ಸಂಪಾಜೆ : ವಿಪತ್ತು ನಿರ್ವಹಣಾ ಸಮಿತಿ ಸಭೆ – ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚೆ

ಸಂಪಾಜೆ ಗ್ರಾಮ ಪಂಚಾಯತ್ ಸಭಾಭವನದಲ್ಲಿ ವಿಪತ್ತು ನಿರ್ವಹಣಾ ಸಮಿತಿ ಸಭೆ ಮೇ.14 ರಂದು ನಡೆಯಿತು.‌ ಈ ಸಭೆಯಲ್ಲಿ ಕೈಗೊಳ್ಳಬಹುದಾದ ಮುಂಜಾಗೃತ ಕ್ರಮಗಳ ಬಗ್ಗೆ ಚರ್ಚಿಸಿ, ಈ ಕೆಳಗಿನಂತೆ ಕ್ರಮ ಕೈಗೊಳ್ಳಲು ನಿರ್ಣಯಿಸಲಾಯಿತು. ಸಂಪಾಜೆ ಗ್ರಾಮದ ವಿವಿಧೆಡೆ ಇರುವ  ಅಪಾಯಕಾರಿ ಮರಗಳನ್ನು ಬುಡಸಹಿತ ತೆರವುಗೊಳಿಸಲು ಮತ್ತು ಮರದ ಕೊಂಬೆಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಅರ್ಜಿ ನೀಡುವುದೆಂದೂ...

ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟಿಗೆ ಸಹಾಯ ಧನ ಕೊಡುಗೆ

    ಸುಬ್ರಹ್ಮಣ್ಯ ಮೇ 16: ಸುಬ್ರಹ್ಮಣ್ಯದ ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟಿಗೆ ಸಮಾಜದ ಅಭಿವೃದ್ಧಿ ಕಾರ್ಯಗಳಿಗಾಗಿ ಹಾಗೂ ದೀನದಲಿತರ ಶ್ರೇಯೋ ಅಭಿವೃದ್ಧಿಗಾಗಿ  ಸುಳ್ಯ ತಾಲೂಕು ಯುವಜನ ಸಂಯುಕ್ತ ಮಂಡಳಿಯ ಪೂರ್ವ ಅಧ್ಯಕ್ಷ ಶಿವಪ್ರಕಾಶ್ ಕಡಪಳ ಅಡ್ಡನಪಾರೆ ಅವರು ಸಹಾಯಧನವನ್ನು ನೀಡಿದ ಅಂಗವಾಗಿ ಈ ಸಂದರ್ಭದಲ್ಲಿ ಅವರನ್ನು ಗೌರವಿಸಲಾಯಿತು.           ರವಿ ಕಕ್ಕೆಪದಾವು ಸಮಾಜ ಸೇವಾ...
Ad Widget

ಜಯನಗರ : ನಿರಂತರ ಪೋಲಾಗುತ್ತಿರುವ ಕುಡಿಯುವ ನೀರು – ಶೀಘ್ರ ಸರಿಪಡಿಸಲು ನಾಗರಿಕರ ಒತ್ತಾಯ

ಹಳೆಗೇಟಿನಿಂದ ಜಯನಗರ ಸಂಪರ್ಕಿಸುವ ರಸ್ತೆಯಲ್ಲಿ ನೀರಿನ ಪೈಪ್ ಒಡೆದು ರಸ್ತೆಯಲ್ಲಿ ಮತ್ತು  ಪಕ್ಕದ ಚರಂಡಿಯಲ್ಲಿ  ಪ್ರತಿನಿತ್ಯ ನಿರಂತರವಾಗಿ ನೀರು ಹರಿದು ಪೋಲಾಗುತ್ತಿದೆ.‌  ಹಲವಾರು ದಿನಗಳಿಂದಿರುವ ಸಮಸ್ಯೆ ಬಗ್ಗೆ ಸಂಬಂಧಪಟ್ಟ ಇಲಾಖೆಯವರು ಗಮನ ಹರಿಸಿ ನೀರು ಪೋಲಾಗುವುದನ್ನು ಶೀಘ್ರ  ತಡೆಯಬೇಕೆಂದು ನಿವಾಸಿಗಳು ಆಗ್ರಹಿಸಿದ್ದಾರೆ.

ಸುಳ್ಯ : ಸಂಭ್ರಮ ಎಲೆಕ್ಟ್ರಾನಿಕ್ಸ್ ಶುಭಾರಂಭ

ಸುಳ್ಯ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ಕಾಮತ್ ಬಿಲ್ಡಿಂಗ್ ನಲ್ಲಿ ರೋಹಿತ್ ಅಬೀರ ಮಾಲಕತ್ವದಲ್ಲಿ ಸಂಭ್ರಮ ಇಲೆಕ್ಟ್ರಾನಿಕ್ಸ್  ಮೇ.16ರಂದು ಶುಭಾರಂಭಗೊಂಡಿತು. ಉದ್ಘಾಟನೆಯನ್ನು ನೂತನ ಸಂಸ್ಥೆಯನ್ನು ಸುಳ್ಯದ ವರ್ತಕರ ಸಂಘದ ಅಧ್ಯಕ್ಷರಾದ ಪಿ.ಬಿ.ಸುಧಾಕರ ರೈ ನೆರವೇರಿಸಿ ಶುಭ ಹಾರೈಸಿದರು. ಕಾಮತ್ ಬಿಲ್ಡಿಂಗ್ ನ ಮಾಲಕರಾದ ಕೆ.ಬಿ.ಕಾಮತ್ ಅತಿಥಿಯಾಗಿದ್ದರು.ಈ ಸಂದರ್ಭದಲ್ಲಿ ಧನಂಜಯ ಅಬೀರ, ಶ್ರೀಮತಿ ರಾಜೇಶ್ವರಿ ಅಬೀರ,...

ಕಳಂಜ ಸಹಕಾರಿ ಸಂಘದ ಉದ್ಯೋಗಿ ಭಾಸ್ಕರ ಶೇಣಿ ನಿಧನ

ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಕೋಟೆ ಮುಂಡುಗಾರು ಶಾಖೆಯ ಜಿನಸು ವಿಭಾಗದಲ್ಲಿ ಉದ್ಯೋಗಿಯಾಗಿದ್ದ ಭಾಸ್ಜರ ಶೇಣಿ ಮೇ.16ರಂದು ಮುಂಜಾನೆ ಅಸೌಖ್ಯದಿಂದ ನಿಧನರಾದರು. ಕಳಂಜ ಯುವಕ ಮಂಡಲದಲ್ಲಿ ಸದಸ್ಯರಾಗಿ, ಕಾರ್ಯದರ್ಶಿಯಾಗಿ, ಕೋಟೆ ಮುಂಡುಗಾರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುವುದರ ಜೊತೆಗೆ ಕಳಂಜ ಗ್ರಾಮದ ವಿವಿಧ ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ಸಕ್ರೀಯವಾಗಿ ತೊಡಗಿಸಿಕೊಳ್ಳುತ್ತಿದ್ದರು. ಇವರಿಗೆ 48...

ರಾಷ್ಟ್ರೀಯ ಡೆಂಗ್ಯೂ ಜಾಗ್ರತಿ ದಿನ…ಮೇ 16

ಪ್ರತಿ ವರ್ಷ ಮೇ 16 ರಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ವತಿಯಿಂದ ರಾಷ್ಟ್ರೀಯ ಡೆಂಗ್ಯೂ ಜಾಗ್ರತಿ ದಿನ ಎಂದು ಆಚರಿಸಲಾಗುತ್ತದೆ ಮತ್ತು ಡೆಂಗ್ಯೂ ರೋಗದ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ . 2023 ರ ಆಚರಣೆಯ ಘೋಷ ವಾಕ್ಯ ಎಲ್ಲರ ಸಹಭಾಗಿತ್ವ ದಿಂದ ಡೆಂಗ್ಯೂ ಸೋಲಿಸೋಣ ಎಂಬುದಾಗಿದೆ.ಏನಿದು ಡೆಂಗ್ಯೂ ಜ್ವರ?ಡೆಂಗ್ಯೂ...

ಟಿ.ಎಂ ಶಹೀದ್ ತೆಕ್ಕಿಲ್ ರವರಿಗೆ ಸಾರ್ವಜನಿಕ ಸನ್ಮಾನ, ಅಭಿನಂದನಾ ಸಮಿತಿ ರಚನೆ, ಅಧ್ಯಕ್ಷರಾಗಿ ಸದಾನಂದ ಮಾವಜಿ ಆಯ್ಕೆ

ಸಾಮಾಜಿಕ, ರಾಜಕೀಯ, ಶೈಕ್ಷಣಿಕ, ಧಾರ್ಮಿಕ, ಸಹಕಾರಿ ಉಧ್ಯಮ, ಕೃಷಿ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಕಳೆದಮೂರುವರೆ ದಶಕಗಳಿಂದ ಕ್ರೀಯಾಶೀಲರಾಗಿರುವ, ಜಾತಿ ಮತ ಬೇದವಿಲ್ಲದೆ ಅಪಾರ ಅಭಿಮಾನಿಗಳನ್ನುಹೊಂದಿರುವ ಟಿ.ಎಂ ಶಹೀದ್ ತೆಕ್ಕಿಲ್ ಇವರಿಗೆ ಸಾರ್ವಜನಿಕ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಮೇ. 15ರಂದು ಸುಳ್ಯದ ಸಹನಾ ಆರ್ಕೆಡ್ ನಲ್ಲಿ ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿಯವರ ಅಧ್ಯಕ್ಷತೆಯಲ್ಲಿಪೂರ್ವಭಾವಿ ಸಭೆ ನಡೆಯಿತು.ಸಭೆಯಲ್ಲಿ...

ಬೆಳ್ಳಾರೆ ಜ್ಞಾನದೀಪದಲ್ಲಿ ನವೋದಯ ಬೇಸಿಗೆ ತರಬೇತಿ ಶಿಬಿರ ಸಮಾರೋಪ

2024-25ನೇ ಸಾಲಿನಲ್ಲಿ ನವೋದಯ ಪ್ರವೇಶ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಬೇಸಿಗೆ ರಜಾ ಅವಧಿಯ ಒಂದು ತಿಂಗಳ ನವೋದಯ ತರಬೇತಿ ಶಿಬಿರ ಬೆಳ್ಳಾರೆಯ ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆಯಲ್ಲಿ ನಡೆಯಿತು. ಏ. 15ರಿಂದ ಮೇ.15ರವರೆಗೆ ನಡೆದ ತರಬೇತಿಯಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಸಂಪನ್ಮೂಲ ವ್ಯಕ್ತಿಗಳಿಂದ ಸ್ಪರ್ಧಾತ್ಮಕ ಪರೀಕ್ಷೆಯ ಬಗ್ಗೆ ತರಗತಿಗಳನ್ನು ನಡೆಸಲಾಯಿತು. ಸಮಾರೋಪ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಕಾವು ಬುಶ್ರಾ...

ಬೆಳ್ಳಾರೆ ಜ್ಞಾನದೀಪದಲ್ಲಿ ನವೋದಯ ಬೇಸಿಗೆ ತರಬೇತಿ ಶಿಬಿರ ಸಮಾರೋಪ

2024-25ನೇ ಸಾಲಿನಲ್ಲಿ ನವೋದಯ ಪ್ರವೇಶ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಬೇಸಿಗೆ ರಜಾ ಅವಧಿಯ ಒಂದು ತಿಂಗಳ ನವೋದಯ ತರಬೇತಿ ಶಿಬಿರ ಬೆಳ್ಳಾರೆಯ ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆಯಲ್ಲಿ ನಡೆಯಿತು. ಏಪ್ರಿಲ್ 15ರಿಂದ ಮೇ.15ರವರೆಗೆ ನಡೆದ ತರಬೇತಿಯಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಸಂಪನ್ಮೂಲ ವ್ಯಕ್ತಿಗಳಿಂದ ಸ್ಪರ್ಧಾತ್ಮಕ ಪರೀಕ್ಷೆಯ ಬಗ್ಗೆ ತರಗತಿಗಳನ್ನು ನಡೆಸಲಾಯಿತು. ಸಮಾರೋಪ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಕಾವು ಬುಶ್ರಾ...

ಕುರುಂಜಿ ಕುಟುಂಬದ ಹಿರಿಯರಾದ ಕುರುಂಜಿ ಪದ್ಮಯ್ಯ ಗೌಡ ನಿಧನ

ಕುರುಂಜಿ ಕುಟುಂಬದ ಹಿರಿಯರಾದ ಕುರುಂಜಿ ಪದ್ಮಯ್ಯ ಗೌಡ ಅಲ್ಪಕಾಲದ ಅಸೌಖ್ಯದಿಂದ ನಿನ್ನೆ ರಾತ್ರಿ ( ಮೇ. 15 ) ನಿಧನರಾದರು.ಅರಂತೋಡುನ ಬಿಳಿಯಾರಿನಲ್ಲಿ ವಾಸವಾಗಿದ್ದ ಅವರಿಗೆ 86 ವರ್ಷ ವಯಸ್ಸಾಗಿತ್ತು.ಮೃತರು ಪುತ್ರ ಕುಸುಮಾಧರ, ಪುತ್ರಿಯರಾದ ಪ್ರೇಮಲತಾ, ವಸಂತಿ, ಸುಲೋಚನ, ಡಾ. ಅನುರಾಧಾ ಕುರುಂಜಿ, ಸೊಸೆ, ಅಳಿಯಂದಿರು, ಮೊಮ್ಮಕ್ಕಳು, ಕುಟುಂಬಸ್ಧರು, ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
Loading posts...

All posts loaded

No more posts

error: Content is protected !!