ಸುಳ್ಯ: ಜು. 18ರಂದು ಉಚಿತ ಬಂಜೆತನ ಸಮಾಲೋಚನೆ ಹಾಗೂ ಫಲವತ್ತತೆ ಪರಿಶೀಲನೆ ಶಿಬಿರ

ಸೂಂತೋಡು ಡೆಂಟಲ್ ಕೇರ್ ಹಾಗೂ ಐವಿಎಫ್ ಆಕ್ಸೆಸ್ ವತಿಯಿಂದ ಜು. 18ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಸುಳ್ಯದಲ್ಲಿ ಉಚಿತ ಬಂಜೆತನ ಸಮಾಲೋಚನೆ ಹಾಗೂ ಫಲವತ್ತತೆ ಪರಿಶೀಲನೆ ಶಿಬಿರ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

. . . . . . . . .

ಶಿಬಿರವು ಸುಳ್ಯದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ಎದುರುಗಡೆಯಿರುವ ಸೂಂತೋಡು ಎಂಪೋರಿಯಂನ ಮೊದಲ ಮಹಡಿಯಲ್ಲಿರುವ ಸೂಂತೋಡು ಡೆಂಟಲ್ ಕೇರ್‌ನಲ್ಲಿ ಬಂಜೆತನ ತಜ್ಞ ಡಾ. ಮನಿತ ಮಾದರ್ (MERS, DNB (OBG), FMAS, DMAS, FRM (RGUHS), MRCOG) ಅವರು ಭಾಗವಹಿಸಿ ದಂಪತಿಗಳಿಗೆ ಉಚಿತ ಸಮಾಲೋಚನೆ ಹಾಗೂ ಫಲವತ್ತತೆ ಸಂಬಂಧಿತ ತಪಾಸಣೆ ನಡೆಸಲಿದ್ದಾರೆ.

. . . . . . .

ಈ ಸಂದರ್ಭದಲ್ಲಿ ಚಿಕಿತ್ಸಾ ಪೂರ್ವ ಪರಿಶೀಲನೆ, ಐಯುಐ, ಐವಿಎಫ್, ಅಲ್ಟ್ರಾಸೌಂಡ್ ಹಾಗೂ ಭ್ರೂಣ ಘನೀಕರಿಸುವಿಕೆ ಸೇರಿದಂತೆ ವಿವಿಧ ಚಿಕಿತ್ಸೆ ಮತ್ತು ಸೌಲಭ್ಯಗಳ ಕುರಿತು ಮಾಹಿತಿ ನೀಡಲಾಗುವುದು. ಮೊದಲ ಸ್ಕ್ಯಾನಿಂಗ್, ವೀರ್ಯ ವಿಶ್ಲೇಷಣೆ ಹಾಗೂ ಸಮಾಲೋಚನೆ ಉಚಿತವಾಗಿದ್ದು, ಮುಂದಿನ ಚಿಕಿತ್ಸೆಗಾಗಿ ರೂ. 500 ಮೌಲ್ಯದ ಕೂಪನ್ ಪಡೆಯುವ ಅವಕಾಶವೂ ಇರುತ್ತದೆ. ಶಿಬಿರಕ್ಕೆ ಆಗಮಿಸುವ ದಂಪತಿಗಳು ಸರ್ಕಾರದಿಂದ ಅನುಮೋದಿತ ಗುರುತಿನ ಚೀಟಿ ಹಾಗೂ ಹಿಂದಿನ ವೈದ್ಯಕೀಯ ವರದಿಗಳು ತರಬೇಕು.

ಹೆಚ್ಚಿನ ಮಾಹಿತಿಗಾಗಿ 96119 54131 ಸಂಖ್ಯೆಗೆ ಕರೆ ಅಥವಾ ವಾಟ್ಸಾಪ್ ಮೂಲಕ ಸಂಪರ್ಕಿಸಬಹುದಾಗಿದೆ. ಸಹಕಾರ ಸೂಂತೋಡು ಡೆಂಟಲ್ ಕೇರ್‌ನ ಡಾ. ರೇವಂತ್ ಸೂಂತೋಡು (MDS) ಹಾಗೂ ಡಾ. ಶ್ರಮಿಕ (BDS).


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading