ಸುಳ್ಯ ತಾಲೂಕು ಗ್ಯಾರೇಜ್ ಮ್ಹಾಲಕರ ಸಂಘದ ನವೀಕೃತ ಸಮುದಾಯ ಭವನದ ಉದ್ಘಾಟನೆ – ವಿದ್ಯಾರ್ಥಿ ವೇತನ ವಿತರಣೆ – ಸನ್ಮಾನ

ಸುಳ್ಯ ತಾಲೂಕು ಗ್ಯಾರೇಜ್ ಮ್ಹಾಲಕರ ಸಂಘದ ವತಿಯಿಂದ ಸುಳ್ಯದ ವಿಷ್ಣುಸರ್ಕಲ್ ಬಳಿಯಲ್ಲಿ  ನವೀಕೃತಗೊಂಡ ಸಮುದಾಯ ಭವನದ ಉದ್ಘಾಟನೆ, 27ನೇ ವಾರ್ಷಿಕ ಮಹಾಸಭೆ ಹಾಗೂ ಆರೋಗ್ಯ ಮಾಹಿತಿ ಕಾರ್ಯಕ್ರಮವು ಮೇ.31ರಂದು ನಡೆಯಿತು. ನವೀಕೃತ ಸಮುದಾಯ ಭವನ ಕಟ್ಟಡವನ್ನು ಪದ್ಮಶ್ರೀ ಪುರಸ್ಕೃತರಾದ ಡಾ. ಗಿರೀಶ್ ಭಾರದ್ವಾಜ್ ಅವರು ಉದ್ಘಾಟಿಸಿ ಶುಭಹಾರೈಸಿದರು.ಸುಳ್ಯ ತಾಲೂಕು ಗ್ಯಾರೇಜ್ ಮ್ಹಾಲಕರ ಸಂಘದ ಅಧ್ಯಕ್ಷ ಎಂ....

ಉರುಂಡೆ ನಾರಾಯಣ ಗೌಡ ನಿಧನ

ಉಬರಡ್ಕ ಮಿತ್ತೂರು ಗ್ರಾಮದ ಉರುಂಡೆ ನಾರಾಯಣ ಗೌಡರು ಮೇ 30 ರಂದು ಅಲ್ಪಕಾಲ ಅಸೌಖ್ಯ ದಿಂದ ಸ್ವಗೃಹದಲ್ಲಿ ನಿಧನರಾದರು.ಅವರಿಗೆ 80 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಸೀತಮ್ಮ, ಪುತ್ರ ವಸಂತ, ಪುತ್ರಿಯರಾದ ದಮಯಂತಿ ಮತ್ತು ಗಿರಿಜಾ, ಸೊಸೆ ನಳಿನಿ ಹಾಗೂ ಮೊಮ್ಮಮ್ಮಕ್ಕಳನ್ನು ಅಗಲಿದ್ದಾರೆ..
Ad Widget

ಗುತ್ತಿಗಾರು : ಸೇವಾ ನಿವೃತ್ತಿಗೊಂಡ ಆಶಾ ಕಾರ್ಯಕರ್ತೆಯರಾದ ಸರಸ್ವತಿ ಹಾಗೂ ದೇವಮ್ಮರಿಗೆ ಬೀಳ್ಕೊಡುಗೆ

ಗುತ್ತಿಗಾರು ಪ್ರಾ. ಆರೋಗ್ಯ ಕೇಂದ್ರದಲ್ಲಿ ಹಲವಾರು ವರ್ಷಗಳಿಂದ ಆಶಾ ಕಾರ್ಯಕರ್ತೆಯರಾಗಿ ಸೇವೆ ಸಲ್ಲಿಸಿ ಸೇವಾ ನಿವೃತ್ತಿಗೊಳ್ಳುತ್ತಿರುವ ಸರಸ್ವತಿ ಕಾಜಿಮಡ್ಕ ಹಾಗೂ ದೇವಮ್ಮರಿಗೆ ಬೀಳ್ಕೋಡುಗೆ ಕಾರ್ಯಕ್ರಮ ಮೇ 30 ರಂದು ನಡೆಯಿತು. ಈ ಸಂದರ್ಭದಲ್ಲಿ ವೈದ್ಯಾಧಿಕಾರಿ ಡಾ.ಅಮಿಷಾ ಬಿ.ಸೋಮಯಾಗಿ ಸಿಬ್ಬಂದಿಗಳು ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

ದ್ವಾದಶ ರಾಶಿಗಳ ದಿನ ಭವಿಷ್ಯ

ಜ್ಯೋತಿಷ್ಯರು : ಪ್ರವೀಣ್ ಶಿಬರೂರಾಯ, ಮಂಡೆಕೋಲು, ಸುಳ್ಯ ಮೊ: 9591969197 ದಿನಾಂಕ:31-05-2026 ಭಾನುವಾರ *01,🐏ಮೇಷರಾಶಿ🐏*📃,ಇಂದು ನೀವು ಹಣ ಸಂಪಾದಿಸಲು ಅನೇಕ ಅವಕಾಶಗಳನ್ನು ಹಾಗು ಒಂದಕ್ಕಿಂತ ಹೆಚ್ಚು ಮೂಲಗಳಿಂದ ಹಣವನ್ನು ಪಡೆಯುತ್ತೀರಿ. ಕೆಲಸದ ಸ್ಥಳದಲ್ಲಿ ಬರುವ ತೊಂದರೆಗಳಿಂದ ಸ್ವಲ್ಪ ಮುಕ್ತರಾಗುತ್ತೀರಿ ಮತ್ತು ಕೆಲಸವೂ ಚೆನ್ನಾಗಿ ನಡೆಯುತ್ತದೆ. ಆದಾಯದ ವಿವಿಧ ಮೂಲಗಳನ್ನು ಪಡೆಯುವ ಮೂಲಕ, ನಿಮ್ಮ ಕೆಲವು ಸ್ಥಗಿತಗೊಂಡ...

ಎಸ್. ಎಸ್.ಎಲ್.ಸಿ ಮರು ಮೌಲ್ಯಮಾಪನ, ಮರು ಪರೀಕ್ಷೆಯಲ್ಲಿ ಕುಮಾರಸ್ವಾಮಿ ವಿದ್ಯಾಲಯದ ವಿದ್ಯಾರ್ಥಿನಿ ಸುಶ್ಮಿತಾ ಗೆ ಒಟ್ಟು 624 ಅಂಕ – ರಾಜ್ಯಕ್ಕೆ ದ್ವಿತೀಯ ರ‍್ಯಾಂಕ್ – ಅಂತಿಮ ಮಾರ್ಕ್ಸ್ ಲಿಸ್ಟ್ ನಲ್ಲಿ ಶಿಕ್ಷಣ ಇಲಾಖೆಯಿಂದ ಮತ್ತೆ ಪ್ರಮಾದ…!

ಎಸ್.ಎಸ್.ಎಲ್.ಸಿ‌ ಮರು ಮೌಲ್ಯ ಮಾಪನ ಮತ್ತು ಮರು ಪರೀಕ್ಷೆಯಲ್ಲಿ ಅಧಿಕ ಅಂಕ ಪಡೆಯುವ ಮೂಲಕ ಕುಕ್ಕೆ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ ವಿದ್ಯಾರ್ಥಿನಿ ಸುಶ್ಮಿತಾ 624 ಅಂಕಗಳೊಂದಿಗೆ ರಾಜ್ಯಕ್ಕೆ ದ್ವಿತೀಯ ಸ್ಥಾನಿಯಾಗಿದ್ದಾರೆ. ಆ ಮೂಲಕ ಗ್ರಾಮೀಣ ಭಾಗದ ವಿದ್ಯಾರ್ಥಿನಿಯೊಬ್ಬಳು ಗ್ರಾಮೀಣ ಭಾಗದ ಶಾಲೆಯಲ್ಲಿ ಓದಿ ಉತ್ತಮ ಸಾಧನೆ ಮಾಡಿದ್ದಾರೆ‌. ಆರಂಭದಲ್ಲಿ ಸುಶ್ಮಿತಾ ಒಟ್ಟು 613 ಅಂಕ ಪಡೆದಿದ್ದರು. ಸಮಾಜ...

ಮೇ 31 : ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನ ಜವಾನರಾದ ಚಂದ್ರಶೇಖರ.ಎನ್ ಸೇವಾ ನಿವೃತ್ತಿ

ಅರಂತೋಡು : ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನ ಜವಾನರಾದ ಚಂದ್ರಶೇಖರ.ಎನ್ ಅವರು ಮೇ 31, 2026 ರಂದು ಸೇವಾ ನಿವೃತ್ತಿ ಹೊಂದಲಿದ್ದಾರೆ. ಇವರು 01-09-1986 ರಂದು ಕರ್ತವ್ಯಕ್ಕೆ ಸೇರ್ಪಡೆಗೊಂಡು, 06-01-1998ರಿಂದ ಅನುದಾನಿತ ನೌಕರರಾಗಿ ಕಾರ್ಯನಿರ್ವಹಿಸುತ್ತಿದ್ದು, ಸುದೀರ್ಘ 39 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಅರಂತೋಡು ಸಮೀಪದ ನೆಕ್ಕರೆ ಶಿವಪ್ಪ.ಎನ್ ಹಾಗೂ ಪೂವಮ್ಮ ದಂಪತಿಗಳ ಪುತ್ರರಾದ...

ಕುಕ್ಕೆ ಸುಬ್ರಹ್ಮಣ್ಯ : ಎಸ್.ಎಸ್.ಪಿ.ಯು ಕಾಲೇಜಿನಲ್ಲಿ ನಿವೃತ್ತರಾದ ಗ್ರಂಥಪಾಲಕರಿಗೆ ಪುಷ್ಪಾರ್ಚನೆಯ ಸ್ವಾಗತ

ಸುಬ್ರಹ್ಮಣ್ಯ : ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತದ ಎಸ್.ಎಸ್.ಪಿ.ಯು ಕಾಲೇಜಿನಲ್ಲಿ ಸುಮಾರು 26 ವರ್ಷಗಳ ಕಾಲ ಗ್ರಂಥಪಾಲಕರಾಗಿ ಸೇವೆ ಸಲ್ಲಿಸಿದ್ದ ಬಾಬು.ಎಚ್ ಹಾಸನಡ್ಕ ಅವರು ಶನಿವಾರ ಸೇವಾ ನಿವೃತ್ತಿ ಹೊಂದಿದರು. ಅವರು ಶನಿವಾರ ಕಾಲೇಜಿಗೆ ಆಗಮಿಸುವಾಗ ವಿದ್ಯಾರ್ಥಿಗಳು ಪುಷ್ಪಾರ್ಚನೆ ಮೂಲಕ ಅವರನ್ನು ಬರಮಾಡಿಕೊಂಡರು.ಸ್ವಾಗತ : ತಮ್ಮ ಸೇವಾವಧಿಯ ಅಂತಿಮ ದಿನ ವಿದ್ಯಾಸಂಸ್ಥೆಗೆ ಗ್ರಂಥಪಾಲಕರು...

“ಮಾರುಕಟ್ಟೆ ರೌಂಡ್ ಅಪ್” – ಸೋಮವಾರ ಮೇ.25 ರಿಂದ ಶನಿವಾರ ಮೇ.30 ರವರೆಗಿನ “ಕ್ಯಾಂಪ್ಕೋ ಮಾರುಕಟ್ಟೆ ಧಾರಣೆ”ಯ ಒಂದು ಸಮಗ್ರ ನೋಟ – ರಬ್ಬರ್-ಕಾಳುಮೆಣಸು ಭರ್ಜರಿ ಜಿಗಿತ ; ಕೊಬ್ಬರಿ ಬೆಲೆಯಲ್ಲಿ ಭಾರಿ ಕುಸಿತ, ಅಡಿಕೆ ಸಂಪೂರ್ಣ ಸ್ಥಿರ..!

ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ನಾವು ಪ್ರತೀದಿನವೂ ಕೂಡ “ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)” ಇವರಿಂದ ಪ್ರಮುಖ ಕೃಷಿ ಉತ್ಪನ್ನಗಳ ದಿನನಿತ್ಯದ ಮಾರುಕಟ್ಟೆ ಧಾರಣೆಯ ವಿವರಗಳನ್ನು ಪಡೆದುಕೊಂಡು ನಮ್ಮ “ಅಮರ ಸುಳ್ಯ ಸುದ್ದಿ ವಾರಪತ್ರಿಕೆ”ಯ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತಾ ಬರುತ್ತಿದ್ದೇವೆ. ಈ ವಾರ ಅಂದರೆ ಮೇ.25 ಸೋಮವಾರದಿಂದ ಮೇ.30 ಶನಿವಾರದವರೆಗೆ ಕ್ಯಾಂಪ್ಕೋ...

ಪರಿವಾರಕಾನದಲ್ಲಿ ಕಸ ಎಸೆದ ವ್ಯಕ್ತಿಗೆ ರೂ.3000 ದಂಡ ವಿಧಿಸಿದ ಪಂಚಾಯತ್

ಅಲೆಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ 275ರ ಪರಿವಾರ ಕಾನದಲ್ಲಿ ತ್ಯಾಜ್ಯ ಎಸೆದವರಿಗೆ ಗ್ರಾಮ ಪಂಚಾಯತಿ ವತಿಯಿಂದ 3000 ರೂಪಾಯಿ ದಂಡನೆ ವಿಧಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಎಸೆದ ತ್ಯಾಜ್ಯಗಳನ್ನು ಪರಿಶೀಲಿಸಿದಾಗ ಲಭ್ಯವಾದ ವಿಳಾಸದಂತೆ ದಂಡ ಪಾವತಿಸುವಂತೆ ತಿಳಿಸಲಾಯಿತು. ಇದಕ್ಕೆ ಸಹಕರಿಸದಿದ್ದಾಗ ಸುಳ್ಳದ ಪೋಲೀಸ್ ಸಬ್ಇನ್ ಸ್ಪೆಕ್ಟರ್ ಸಂತೋಷ್ ಕುಮಾರ್ ರವರ ಸಹಕಾರದೊಂದಿಗೆ ದಂಡನೆಯನ್ನು...

ಚೆನ್ನಾವರ ಸೇಸಪ್ಪ ಮಡಿವಾಳರಿಗೆ ಶ್ರದ್ಧಾಂಜಲಿ ಸಭೆ

ಸವಣೂರು: ಇತ್ತೀಚೆಗೆ ನಿಧನರಾದ ಚೆನ್ನಾವರದ ಸೇಸಪ್ಪ ಮಡಿವಾಳ ಅವರಿಗೆ ಶ್ರದ್ದಾಂಜಲಿ ಸಭೆ ಮೇ.29ರಂದು ಅವರ ಮನೆಯಲ್ಲಿ ನಡೆಯಿತು. ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಸುಳ್ಯ ಮಂಡಲ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಇಂದಿರಾ ಬಿ.ಕೆ, ಪ್ರಮುಖರಾದ ಉಮೇಶ್ ಗೌಡ ಕೂರೋಡಿ, ದೀಕ್ಷಿತ್ ಜೈನ್, ದೀಪಕ್‌ ರೈ ಪೆರುವಾಜೆ, ಸಂಜೀವ ಗೌಡ, ಸಂತೋಷ್ ಕುಮಾರ್ ರೈ...
Loading posts...

All posts loaded

No more posts

error: Content is protected !!