- Tuesday
- August 25th, 2026
ಪ್ರಧಾನಿ ಮೋದಿಯವರ ಆಲೋಚನೆಯಾದ ಆತ್ಮನಿರ್ಭರ ಭಾರತ ಪರಿಕಲ್ಪನೆಗೆ ಪೂರಕವಾಗಿ ಪಂಜದ ಸುತ್ತ ಮುತ್ತಲಿನ ಜನರಿಗೆ ಸಹಕಾರಿಯಾಗಲೆನ್ನುವ ಉದ್ದೇಶದಿಂದ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನ ದ ವಠಾರದಲ್ಲಿ ಉದ್ಯೋಗ ನೈಪುಣ್ಯ ತರಬೇತಿ ಶಿಬಿರ ಅ.12 ರಿಂದ 17 ರ ವರೆಗೆ ನಡೆಯಲಿದೆ. ಒಬ್ಬ ವ್ಯಕ್ತಿಗೆ ಒಂದು ವಿಷಯದ ಬಗ್ಗೆ ಮಾತ್ರ ತರಬೇತಿ ಪಡೆದುಕೊಳ್ಳಲು ಅವಕಾಶ. ತರಬೇತಿ...
ಕಳಂಜ ಗ್ರಾಮಸ್ಥರಿಗಾಗಿ ವಿಶೇಷ ಕೋವಿಡ್ ತಪಾಸಣೆಯನ್ನು ಕಳಂಜ ವಿಷ್ಣುನಗರದ ಅಕ್ಷರ ಕರಾವಳಿ ಕಟ್ಟಡದಲ್ಲಿ ಅ. 02 ರಂದು ನಡೆಸಲಾಯಿತು. ಸ್ವಯಂಪ್ರೇರಿತರಾಗಿ 43 ಜನ ತಪಾಸಣೆಗೆ ಒಳಗಾಗಿದ್ದು ಎಲ್ಲರ ವರದಿ ನೆಗೆಟಿವ್ ಬಂದಿರುವುದಾಗಿ ತಿಳಿದುಬಂದಿದೆ.
ಕಲ್ಲುಗುಂಡಿಯ ಗೂನಡ್ಕ ಬಳಿ ಬೈಕೊಂದಕ್ಕೆ ಡಿಕ್ಕಿ ಹೊಡೆದು ಪರಾರಿಯಾಗಲು ಯತ್ನಿಸಿದ ಕಾರ್ ಒಂದನ್ನು ಮರ್ಕಂಜದಲ್ಲಿ ಲಕ್ಷ್ಮೀಶ್ ಪಾಲ್ತಾಡು ತಡೆಹಿಡಿದು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಇಂದು ನಡೆದಿದೆ. ಇದಕ್ಕೆ ಅರಂತೋಡಿನ ರಿಕ್ಷಾ ಚಾಲಕ ಮಾಲಕರಾದ ವಿಜಯಕುಮಾರ್ ನಾಯ್ಕ್ ಮತ್ತು ಮುರಳೀಧರ ಸೂoತೋಡು ಸಹಕರಿಸಿದ್ದಾರೆ. ಬೈಕ್ ಸವಾರನಿಗೆ ಗಂಭೀರ ಗಾಯವಾಗಿದ್ದು ಸುಳ್ಯದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಜಿಲ್ಲಾ ಪಂಚಾಯತ್ ಕೊಡಗು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಡಿಕೇರಿ ಕೊಡಗು, ಕೊಡಗು ವೈದ್ಯಕೀಯ ವಿಜ್ಞಾನಿಗಳ ಸಂಸ್ಥೆ, ರಕ್ತನಿಧಿ ಕೇಂದ್ರ ಜಿಲ್ಲಾ ಆಸ್ಪತ್ರೆ ಮಡಿಕೇರಿ ಕೊಡಗು, ಪ್ರಾಥಮಿಕ ಆರೋಗ್ಯ ಕೇಂದ್ರ ಸಂಪಾಜೆ ಕೊಡಗು, ಗ್ರಾಮ ಪಂಚಾಯತ್ ಸಂಪಾಜೆ, ಪೆರಾಜೆ, ಚೆಂಬು, ಮದೆನಾಡು, ಪಯಸ್ವಿನಿ ಸಹಕಾರಿ ಸಂಘ ಸಂಪಾಜೆ ಹಾಗೂ ಸಾರ್ವಜನಿಕ ಸಹಭಾಗಿತ್ವದೊಂದಿಗೆ ಶ್ರೀ ಬಾಲಚಂದ್ರ...
ಗಾಂಧಿ ಜಯಂತಿ ಅಂಗವಾಗಿ ಕಳಂಜ ಗ್ರಾ.ಪಂ.ನಲ್ಲಿ ವಿಶೇಷ ಗ್ರಾಮಸಭೆ ಅ.02 ರಂದು ನಡೆಯಿತು. ಗ್ರಾ.ಪಂ. ಮಾಜಿ ಅಧ್ಯಕ್ಷೆ ಶ್ರೀಮತಿ ಯಶೋಧ ಮಣಿಮಜಲು ಗ್ರಾಮಸಭೆಯನ್ನು ಉದ್ಘಾಟಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಧರ್.ಕೆ.ಆರ್ ಸ್ವಾಗತಿಸಿದರು. ನಂತರ ಅವರು ಉದ್ಯೋಗ ಖಾತ್ರಿ ಯೋಜನೆಯ ಬಗ್ಗೆ ವಿವರ ನೀಡಿ, ಸ್ವಚ್ಛತಾ ಪ್ರತಿಜ್ಞೆ ಬೋಧಿಸಿದರು. ಗ್ರಾ.ಪಂ. ಕಾರ್ಯದರ್ಶಿ ಪದ್ಮಯ್ಯ.ಕೆ, ಗ್ರಾ.ಪಂ. ಮಾಜಿ ಸದಸ್ಯ...
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕಲ್ಪನೆಯ ಆತ್ಮನಿರ್ಭರ ಭಾರತಕ್ಕಾಗಿ ಉದ್ಯೋಗ ನೈಪುಣ್ಯ ತರಬೇತಿ ಶಿಬಿರವು ಜಾಲ್ಸೂರು ಗ್ರಾಮದ ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ವಠಾರದಲ್ಲಿ ಅ.11ರಿಂದ 16ರವರೆಗೆ ಜರುಗಲಿದೆ.ಆತ್ಮನಿರ್ಭರ ಭಾರತಕ್ಕಾಗಿ ಉದ್ಯೋಗ ನೈಪುಣ್ಯ ತರಬೇತಿ ಶಿಬಿರವು ಸುಳ್ಯ ತಾಲೂಕಿನಲ್ಲಿ ಯಶಸ್ವಿಯಾಗಿ ಸುಳ್ಯ ಮತ್ತು ವಳಲಂಬೆಯಲ್ಲಿ ನಡೆದಿದೆ. ಇದೀಗ ಮೂರನೇ ಹಂತದ ತರಬೇತಿ ಶಿಬಿರವು ನಡೆಯಲಿದೆ.ಶಿಬಿರದಲ್ಲಿ ಕೃಷಿ...
ಕೊಲ್ಲಮೊಗ್ರು ಗ್ರಾಮ ಪಂಚಾಯತ್ ವತಿಯಿಂದ ಇಂದು ಮಹಾತ್ಮ ಗಾಂಧಿಯವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು. ಸ್ವಚ್ಯೋತ್ಸವ ನಿತ್ಯೋತ್ಸವ ಮಾಸಾಚರಣೆ , ಹಾಗೂ ಸ್ವಚ್ಚತೆಯ ಬಗ್ಗೆ ಪ್ರತಿಜ್ಞಾವಿಧಿ ನೆರವೇರಿಸಲಾಯಿತು. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ರೈತರ ಕಾಮಗಾರಿಗಳ ಕ್ರಿಯಾ ಯೋಜನೆಯ ಅಭಿಯಾನಕ್ಕೆ ಚಾಲನೆ ನೀಡಲಾಯಿತು ಈ ಸಂಧರ್ಭದಲ್ಲಿ ತಾಲೂಕು ಪಂಚಾಯತ್ ಸುಳ್ಯ...
ಐವರ್ನಾಡು ಗ್ರಾಮ ಪಂಚಾಯತ್ ವತಿಯಿಂದ ಗಾಂಧಿ ಜಯಂತಿ ಆಚರಣೆ ಮತ್ತು ಬೃಹತ್ ಸ್ವಚ್ಛತಾ ಅಭಿಯಾನ ಕಾರ್ಯಕ್ರಮವು ಅ.2 ರಂದು ನಡೆಯಿತು.ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಯು.ಡಿ.ಶೇಖರ್ ಸ್ವಾಗತಿಸಿ,ಪ್ರಾಸ್ತಾವಿಕ ಮಾತನಾಡಿದರು.ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಸ್.ಎನ್. ಮನ್ಮಥ ಧ್ವಜಾರೋಹಣ ನೆರವೇರಿಸಿದರು.ನೂರಾರು ಜನರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಭಾರತೀಯ ಜನತಾ ಪಕ್ಷ ಯುವ ಮೋರ್ಚಾ ಮತ್ತು ಭಾರತೀಯ ಜನತಾ ಪಕ್ಷ ಸುಳ್ಯ ನಗರ ಶಕ್ತಿಕೇಂದ್ರದ ವತಿಯಿಂದ ಗಾಂಧಿ ಜಯಂತಿ ಯ ಅಂಗವಾಗಿ ಇಂದು ಸ್ವಚ್ಛ ಭಾರತ್ ಕಾರ್ಯಕ್ರಮವು ಸುಳ್ಯ ಸರಕಾರಿ ಆಸ್ಪತ್ರೆಯ ಆವರಣದಲ್ಲಿ ನೆರವೇರಿತು. ಸುಳ್ಯ ಬಿಜೆಪಿ ಮಂಡಲ ಅಧ್ಯಕ್ಷರಾದ ಶ್ರೀ ಹರೀಶ್ ಕಂಜಿಪಿಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಿಜೆಪಿಯ ಪ್ರಮುಖರು, ಜನಪ್ರತಿನಿಧಿಗಳು ಮತ್ತು...
Loading posts...
All posts loaded
No more posts
