಮಾತುಕತೆಗೆ ಸೂಚನೆ .

ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಅಡ್ಪಂಗಾಯ ಎಂಬಲ್ಲಿನ ಬಯಂಬು ಮೂಲದ ಮಹಮ್ಮದ್ ಹಾಜಿರವರ ಮನೆಯ ಗೇಟು ಹಾರಿ ವ್ಯಕ್ತಿಯೋರ್ವ ಮನೆಗೆ ಹೋದ ಘಟನೆ ವರದಿಯಾಗಿದೆ. ತಮ್ಮ ಮನೆಯ ಮಗಳನ್ನು ಮನೆಯರು ಈ ಹಿಂದೆ ಇರ್ಷಾದ್ ಎಂಬ ಯುವಕನಿಗೆ ಗೊತ್ತು ಪಡಿಸಿದ್ದರು ಎಂದು ಹೇಳಲಾಗುತ್ತಿದ್ದು ಇದೇ ಯುವಕನನ್ನ ನಂತರದ ಬೆಳವಣಿಗೆಯಲ್ಲಿ ಈ ಸಂಭಂದ ಬೇಡವೆಂದು ತೀರ್ಮಾನಿಸಿದ್ದರು ಎಂದು...

ಅಜ್ಜಾವರ ಗ್ರಾಮದ ಮೇದಿನಡ್ಕದಲ್ಲಿ ಸಂಭ್ರಮದ ಪೊಂಗಲ್ ಆಚರಣೆ

ಅಜ್ಜಾವರ ಗ್ರಾಮದ ಮೇದಿನಡ್ಕದಲ್ಲಿ ಸಂಭ್ರಮದ ಪೊಂಗಲ್ ಆಚರಣೆ ವಿಜೃಂಭಣೆಯಿಂದ ನಡೆಯಿತು, ಡಿಸೆಂಬರ್ 17 ರ ಧನು ಮಾಸ 1ರಿಂದ ಶ್ರೀ ರಾಮ ದೇವರ ಭಜನೆ ನಿರಂತರ ಒಂದು ತಿಂಗಳ ಕಾಲ ಸ್ಥಳೀಯ ಭಕ್ತಾದಿಗಳ ವ್ರತಾಚಾರಣೆಯೊಂದಿಗೆ ನಡೆದು ಮಕರ ಸಂಕ್ರಾಂತಿಯಂದು ಕೊನೆಗೊಂಡಿತು,ಜ 15 ರಂದು ವಿಜೃಂಭಣೆಯ ಪೊಂಗಲ್ ಆಚರಣೆ ಪ್ರಯುಕ್ತ ದೇವರ ಪಲ್ಲಕ್ಕಿ ಉತ್ಸವ,ಮನೆ ಭಜನಾ ಸಂಕೀರ್ತನೆ...

ಕೊಲ್ಲಮೊಗ್ರ : ಜ.16 ರಿಂದ 19 ರವರೆಗೆ ಕಟ್ಟ ಕೊಚ್ಚಿಲ ಶ್ರೀ ಮಯೂರವಾಹನ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಾರ್ಷಿಕ ಮಹೋತ್ಸವ

ಕೊಲ್ಲಮೊಗ್ರ ಕಟ್ಟ ಕೊಚ್ಚಿಲ ಶ್ರೀ ಮಯೂರವಾಹನ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಜ.16 ರಿಂದ ಜ.19 ರವರೆಗೆ ವಾರ್ಷಿಕ ಮಹೋತ್ಸವ ನಡೆಯಲಿದ್ದು, ಜ.16 ಮಂಗಳವಾರದಂದು ಬೆಳಿಗ್ಗೆ 8:00 ಗಂಟೆಯಿಂದ ಅಶ್ವತ್ಥ ಪ್ರತಿಷ್ಠಾಂಗ ಪೂರ್ವಭಾವಿ ವೈದಿಕ ಕಾರ್ಯಕ್ರಮಗಳು ಮತ್ತು ನಾಗನಲ್ಲಿ ಅನುಜ್ಞಾ ಕಲಶ ಪ್ರಾರ್ಥನೆ, ಮದ್ಯಾಹ್ನ 12:00 ಗಂಟೆಯಿಂದ ಹಸಿರುವಾಣಿ ಸಮರ್ಪಣೆ, ಸಂಜೆ 6:00 ಗಂಟೆಯಿಂದ ಪ್ರಸಾದ ಶುದ್ಧಿ, ರಾಕ್ಷೋಘ್ನ...
Loading posts...

All posts loaded

No more posts

error: Content is protected !!