ಭಾರತೀಯ ಜನತಾ ‌ಪಾರ್ಟಿಯ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿ ಪ್ರದೀಪ್ ಕೊಲ್ಲರಮೂಲೆ ಆಯ್ಕೆ

ಪ್ರದೀಪ್ ಕೊಲ್ಲರಮೂಲೆಯವರು ಭಾರತೀಯ ಜನತಾ ಪಾರ್ಟಿಯ ಸುಳ್ಯ ವಿಧಾನ ಸಭಾ ಕ್ಷೇತ್ರದ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಇವರು ಆಲೆಟ್ಟಿ ಗ್ರಾಮದ ಯುವ ಮೋರ್ಚಾದ ಅಧ್ಯಕ್ಷರಾಗಿದ್ದರು.

ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ‌ ಎಸ್.ಎನ್.ಮನ್ಮಥ ಆಯ್ಕೆ

ಹಿರಿಯ ಬಿಜೆಪಿ ಮುಖಂಡ ಎಸ್.ಎನ್.ಮನ್ಮಥರವರು ದ.ಕ ಜಿಲ್ಲಾ‌ ಕೇಂದ್ರ ಸಹಕಾರಿ ಬ್ಯಾಂಕ್‌ನ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿಯಾಗಿ  ಆಯ್ಕೆಯಾಗಿದ್ದಾರೆ. ಎಸ್‌ಸಿಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಯ ಚುನಾವಣೆಗೆ  ಮಾ.2ರಂದು  ನಾಮಪತ್ರ ಸಲ್ಲಿಸಲಿದ್ದಾರೆ ಮತ್ತು ಚುನಾವಣೆ ಮಾ.11 ರಂದು ನಡೆಯಲಿದೆ ಎಂದು ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ತಿಳಿಸಿದ್ದಾರೆ. ಮಾ.1ರಂದು ನಡೆದ ಬಿಜೆಪಿ‌ ಪ್ರಮುಖರ...
Ad Widget

ಸುಳ್ಯ ಪೊಲೀಸ್ ಠಾಣೆಗೆ ನೂತನ ಎಎಸ್ಐ ಸುಂದರ ಶೆಟ್ಟಿ ಕರ್ತವ್ಯಕ್ಕೆ ಹಾಜರು

ಸುಳ್ಯ ಪೊಲೀಸ್ ಠಾಣೆಗೆ ನೂತನ ಎಎಸ್ಐ ಆಗಿ ಸುಂದರ ಶೆಟ್ಟಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.ಮೂಲತ: ಪುತ್ತೂರು ತಾಲೂಕಿನ ನೆಲ್ಯಾಡಿ ಗ್ರಾಮದ ಇವರು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.ಪ್ರಸ್ತುತ ಎ ಎಸ್ ಐ ಆಗಿ ಭಡ್ತಿಗೊಂಡು ಸುಳ್ಯ ಠಾಣೆಗೆ ಬಂದಿರುತ್ತಾರೆ. ಇವರು ಉಡುಪಿ, ಮಂಗಳೂರು, ಬಂಟ್ವಾಳ, ಮಂಗಳೂರು ಇಂಟೆಲಿಜೆನ್ಸ್ ವಿಭಾಗದಲ್ಲಿ ಕಳೆದ 28...

ಸಂಪಾಜೆ; ಎರಡು ಬೈಕ್‌ಗಳ ನಡುವೆ ಅಪಘಾತ;  ಮೂವರಿಗೆ ಗಾಯ!

  ಸಂಪಾಜೆಯ ಮಸೀದಿ ಬಳಿ ಎರಡು ಬೈಕ್‌ಗಳ ನಡುವೆ ಅಪಘಾತ ನಡೆದ ಘಟನೆ ಮಾ.1ರಂದು  ವರದಿಯಾಗಿದೆ.ಸಂಪಾಜೆಯ ಮಸೀದಿ ಬಳಿ ಎರಡು ಬೈಕ್‌ಗಳ ನಡುವೆ ಅಪಘಾತ ನಡೆದ ಪರಿಣಾಮ ಇಬ್ಬರಿಗೆ ಗಾಯಗಳಾಗಿದ್ದು ಒಬ್ಬಾತನಿಗೆ ಗಂಭೀರ ಗಾಯಾವಾಗಿರುವುದಾಗಿ ತಿಳಿದುಬಂದಿದೆ. ಒಬ್ಬಾತ ಸ್ಥಳೀಯ ಟೀಚರ್ ಒಬ್ಬರ ಮಗ ಎನ್ನಲಾಗಿದೆ.   ಒಬ್ಬನ ಕೈಗೆ ಹಾಗೂ ಇನ್ನೊಬ್ಬ ಸವಾರನ ಕಾಲಿಗೆ ಗಾಯವಾಗಿದೆ.  ಮಿಥುನ್...

ಪಾಲಡ್ಕ : ಬಸ್ ಬೈಕ್ ಅಪಘಾತ – ಗಂಭೀರ ಗಾಯಗೊಂಡಿದ್ದ ಶಿಕ್ಷಕ ಮೃತ್ಯು

ಸುಳ್ಯ : ಪೆರಾಜೆ ಬಳಿಯ ಪಾಲಡ್ಕ ಎಂಬಲ್ಲಿ ಗೂನಡ್ಕ ಮಾರುತಿ ಶಾಲಾ ಶಿಕ್ಷಕರಾದ ಪದ್ಮನಾಭ ಕಿರ್ಲಾಯ ಎಂಬುವವರು ಖಾಸಗಿ ಬಸ್ ನ ಹಿಂಬದಿಗೆ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡು ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿತ್ತು.‌ ಆದರೆ ಇದೀಗ ಅವರು ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಅರಂತೋಡು ಗ್ರಾಮದ ಕಿರ್ಲಾಯದವರಾಗಿದ್ದು ಪ್ರಸ್ತುತ ಮೇನಾಲದಲ್ಲಿ ಜಾಗ ಖರೀದಿಸಿ ನೆಲೆಸಿದ್ದರು....

ಮಂಡೆಕೋಲು: ಶ್ರೀ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಶಾಸಕಿ ಭೇಟಿ, ಜೀರ್ಣೋದ್ಧಾರ ಕಾರ್ಯಕ್ಕೆ ಪ್ರದೇಶಾಭಿವೃದ್ಧಿ ನಿಧಿಯಿಂದ ರೂ. 5 ಲಕ್ಷ ನೀಡುವ ಭರವಸೆ

ಸುಳ್ಯ: ತಾಲೂಕಿನ ಮಂಡೆಕೋಲು ಗ್ರಾಮದ ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಹೊಸ್ತಿಲಲ್ಲಿದ್ದು ದೇವಸ್ಥಾನದ ಜೋರ್ಣೋದ್ಧಾರ ಕಾರ್ಯಗಳಿಗಾಗಿ ಪ್ರದೇಶಾಭಿವೃದ್ಧಿ ನಿಧಿಯಿಂದ ರೂ. 5 ಲಕ್ಷ ಹಾಗೂ ವೈಯಕ್ತಿಕ ದೇಣಿಗೆಯಾಗಿ ರೂ. 1 ಲಕ್ಷ ನೀಡುವುದಾಗಿ ಶಾಸಕಿ ಭಾಗೀರಥಿ ಮುರುಳ್ಯ ಭರವಸೆ ನೀಡಿದ್ದಾರೆ.ಗುರುವಾರ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದ ಬಳಿಕ ಜೀರ್ಣೋದ್ಧಾರ ಸಮಿತಿ...


ಸುಬ್ರಹ್ಮಣ್ಯ: ಬಸ್ಸಿನಿಂದ ಇಳಿಯುತ್ತಿದ್ದ ವೇಳೆ ಬಸ್ಸು ಚಲಾಯಿಸಿ, ಮಹಿಳೆಗೆ ಗಾಯ!

ಬಸ್ ನಿಂದ   ಬಿದ್ದು  ಆಸ್ಪತ್ರೆಗೆ ದಾಖಲು!ಸುಬ್ರಹ್ಮಣ್ಯ ಗ್ರಾಮದ ಬಿಲದ್ವಾರದಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ಸಿನಿಂದ ಇಳಿಯುತ್ತಿದ್ದ ವೇಳೆ ಬಸ್ಸು ಚಲಾಯಿಸಿದ ಪರಿಣಾಮ ಮಹಿಳೆಯೋರ್ವರು ಕೆಳಕ್ಕೆ ಬಿದ್ದು ಗಾಯಗೊಂಡಿರುವ ಘಟನೆ ಫೆ.27ರಂದು ನಡೆದಿದೆ.ಇವರು ತನ್ನ ಮಗಳೊಂದಿಗೆ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದವರು, ಸುಬ್ರಹ್ಮಣ್ಯ ಬಿಲದ್ವಾರದ ಬಳಿ ಬಸ್ ಇಳಿಯುತ್ತಿದ್ದಾಗ ನಿರ್ವಾಹಕ ಗಮನಿಸದೇ ಬಸ್ ಚಲಾಯಿಸಲು ಸೂಚನೆ ನೀಡಿದ್ದಾರೆ. ಈ ವೇಳೆ ಬಸ್‌...

ಪೆರಾಜೆ ಪಾಲಡ್ಕ ಬಳಿ ಬಸ್ಸಿನ ಹಿಂಬಂದಿಗೆ ಗುದ್ದಿದ ಬೈಕ್ ; ಆಸ್ಪತ್ರೆಗೆ ದಾಖಲು!

ಪೆರಾಜೆ ಬಳಿಯ ಪಾಲಡ್ಕ ಎಂಬಲ್ಲಿ ಗೂನಡ್ಕ ಶಾಲಾ ಶಿಕ್ಷಕರಾದ ಪದ್ಮನಾಭ ಎಂಬುವವರು ಖಾಸಗಿ ಬಸ್ ನ ಹಿಂಬಂದಿಗೆ ಡಿಕ್ಕಿ ಹೊಡೆದ ಪರಿಣಾಮ ಇದೀಗ ಆಸ್ಪತ್ರೆಗೆ ದಾಖಲಾದ ಘಟನೆ ವರದಿಯಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಮುಕ್ತ ರಾಷ್ಟ್ರ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಗುತ್ತಿಗಾರಿನ ಅಮರ ಯೋಗ ಕೇಂದ್ರದ ವಿದ್ಯಾರ್ಥಿಗಳಿಂದ ಸಾಧನೆ

ವರ್ಷಿಣಿ ಯೋಗ ಶಿಕ್ಷಣ ಸಾಂಸ್ಕೃತಿಕ ಕ್ರೀಡಾ ಟ್ರಸ್ಟ್ (ರಿ.) ಶಿವಮೊಗ್ಗ, ಯುವ ಜನ ಸೇವಾ ಮತ್ತು ಕ್ರೀಡಾ ಇಲಾಖೆ ಶಿವಮೊಗ್ಗ ಸಹಯೋಗದೊಂದಿಗೆ ಕರ್ನಾಟಕ ರತ್ನ ಡಾ | ಪುನೀತ್ ರಾಜ್ ಕುಮಾರ್ ಸ್ಮರಣಾರ್ಥ 6ನೇ ವರ್ಷದ ರಾಷ್ಟ್ರ ಮಟ್ಟದ ಯೋಗಾಸನ ಸ್ಪರ್ಧೆಯು ವಾಸವಿ ಪಬ್ಲಿಕ್ ಶಾಲೆ ಕೋಟೆ ರಸ್ತೆ ಶಿವಮೊಗ್ಗ ದಲ್ಲಿ 25 ಫೆಬ್ರವರಿ 2024...

ಕೊಲ್ಲಮೊಗ್ರು : ಅನಾರೋಗ್ಯದಿಂದ ಯುವಕ ಮೃತ್ಯು

ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದ ಕೊಲ್ಲಮೊಗ್ರು ಗ್ರಾಮದ ಚರಣ್ ಕುಞೇಟಿ ಎಂಬುವವರು ಫೆ.28 ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ. ಇವರು ಕೆಲವು ತಿಂಗಳುಗಳಿಂದ ಹೊಟ್ಟೆಗೆ ಸಂಬಂಧಿಸಿದ ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದರೆನ್ನಲಾಗಿದೆ.ಮೃತರಿಗೆ 29 ವರ್ಷ ವಯಸ್ಸಾಗಿದ್ದು, ಮೃತರು ತಂದೆ ಕೊಲ್ಲಮೊಗ್ರದ ಪೋಸ್ಟ್ ಮಾಸ್ಟರ್ ಚಂದ್ರಶೇಖರ, ತಾಯಿ ಕಲಾವತಿ, ಸಹೋದರ ವಚನ್ ಹಾಗೂ ಕುಟುಂಬಸ್ಥರು, ಬಂಧು-ಮಿತ್ರರನ್ನು ಅಗಲಿದ್ದಾರೆ.
Loading posts...

All posts loaded

No more posts

error: Content is protected !!